ಮಹಾಪ್ರಬಂಧಕ್ಕೆ ಶಶಿಕಲಾರಿಗೆ ಪಿಎಚ್‍ಡಿ ಪದವಿ

ವಿಜಯಪುರ, ಮಾ.30-ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶ್ರೀಮತಿ ಶಶಿಕಲಾ ಅವರು ಸಲ್ಲಿಸಿದ್ದ ಎ ಸ್ಟಡಿ ಆಫ್ ಏಮೋಶನಲ್ ಅಡ್ಜಸ್ಟಮೆಂಟ್, ಸೆಲ್ಫ್‍ಕಾನ್ಸೆಪ್ಟ್, ಸೋಶಿಯೋ ಎಕಾನಾಮಿಕ್ ಸ್ಟೇಟಸ್ ಇನ್ ರಿಲೇಶನ್ ಟು ಅಕ್ಯಾಡೆಮಿಕ್ ಪರ್‍ಫಾರಮೆನ್ಸ್ ಆಫ್ ಹೈಯರ್ ಸೆಕೆಂಡರಿ ಸ್ಕೂಲ್ ಗರ್ಲ್ ಸ್ಟೂಡೆಂಟ್ಸ ಆಫ್ ಹೈದ್ರಾಬಾದ್ ಕರ್ನಾಟಕ ರೀಜನ್ ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‍ಡಿ ಪದವಿ ನೀಡಿದೆ.
ಶ್ರೀಮತಿ ಶಶಿಕಲಾ ಅವರು ಶಿಕ್ಷಣ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿಷ್ಣು.ಎಂ.ಶಿಂದೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಕೊಂಡಿದ್ದರು.
ಡಾಕ್ಟರೇಟ್ ಪದವಿ ಪಡೆದಿರುವ ರೂಪಾ ಎಸ್ ಜೊಗಳೇಕರ್ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್.ಕೆ. ಅಭಿನಂದಿಸಿದ್ದಾರೆ.