ಮಹಾಮುನಿ ಸ್ವಾಮಿ ಮಠದಲ್ಲಿ ಹೊರಾಂಗಣಕ್ಕೆ ಭೂಮಿ ಪೂಜೆ

ಸಿರವಾರ,ಆ.೦೬-ಪಟ್ಟಣದ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಮಹಾಮುನಿ ಸ್ವಾಮಿ ಮಠದ ಭಕ್ತರ ಅನೇಕ ದಿನಗಳ ಮಠದ ಹೊರಾಂಗಣದ ಆಶೆಯನ್ನು ಈಡೇರಿಸಲು ಮಾನವಿ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಪರಿಶ್ರಮದಿಂದ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಸುಮಾರು ೪ಲಕ್ಷ ರೂಗಳ ವೆಚ್ಚದಲ್ಲಿ ಸುಂದರವಾದ ಹೊರಾಂಗಣ ನಿರ್ಮಾಣಕ್ಕೆ ಭೂಮಿ ಪೂಜೆ ನರವೇರಿಸಲಾಯಿತು.
ಬಹುವರ್ಷಗಳಿಂದ ಮಹಾಮುನಿ ಸ್ವಾಮಿ ಮಠಕ್ಕೆ ತಾಲೂಕಿನ ಸುತ್ತ-ಮುತ್ತಲಿನ ಭಕ್ತರು ಬಂದು ಮಠದಲ್ಲಿ ಆರಾಧನೆ, ಪೂಜೆಯಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಆದರೆ ಸುರಕ್ಷಿತ ಸ್ಥಳದ ಕೊರತೆಯಿಂದ ಅನುಭವಿಸುತ್ತಿರುವ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲು ಕೂಡಲೆ ಸ್ಪಂಧಿಸಿ ದೇವಸ್ಥಾನದ ಜೀಣೋದ್ದಾರಕ್ಕಾಗಿ ಸುಂದರವಾದ ಹೊರಾಂಗಣಕ್ಕೆ ಚಾಲನೆ ನೀಡಿದ ಪರಿಣಾಮ ಭಕ್ತರು ಹರ್ಷವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಠದ ಅರ್ಚಕರಾದ ಸಿದ್ದಯ್ಯ ಸ್ವಾಮಿ, ಮುದ್ದಯ್ಯ ಸ್ವಾಮಿ, ಆನಂದಯ್ಯ ಸ್ವಾಮಿ, ಅಯ್ಯಣ್ಣ ಸ್ವಾಮಿ, ಪುತ್ತಪ್ಪ ಇಂಜಿನೀಯರ್, ಜೆಡಿಎಸ್ ಪಕ್ಷದ ತಾಲೂಕ ಪ್ರಧಾನ ಕಾರ್ಯದರ್ಶಿ ದಾನಪ್ಪ, ಪ.ಪಂ ಸದಸ್ಯ ಮಲ್ಲಪ್ಪ ಕಜ್ಜಿ, ಮೌನೇಶ ಬೈನರ್, ಯೇಸುಮಿತ್ರ ಮಚ್ಚಿ, ದೇವಪುತ್ರ ಚಿಟ್ಟಿ, ಹನುಮೇಶ ಜಾಗಟಗಲ್, ಹನುಮಂತ ಗಣದಿನ್ನಿ, ರಾಜು ಬೂದಿನಾಳ ಸೇರಿದಂತೆ ಮಠದ ಭಕ್ತರು ಇದ್ದರು.