ಮಹಾನ ನಾಯಕರ ಹೆಸರಿನಲ್ಲಿ ಗ್ರಾಮಗಳ ಉದ್ದಾರ ಮಾಡುವ ದಾರಿ ಕಂಡುಕೊಳ್ಳಿ: ದುಂಡಪ್ಪ ಬಡಿಗೇರ

ತಿಕೋಟಾ, ಏ.17-ಕಳ್ಳುಬಳ್ಳಿ ಚಾರಿಟೇಬಲ್ ಟ್ರಸ್ಟ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ ಅವರ ಜನ್ಮ ಪ್ರಯುಕ್ತ ಲಾಕ್‍ಡೌನ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಡಾ.ಎಂ. ಚಂದ್ರಪೂಜರಿ ನಿವೃತ್ತ ಪ್ರಾಧ್ಯಾಪಕರು ಅಭಿವೃದ್ದಿ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಬರೆದ ಲಾಕ್‍ಡೌನ್ ಪುಸ್ತಕವನ್ನು ಡಾ. ಬಿ.ಆರ್. ಅಂಬೇಡ್ಕರ ಅವರ 130ನೇ ಜನ್ಮದಿನದಂದು ಸರಳವಾಗಿ ಆಚರಿಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಗ್ರಾಮದ ಹಿರಿಯರಾದ ರಾಯಪ್ಪ ಗುಡಿಗೇನವರ ಮಹಾದೇವ ಗುದಿಗೆನ್ನವರ ರಾಮನಿಂಗ ನಡುವಿನಕೇರಿ, ಗೋವಿಂದ ಡೊಳ್ಳಿ, ಯಮನಪ್ಪ ಬಡಿಗೇರ, ಚಂದ್ರು ಬಡಿಗೇರ, ಪರಸಪ್ಪ ಬಡಿಗೇರ, ಇವರು ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸಿದರು. ತದನಂತರ ಡಾ. ಎಂ. ಚಂದ್ರಪೂಜಾರಿ ಅವರು ಬರೆದ ಲಾಕ್‍ಡೌನ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಇಂದು ಮಹಾನ ನಾಯಕರ ಹೆಸರಿನಲ್ಲಿ ಓಣಿಗೆ ನಾಲ್ಕು ಸಂಘಗಳನ್ನು ಕಟ್ಟಿ ಕೆಲವರನ್ನು ಪೀಡಿಸುವುದಕ್ಕಿಂತ ಊರಿನ ಎಲ್ಲಾ ಸಮುದಾಯವರನ್ನು ಕೂಡಿಸಿಕೊಂಡು ಗ್ರಾಮವನ್ನು ಉದ್ದಾರ ಮಾಡುವ ದಾರಿಯನ್ನು ಕಂಡುಕೊಳ್ಳಬೇಕಿದೆ. ಅದಕ್ಕಾಗಿ ಅವರ ಭಾವಚಿತ್ರಗಳ ರಾಜಕೀಯವನ್ನು ತೊರೆದು ಅವರ ವಿಚಾರಗಳ ಆಧಾರದ ಮೇಲೆ ಆದರ್ಶ ರಾಜಕೀಯ ಇಂದಿನ ತುರ್ತು ಇದೆ ಎಂದು ದುಂಡಪ್ಪ ಬಡಿಗೇರ ಪ್ರಸ್ತಾವಿಕವಾಗಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ ಅವರು ಮಹಿಳೆಯರ ಹಕ್ಕಿನ ವಿಷಯದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟವರು. ಮಹಿಳಾ ಹಕ್ಕುಗಳ ಬಗ್ಗೆ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ತೆ ಹಾಗೂ ಬಲಪಂಥಿಯ ವಿಚಾರಗಳು ಇಂದಿಗೂ ಬದಲಾವಣೆ ಮಾಡಿಕೊಳ್ಳದೆ ಇರುವುದು ಅತ್ಯಂತ ನೋವಿನ ಸಂಗತಿ ಎಂದು ಕಳ್ಳುಬಳ್ಳಿ ಟ್ರಸ್ಟಿನ ಕಾರ್ಯದರ್ಶಿ ಕಲ್ಮೇಶ ಗುದಿಗೆನ್ನವರ ವಿಷಾದ ವ್ಯಕ್ತಪಡಿಸಿದರು.
ಅಸ್ಪøಷ್ಯರನ್ನು ಒಳಗೊಂಡು ಇಂದು ಎಲ್ಲಾ ಜನರು ರೂ. 20 ಗಳಲ್ಲಿ ಬದುಕುತ್ತಿದ್ದಾರೆ. ಅವರಿಗೆ ಕಾಲಕ್ಕೆ ಸರಿಯಾಗಿಉದ್ಯೋಗ ಸಿಗುವುದು. ಕೂಲಿ ಸಿಗುವುದು. ಶೌಚಾಲಯ ವ್ಯವಸ್ತೆ ರೇಷನ ವ್ಯವಸ್ಥೆ ಸಿಗುವುದು ಗಗನ ಕುಸುಮವಾಗಿದೆ. ಎನನ್ನೂ ಪೂರ್ವ ವ್ಯವಸ್ಥೆ ಮಾಡದೇ, ಸ್ವಲ್ಪವೂ ಕಾಲಾವಕಾಶ ನೀಡದೇ ಲಾಕ್‍ಡೌನ ಹೇರಿದ್ದರಿಂದ ವಲಸೆ ಕಾರ್ಮಿಕರು, ಮೂರು ಹೊತ್ತಿನ ಊಟವನ್ನು ದುಡಿದು ತಿನ್ನುವ ಬಡವರಿಗೆ ಹೆಚ್ಚು ಕಷಟ ಕೊಟ್ಟಂತಾಯಿತು. ಸರಕಾರ ತನ್ನ ಎಲ್ಲಾ ಜವಬ್ದಾರಿಗಳಿಂದ ದೂರವಾಗುತ್ತಿದೆ. ಖಾಸಗೀಕರಣ ಇನ್ನೂ ಹೆಚ್ಚಿನ ಅಪಾಯವನ್ನು ತರಲಿದೆ ಎಂದು ಸಚಿನ ಡೊಳ್ಳಿ ಲಾಕಡೌನ ಪುಸ್ತಕವನ್ನು ಕುರಿತು ಮಾತನಾಡಿದರು.
ಅನುಪ್ರಿಯಾ ತೊರವಿ ಹಾಗೂ ರಾಜೇಶ ಪಾರ್ಸೆ ಇವರು ಡಾ. ಬಿ.ಆರ್. ಅಂಬೇಡ್ಕರರ ಜೀವನ ಚರಿತ್ರೆಯನ್ನು ಹಂಚಿಕೊಂಡರು. ಸ್ನೇಹಾ ಕಾಂಬಳೆ ಅಂಬೇಡ್ಕರ ಅವರ ಸ್ಥೂತಿ ಪಠಿಸಿದರು.
ಕಾರ್ಯಕ್ರಮದಲ್ಲಿ ಕಳ್ಳುಬಳ್ಳಿ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಗಜಾನಂದ ಕಡೆಬಾಗಿಲ, ಉಪಾಧ್ಯಕ್ಷ ರಾಹುಲ ಗುದಿಗೆನ್ನವರ, ಸದಸ್ಯರಾದ ರಾಹುಲ ನಡುವಿನಮನಿ, ರಾಕೇಶ ದೊಡಮನಿ, ಮಹೇಸ ದೊಡಮನಿ, ಶಿವಾನಂದ ಬಡಿಗೇರ, ವಿಲಾಸ ನಡುವಿನಮನಿ ಭಾಗವಹಿಸಿದ್ದರು.