ಮಹಾರಾಜಾ ಅಗ್ರಸೇನ್ ಸೊಸೈಟಿಯಿಂದ ಆಹಾರ ಸಾಮಗ್ರಿ ವಿತರಣೆ

ಹುಬ್ಬಳ್ಳಿ,ಜೂ1: ಮಾಹಾರಾಜಾ ಅಗ್ರಸೇನ ಅರ್ಬನ್ ಕೋ-ಅಪ್ ಕ್ರೆಡಿಟ್ ಸೊಸೈಟಿ ಲಿ., ಹುಬ್ಬಳ್ಳಿ ವತಿಯಿಂದ ಸೊಸೈಟಿಯಲ್ಲಿ ಕರೋನಾ ಸಂಕಷ್ಟ ಸಮಯದಲ್ಲಿ, ಬಡ ಜನರಿಗೆ ಕಿರಾಣಿ ಸಾಮಗ್ರಿಗಳನ್ನು ಹಾಗೂ ಮಾಸ್ಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷರಾದ ಮುಕೇಶ್ ಎಲ್. ಅಗ್ರವಾಲ, ಉಪಾಧ್ಯಕ್ಷರಾದ ಹೇಮಂತ ಎಸ್. ಮೋದಿ, ನಿರ್ದೇಶಕರಾದ ಅಮಿತ ವಿ. ಮಹಾಜನ ಮತ್ತು ಅಶೋಕಕುಮಾರ ಪಿ. ಮಹಾಜನ ಇವರುಗಳು ಉಪಸ್ಥಿತರಿದ್ದು ಬಡ ಜನರಿಗೆ ಕಿರಾಣಿ ಸಾಮಗ್ರಿಗಳನ್ನು ಹಾಗೂ ಮಾಸ್ಕಗಳನ್ನು ವಿತರಿಸಿದರು ಈ ಸಂಧರ್ಭದಲ್ಲಿ ನಿರ್ದೇಶಕರು ಕೊರೋನಾ ಮಹಾಮಾರಿ ತಡೆಗಟ್ಟಲು ಅನುಸರಿಸುವ ಕ್ರಮಗಳ ಕುರಿತು ತಿಳಿಸಿದರು.
ಸೊಸೈಟಿಯು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ಈಗಾಗಲೇ 15 ಜನ ಆಶಾ ಕಾರ್ಯಕರ್ತೆಯರಿಗೆ ತಲಾ ರೂ 3,000-00 ಗಳಂತೆ ಧನ ಸಹಾಯ ಮಾಡಲಾಗಿದೆ, ಅಲ್ಲದೆ ಸೊಸೈಟಿಯ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ ನಿಧಿಗೆ ರೂ 10,000-00 ಗಳನ್ನ ನೀಡಲಾಗಿದೆ.
ಕೊರೋನಾ ಮಹಾಮಾರಿ ತಡೆಗಟ್ಟಲು ಅನುಸರಿಸುವ ಕ್ರಮಗಳು ಮಾಸ್ಕ ಧರಿಸುವದು, ಸ್ಯಾನಿಟೈಸರ್ ಬಳಸುವದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಈ ಪ್ರಕಾರ ತಿಳುವಳಿಕೆ ನೀಡಿ ಕೊರೋನಾ ಸಾಔಕ್ರಾಮಿಕ ರೋಗ ತಡೆಗಟ್ಟುವ ಅಭಿಯಾನ ಮಾಡಲಾಯಿತು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂಧರ್ಭದಲ್ಲಿ ಸೊಸೈಟಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.