ಮಹಾರಾಜರು ಮೆಚ್ಚಿದ ಶಿವಾಜಿ ಸೂರತ್ಕಲ್

ನಟ ,ನಿರೂಪಕ ರಮೇಶ್ ಅರವಿಂದ್  ಅಭಿನಯದ ” ಶಿವಾಜಿ ಸುರತ್ಕಲ್ ”  ದಿ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು 25 ದಿನ ಪೂರ್ಣಗೊಳಿಸಿದೆ. ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಐ ಪಿ ಎಲ್ ನ ಭರದಲ್ಲಿ ಚಿತ್ರಕ್ಕೆ  ಶಿವಾಜಿ ಸೂರತ್ಕಲ್ ಚಿತ್ರಕ್ಕೆ  ಪ್ರೇಕ್ಷಕರು ಕೈ ಹಿಡಿದಿರುವುದು ಚಿತ್ರ ತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ ‌

ಕೆ ಆರ್ ಜಿ ಸ್ಟೂಡಿಯೋಸ್  ಚಿತ್ರ ವಿತರಣೆ ಮಾಡಿದ್ದಾರೆ‌.ಚಿತ್ರದ ಈ ಯಶಸ್ಸಿನ ನಡುವೆ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಹಾಗೂ ನಿರ್ಮಾಪಕ ಅನೂಪ್ ಗೌಡ ಮೈಸೂರಿನ ಮಹಾರಾಜ ಯದುವೀರ್ ಒಡೆಯರ್ ಅವರನ್ನು ಭೇಟಿ ಮಾಡಿದ್ದಾರೆ.

ಮಹಾರಾಜರು ಚಿತ್ರದ ಯಶಸ್ಸನ್ನು ಬಹಳ ಮೆಚ್ಚಿ, ಚಿತ್ರಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ರಮೇಶ್ ಅರವಿಂದ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ನಟ ರಮೇಶ್ ಅರವಿಂದ್ ಅವರಿಗೆ ಶಿವಾಜಿ ಸೂರತ್ಕಲ್ ಚಿತ್ರ ಯಶಸ್ವಿಯಾಗಿರುವುದು ಗೆಲುವಿನ ನಗೆ ಬೀರುವಂತೆ ಮಾಡಿದೆ.ಜೊತೆಗೆ ಚಿತ್ರ ತಂಡ ಯಶಸ್ಸಿಗೆ ಮತ್ತೊಂದು ಗರಿ ಸೇರಿದಂತಾಗಿದೆ. ಚಿತ್ರದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವಕರ್, ರಾಘು ರಾಮನಕೊಪ್ಪ  ಸೇರಿದಂತೆ ಹಿರಿ‌ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.