ಮಹಾಯೋಗಿ ವೇಮನ ಜಯಂತಿ

ಲಿಂಗಸೂಗೂರ,ಜ.೧೭- ಮಹಾಯೋಗಿ ವೇಮನ ಜಯಂತಿಯನ್ನು ಜ.೧೯ರಂದು ಬೆಳಗ್ಗೆ ೧೦.೩೦ಕ್ಕೆ ತಾಲೂಕು ಆಡಳಿತ ವತಿಯಿಂದ ಆಚರಿಸಲಾಗುವುದು ಎಂದು ಸಮಾಜದ ಹಿರಿಯ ಬಸವಂತ್ರಾಯ ಕುರಿ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಡಿ.ಎಸ್ ಹೂಲಗೇರಿ ಉಪನ್ಯಾಸಕರಾಗಿ ಸಿ.ಬಿ ಚಿಲ್ಕರಾಗಿ ಹಾಗೂ ಹಿರಿಯ ಮುಖಂಡರು ಭಾಗವಹಿಸಿಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಭೂಪನಗೌಡ ಪಾಟೀಲ್, ಶರಣಪ್ಪ ಮೇಟಿ, ಬಸವರಾಜ ಗಣೇಕಲ್, ಬಸವರಾಜ ಇದ್ದರು.