ಮಹಾಮಾರಿ ಕೊರೋನಾಕ್ಕೆ ಎಎಸ್‍ಐ ಪಂಚಕಟ್ಟಿ ಬಲಿ

ಕಲಬುರಗಿ.ಮೇ.15:ಮಹಾಮಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದ ನಗರದ ಚೌಕ್ ಪೋಲಿಸ್ ಠಾಣೆಯ ಎಎಸ್‍ಐ ಮಲ್ಲಿಕಾರ್ಜುನ್ ಪಂಚಕಟ್ಟಿ ಅವರು ನಿಧನರಾಗಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಮಲ್ಲಿಕಾರ್ಜುನ್ ಪಂಚಕಟ್ಟಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಘಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು ಎಂದು ತಿಳಿದುಬಂದಿದೆ.
ಮಲ್ಲಿಕಾರ್ಜುನ್ ಪಂಚಕಟ್ಟಿ ಅವರು ಕಳೆದ 60 ವರ್ಷಗಳಿಂದಲೂ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಜೂನ್ 30ರಂದು ಸೇವಾ ನಿವೃತ್ತಿಯನ್ನು ಹೊಂದಲಿದ್ದರು. ಆದಾಗ್ಯೂ, ಕೋವಿಡ್ ಅವರನ್ನು ಬಲಿ ಪಡದಿದೆ.
ಇಲಾಖೆಯಲ್ಲಿ ಎಲ್ಲರೊಂದಿಗೂ ಅನೋನ್ಯವಾಗಿದ್ದು, ಲಾಕ್‍ಡೌನ್ ಸಮಯದಲ್ಲಿಯೂ ಸಹ ಕರ್ತವ್ಯ ನಿರ್ವಹಿಸಿದ್ದರು.