ಮಹಾರಥೋತ್ಸವ ಪೂರ್ವಭಾವಿ ಸಭೆ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.03: ಸುಕ್ಷೇತ್ರ ಸೋಮಲಾಪುರ ಗ್ರಾಮದ ಆರಾಧ್ಯದೈವ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಮಹಾರಥೋತ್ಸವ ಮತ್ತು ಸರ್ವ ಧರ್ಮ ಸಾಮೂಹಿಕ ವಿವಾಹಗಳು ಏಪ್ರಿಲ್ 10 ರಂದು ವಿಜೃಂಭಣೆಯಿಂದ ಜರುಗಿಸಲಾಗುವುದು ಎಂದು ಶ್ರೀ ಸದ್ಗುರು ಷಡಕ್ಷರಿ ಮಹಾಸ್ವಾಮಿ ಅವಧೂತರು ಹೇಳಿದರು.
ಪಟ್ಟಣ ಸಮೀಪದ ಸುಕ್ಷೇತ್ರ ಸೋಮಲಾಪುರ ಗ್ರಾಮದ ಆರಾಧ್ಯದೈವ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಮಠದ ಆವರಣದಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ  ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಮಹಾರಥೋತ್ಸವ ಮತ್ತು ಸರ್ವ ಧರ್ಮ ಸಾಮೂಹಿಕ ವಿವಾಹ ನಡೆಸಲಿರುವ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿದರು.
ಸಕಲ ಸದ್ಭಕ್ತರ ನಡುವೆ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಮಹಾರಥೋತ್ಸವ ಮತ್ತು ಸರ್ವ ಧರ್ಮ ಸಾಮೂಹಿಕ ವಿವಾಹಗಳ ಅದ್ದೂರಿಯಾಗಿ ಜರುಗಿಸಲು ಸ್ವಸ್ಥಳ ಮತ್ತು ಪರಸ್ಥಳದಿಂದ ತಾವೆಲ್ಲ ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ದರ್ಶನ ಪಡೆದು ಪುನೀತರಾಗಬೇಕೆಂದು ಶ್ರೀಗಳು ಕರೆ ನೀಡಿದರು.
ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಮಹಾರಥೋತ್ಸವ ಮತ್ತು ಸರ್ವ ಧರ್ಮ ಸಾಮೂಹಿಕ ವಿವಾಹಗಳ ಅದ್ದೂರಿಯಾಗಿ ಜರುಗಿಸಲು ಸೋಮಲಾಪುರ ಗ್ರಾಮದ ಸಕಲ ಸದ್ಭಕ್ತರ ಪ್ರೋತ್ಸಾಹ ತುಂಬಾ ಮುಖ್ಯ ಪರಸ್ಥಳದಿಂದ ಬಂಧನ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥಿತವಾಗಿ ಬರಮಾಡಿಕೊಳ್ಳಿ ಎಂದರು.
ಜಾತ್ರೆಗೆ ಆಗಮಿಸಿದ ಎಲ್ಲ ಸಕಲ ಸದ್ಭಕ್ತರಿಗೆ ಶ್ರೀಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ ಪ್ರಸಾದ ಸ್ವೀಕರಿಸಿ ಭಕ್ತರು ಕೃಪೆಗೆ ಪಾತ್ರರಾಗಬೇಕು ಎಂದರು.
ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು, ರಸ್ತೆಗಳ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಎರಡು ದಿನಗಳ ಕಾಲ ಜರುಗುವ ಜಾತ್ರಾ ಮಹೋತ್ಸವಕ್ಕೆ ವಿದ್ಯುತ್ ಕಡಿತ ಗೊಳ್ಳಿಸದೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿದ್ಯುತ್ ಇಲಾಖೆ ಕುರುಗೋಡು ಇವರು ಕ್ರಮತೆಗೆದುಕೊಳ್ಳಬೇಕು ಎಂದರು.
ಯಾವುದೇ ಅಹಿತಕರ ಘಟನೆ ಜರುಗದಂತೆ ಕುರುಗೋಡು ಪೊಲೀಸ್ ಠಾಣೆ ವತಿಯಿಂದ ಬಿಗಿ ಭದ್ರತೆ ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಸೋಮಲಾಪುರ ಗ್ರಾಮದ ಮೇಟಿಯ ವಾರು ಮುಖಂಡರು, ಗ್ರಾಮಸ್ಥರು, ಯುವಕರು ಇದ್ದರು

One attachment • Scanned by Gmail