ಮಹಾರಾಷ್ಟ್ರದಲ್ಲಿ 7, ರಾಜಸ್ತಾನದಲ್ಲಿ 9 ಓಮಿಕ್ರಾನ್ ದೃಢ: ದೇಶದಲ್ಲಿ ರೂಪಾಂತರಿ 21 ಕ್ಕೆ ಏರಿಕೆ

ಮುಂಬೈ / ಜೈಪುರ,ಡಿ.5- ಮಹಾರಾಷ್ಟ್ರದಲ್ಲಿ ಇಂದು ಒಂದೇ ಕುಟುಂಬದ ಹೊಸದಾಗಿ ಏಳು ಮಂದಿಗೆ ಹಾಗು ರಾಜಸ್ತಾನದಲ್ಲಿ 9 ಮಂದಿಗೆ ಇಂದು ಕೊರೊನಾ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್ ಪತ್ತೆಯಾಗಿದೆ.

ಇದರೊಂದಿಗೆ ದೇಶದಲ್ಲಿ ಒಟ್ಟು ಒಮಿಕ್ರೋನ್ ಸೋಂಕಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ. ಹೊಸ ರೂಪಾಂತರಿ ಕಾಣಿಸಿಕೊಂಡಿರುವುದು ಮತ್ತಷ್ಡು ಆತಂಕಕ್ಕೆ ಎಡೆಮಾಡಿದೆ

ದಕ್ಷಿಣ ಆಫ್ರಿಕಾದಿಂದ ಬಂದವರ ಪೈಕಿ ಇಂದು 9 ಮಂದಿಗೆ ರಾಜಸ್ತಾನದಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಮೊದಲು ಸೋಂಕು ಕಾಣಿಸಿಕೊಂಡು ಆನಂತರ ಗುಜರಾತ್, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸೋಂಕು ಪತ್ತೆಯಾಗಿತ್ತು ಮಹಾರಾಷ್ಟ್ರದಲ್ಲಿ ಮತ್ತೆ 7.ಮಂದಿಗೆ ಒಮ್ರಿಕಾನ್ ಕಾಣಿಸಿಕೊಂಡಿದ್ದು ಆತಂಕಕ್ಕೆ ಗುರಿ ಮಾಡಿದೆ.

ನೈಜೀರಿಯ ದೇಶದಿಂದ ಪುಣೆ ಬಳಿಯ ಪಿಂಪ್ರಿ ಚಿಂದ್ವಾಡ್ ಬಂದ 44 ವರ್ಷದ ಮಹಿಳೆಯಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದೆ.ಅಲ್ಲದೆ ಮಹಿಳೆಯ ಇಬ್ಬರು ಪುತ್ರಿಯರು, ಮಹಿಳೆಯ ಸಹೋದರ 47 ವರ್ಷದ ವ್ಯಕ್ತಿ ಮತ್ತು ಅವರ ಇಬ್ಬರು ಪುತ್ರಿಯರಿಗೆ ಹೊಸ ರೂಪಾಂತರಿ ಕಾಣಿಸಿಕೊಂಡಿದೆ.

ಇದಕ್ಕೂ ಮುನ್ನ ಮಾಹಿತಿ ನೀಡಿದ್ದ ಮಹಾರಾಷ್ಟ್ರದ ಆರೋಗ್ಯ ಇಲಾಖೆ ಅಧಿಕಾರಿಗಳು ನಾಲ್ಕು ಮಂದಿ ವಿದೇಶದಿಂದ ಬಂದಿದ್ದರು ಇನ್ನುಳಿದವರ ಮೂರು ಮಂದಿ ಅವರ ಹತ್ತಿರದ ಸಂಬಂಧಿಗಳು ಎಂದು ಹೇಳಿದ್ದರು. ಇದೀಗ ಒಂದೇ ಕುಟುಂಬದ ಏಳು ಮಂದಿಗೆ ಹೊಸ ಮಾದರಿಯ ರೂಪಾಂತರ ಸೋಂಕು ಕಾಣಿಸಿಕೊಂಡಿದೆ.

ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 2, ಗುಜರಾತ್ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸಲ ಒಂದು ಸೇರಿದಂತೆ ಐದು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದೀಗ ಹೊಸ ರೂಪದಲ್ಲಿ ಏಳು ಮಂದಿಗೆ ಕಾಣಿಸಿಕೊಂಡಿದೆ ಇದರೊಂದಿಗೆ ದೇಶದಲ್ಲಿ ಒಟ್ಟು ರೂಪಾಂತರಗಳಿಗೆ ಬಾಧಿತರಾದವರ ಸಂಖ್ಯೆ 21 ಕ್ಕೇರಿಕೆ ಆಗಿದೆ.

  • ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುಚ ಒಮಿಕ್ರಾನ್
  • ರಾಜಸ್ತಾನದಲ್ಲಿ 9 ಮಂದಿಗೆ ಸೋಂಕು ಧೃಡ
  • ಮಹಾರಾಷ್ಡ್ರದಲ್ಲಿ ಮಂದಿಗೆ ಹೊಸ ರೂಪಾಂತರ ಪತ್ತೆ
  • ಕರ್ನಾಟಕ ದಲ್ಲಿ 2 ಮತ್ತು ಗುಜರಾತ್ ಹಾಗು ದೆಹಲಿಯಲ್ಲೊ ತಲಾ 1 ಒಮಿಕ್ರಾನ್ ಪತ್ತೆ
  • ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸೋಂಕು