ಮಹಾಮನೆಯಲ್ಲಿ ಅಕ್ಕಮಹದೇವಿ ಜಯಂತಿ ಅಚರಣೆ

ಚಾಮರಾಜನಗರ, ಏ. 09:- ಕನ್ನಡದ ಮೊದಲ ಮಹಿಳಾ ವಚನಕಾರ್ತಿ, ವೈರಾಗ್ಯ ಮೂರ್ತಿ, ಅಕ್ಕಮಹದೇವಿ ಅವರ ಜಯಂತಿಯನ್ನು ಮಹಾಮನೆಯಲ್ಲಿ ಆಚರಣೆ ಮಾಡಲಾಯಿತು.
ನಗರದ ಮಹಾಮನೆಯಲ್ಲಿ ಅಕ್ಕಮಹದೇವಿ ಅವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಗಣ್ಯರು ಪುಷ್ಪ ನಮನ ಸಲ್ಲಿಸಿದರು. 12ನೇ ಶತಮಾನದಲ್ಲಿ ಅಕ್ಕಮಹದೇವಿ ಅವರು ಮಹಿಳೆಯರ ಸಮಾನತೆಯ ಸ್ಪೂರ್ತಿಯಾಗಿ ಅನುಭವ ಮಂಟಪದಲ್ಲಿ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿ, ನಾಡಿಗೆ ಹೆಮ್ಮೆ ತಂದಿದ್ದರು ಎಂದು ಗಣ್ಯರು ಸ್ಮರಿಸಿದರು.
ಬಳಿಕ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಮಹಿಳಾ ಉಪಾಧ್ಯಕ್ಷೆ ಮಾದಲಾಂಬಿಕೆ ಮಾತನಾಡಿ, ಅಕ್ಕಮಹದೇವಿ ಅವರು ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಅವರ ಹೆಸರೇ ಮಾರ್ಗದರ್ಶಕರು ಮ್ತು ಸ್ಪೂರ್ತಿ 12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಹೋರಾಟ ಮಾಡಿದ ಅಕ್ಕಮಹದೇವಿ ಅವರು ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು.. ಸಾಕ್ಷಾತ್ ಶಿವ (ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಮಾದರಿಯಾಗಿದ್ದಾರೆ ಎಂದರು.
ಶರಣೆ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮವಾಗಿದ್ದು, ಅಕ್ಕ ಮಹದೇವಿ ಅವರ ಜನ್ಮ ಸ್ಥಳವಾಗಿರುವುದರಿಂದ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿಯೂ ಪ್ರಸಿದ್ದಿ ಪಡೆದುಕೊಂಡಿದೆ ಎಂದರು.
ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಅವರ ಇಡೀ ಜೀವನ ಕಥನ ಐತಿಹ್ಯಗಳಿಂದ, ವಿಸ್ಮಯಗಳಿಂದ, ಪ್ರಭಾವಳಿಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ; ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ‘ಮಹಾದೇವಿಯಕ್ಕಗಳ ರಗಳೆ’ಮತ್ತು ಸ್ವತಹ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ , ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ .ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವಪೂರ್ಣವಾದ, ನುಡಿ, ನಡೆಗಳೊಂದಾದ ಪರಿಯಲ್ಲಿರುವುದು ಕಂಡು ಬರುತ್ತದೆ ಎಂದರು.
ಕನ್ನಡ ಸಾಹಿತ್ಯ ಮೊದಲ ಕವಯತ್ರಿ ಮತ್ತು ವಚನಗಾರ್ತಿ, ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರು. “ಚನ್ನಮಲ್ಲಿಕಾರ್ಜುನ” ಎಂಬುದು ಅವರು ವಚನಗಳ ಅಂಕಿತ ನಾಮವಾಗಿತ್ತು. ಅವರ ತತ್ವ ಅದರ್ಶಗಳನ್ನು ನಾವೆಲ್ಲು ಮೈಗೂಡಿಸಿ, ಉತ್ತಮ ಸಮಾಜ ವನ್ನು ನಿರ್ಮಾಣ ಮಾಡಲು ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿದರು. ಉಪಾಧ್ಯಕ್ಷ ಮಹದೇವಸ್ವಾಮಿ ಐಟಿಐ, ಕಾರ್ಯದರ್ಶಿ ಅರ್ಕಪ್ಪ, ಖಜಾಂಚಿ ಮಹದೇವಸ್ವಾಮಿ, ಸಂಗಮ ಗೃಹ ನಿರ್ಮಾಣ ಸಂಘದ ಗೌರವ ಕಾರ್ಯದರ್ಶಿ ಮಹದೇವಸ್ವಾಮಿ, ದೊಡ್ಡರಾಯಪೇಟೆ ಕುಮಾರ್, ನಾಗರಾಜು, ಗೌರಿಶಂಕರ್, ಯೋಗೇಶ್, ಶಶಿಧರ್, ನಂಜುಂಡಸ್ವಾಮಿ, ಬಸವರಾಜಪ್ಪ, ಮಹೇಂದ್ರ, ನಾಗರಾಜು, ನಾಗಣ್ಣ, ಶ್ರೀಕಂಠ, ಲಿಂಗರಾಜಮೂರ್ತಿ, ಮೊದಲಾವರು ಇದ್ದರು.