ಮಹಾಬಲೇಶ್ವರ ಅವರ ಪೋಟೋ ಹಾಕಿ
ನಾಡಿದ್ದು “ಕಾಟ್ರಹಳ್ಳಿ ಎಂಬ ಮಹಾಬಲ” ಸಂಸ್ಮರಣ ಗ್ರಂಥ ಬಿಡುಗಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,29- ವಿಜಯನಗರ ಜಿಲ್ಲೆ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಶ್ರೀ.ಶಿವಶಂಕರಸ್ವಾಮಿ ಸಂಸ್ಥಾನ ಮಠದಲ್ಲಿ ನಾಡಿದ್ದು ಜು 31 ರಂದು ಬೆಳಿಗ್ಗೆ 10 30 ಕ್ಕೆ  “ಕಾಟ್ರಹಳ್ಳಿ ಎಂಬ ಮಹಾಬಲ” ಎಂಬ ಸಂಸ್ಮರಣಾ ಕೃತಿ‌ ಬಿಡುಗಡೆ ಸಮಾರಂಭವನ್ನು ಮಹಾಬಲೇಶ್ವರ ಕಾಟ್ರಹಳ್ಳಿ ಸಂಸ್ಮರಣಾ ಸಮಿತಿ ಇದನ್ನು ಆಯೋಜಿಸಿದೆ.
ಮಠದ ಸೋಮಶಂಕರ ಸ್ವಾಮಿಗಳ ಸಾನಿಧ್ಯದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು. ಹಿರಿಯ ಸಾಹಿತಿ ಅಲ್ಲಮಪ್ರಭು  ಬೆಟ್ಟದುರು ಅವರು  ಗ್ರಂಥ ಬಿಡುಗಡೆ ಮಾಡಲಿದ್ದಾರೆ.
ಸಂಸ್ಮರಣಾ ಸಮಿತಿಯ ಅಧ್ಯಕ್ಷ ಜಿ.ವೀರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಂಥವನ್ನು ಲೇಖಕ ಎಂ.ಎಂ.ಶಿವಪ್ರಕಾಶ್ ಪರಿಚಯಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾನಿಪ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಕಾಸಪ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಗಣ್ಯರು ಸಾಹಿತಿಗಳು, ಲೇಖಕರು ಆದ  ಹೊ.ಮ.ಪಂಡಿತಾರಾಧ್ಯ, ಆನಂದ್ ಋಗ್ವೇದಿ, , ಮಲ್ಲಿಕಾರ್ಜುನ ಕಡಕೋಳ, ಡಾ.ಕೆ.ರುದ್ರಪ್ಪ, ಕೆ.ಸೋಮಶೇಖರ, ವೆಂಕಟಯ್ಯ ಅಪ್ಪಗೆರೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಮಹಾಬಲೇಶ್ವರ ಕಾಟ್ರಳ್ಳಿ ಅವರು ಉತ್ತಂಗಿ ಗ್ರಾಮದವರಾಗಿದ್ದು, ಹೆಚ್ಚುಕಾಲ ಪ್ರಜಾವಾಣಿಯಲ್ಲಿ, ನಂತರ ಏಷ್ಯನ್ ಏಜ್, ಈ ಟಿವಿ ಸೇರಿದಂತೆ  ಅನೇಕ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದರು. ಸ್ವತಹ ದಿನ‌ಬಿಟ್ಟು ದಿನ ಎಂಬ ಪತ್ರಿಕೆ ಆರಂಭಿಸಿದ್ದರು. ಇಂಗ್ಲೀಷ್ ಭಾಷೆಯ ಮೇಲೆ ಹಿಡಿತಹೊಂದಿದ್ದ ಅವರು.  ಇಂಗ್ಲೀಷ್ ನ ಲೇಖನಗಳನ್ನು  ಕನ್ನಡಕ್ಕೆ ಅನುವಾದ ಮಾಡುವಲ್ಲಿ ನಿಷ್ಣಾತರಾಗಿದ್ದರು. ಪ್ರಬುದ್ದ ಬರಹಗಾರರಾಗಿದ್ದ ಅವರು ತಮ್ಮ‌ಕೊನೆಯ ದಿನವನ್ನು ಉತ್ತಂಗಿತಲ್ಲಿಯೇ ಕಳೆದರು.
ಅವರನ್ನು ಸ್ಮರಿಸಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.