ಮಹಾನ್ ಹುತಾತ್ಮ ಬಿಡುಗಡೆಗೆ ಸಿದ್ದ

“ಮಹಾನ್ ಹುತಾತ್ಮ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅತೀ ಹೆಚ್ಚು ಬಜೆಟ್ ವುಳ್ಳ ಕಿರುಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಾಗರ್ ಪುರಾಣಿಕ್ ಕಿರುಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ

ನಿರ್ಮಾಪಕ ಮತ್ತು ನಾಯಕ ಅಕ್ಷಯ್ ಚಂದ್ರಶೇಖರ್ ಮಾತನಾಡಿ,ಮೂರು ವರ್ಷದ ಕನಸಿದು. ಮೊದಲಿಂದಲೂ ಭಗತ್ ಸಿಂಗ್ ಅಭಿಮಾನಿ ಅವರ ಕುರಿತು ಸಿನಿಮಾ ಮಾಡುವ ಆಲೋಚನೆ ಇತ್ತು. ಅಂದಿನಿಂದ ಶುರುವಾಗಿದ್ದ ಜರ್ನಿಗೆ ಸಾಗರ್ ಜತೆಯಾದರು. ಸಿನಿಮಾ ಬದಲಿಗೆ ಮೊದಲು 80 ಸಾವಿರ ಬಜೆಟ್ ನಲ್ಲಿ ಕಿರುಚಿತ್ರ ಮಾಡುವ ಆಲೋಚನೆ ಹಾಕಿಕೊಂಡೆವು.

ಸೈನಿಕ ಮತ್ತು ಭಗತ್ ಸಿಂಗ್ ಪಾತ್ರದಲ್ಲಿ ಕಿರುಚಿತ್ರದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಲೋಚನೆಯೂ ಇದೆ ಎಂದರು.

ಚಿತ್ರದಲ್ಲಿ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಅಚಿಂತ್ಯ ಮಂಗಳೂರು ಮೂಲದ ಅದ್ವಿತಿ ಶೆಟ್ಟಿ ದುರ್ಗಾ ಬಾಬಿ ಪಾತ್ರದಲ್ಲಿ ನಟಿಸಿದ್ದಾರೆ. ಐತಿಹಾಸಿಕ ಚಿತ್ರ ಮಾಡುವ ಆಸೆ ಇತ್ತು. ಅದನ್ನು “ಮಹಾನ್ ಹುತಾತ್ಮ” ಮೂಲಕ ಈಡೇರಿಸಿಕೊಂಡಿದ್ದೇನೆ ಎಂದರು.

ನಿರ್ದೇಶಕ ಸಾಗರ್, ನಿರ್ದೇಶನದ ಜತೆಗೆ ಚಂದ್ರಶೇಖರ್ ಆಜಾದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಡಿಮೆ ಬಜೆಟ್ ನಲ್ಲಿ ಮಾಡಬೇಕೆಂದುಕೊಂಡಿದ್ದ ಕಿರುಚಿತ್ರವಿದು. ದೊಡ್ಡ ಮಟ್ಟದಲ್ಲಿ ಸಿದ್ಧವಾಗಿದೆ. ಸರಿ ಸುಮಾರು 25 ಲಕ್ಷ ಇದಕ್ಕೆ ಖರ್ಚಾಗಿದೆ. ಸ್ವಾತಂತ್ರ್ಯ ಪೂರ್ವದ ಶೈಲಿಯ ಕಟ್ಟಡ ಬೇಕಿತ್ತು. ಮಲ್ಲೇಶ್ವರದ ಕಾಲೇಜನ್ನು ಬಳಸಿಕೊಂಡಿದ್ದೇವೆ ಎಂದರು.

ತುರಹಳ್ಳಿಯ ಅರಣ್ಯದಲ್ಲಿ ಶೂಟ್ ಮಾಡಿದ್ದೇವೆ. ಕಿರುಚಿತ್ರಕ್ಕೆ ಅಮೆರಿಕಾ, ಲಖನೌ, ಜೈಪುರ, ಹಾಲಿವುಡ್ ಸಿಲ್ವರ್ ಸ್ಕ್ರೀನ್, ಪುಣೆ ಇಂಟರ್ ನ್ಯಾಶನಲ್, ಚಿತ್ರ ಭಾರತಿ, ಇಂಡೋ ಗ್ಲೋಬಲ್, ಲೇಕ್ ಸಿಟಿ, ಕಿಟಾಕ್ ಹೀಗೆ 20ಕ್ಕೂ ಅಧಿಕ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ಪಡೆದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕಿರುಚಿತ್ರ ಎಂಬ ಹೆಮ್ಮೆಯೂ ನಮಗಿದೆ ಎಂದು ಸಂತಸ ಹಂಚಿಕೊಂಡರು.

ಚಿತ್ರದಲ್ಲಿ ವರುಣ್ ಶ್ರೀನಿವಾಸ್ ,ಅಭಿಲಾಷ್ ಕಲಾತಿ ಛಾಯಾಗ್ರಹಣವಿದೆ. ಅಕ್ಷಯಚಂದ್ರಶೇಖರ್, ಹಿರಿಯ ನಟ ಶ್ರೀನಾಥ್, ಸಾಗರ್ ಪುರಾಣಿಕ್, ಅದ್ವಿತಿ ಶೆಟ್ಟಿ, ಅಚಿಂತ್ಯ ಪುರಾಣಿಕ್, ವರುಣ್ ಶ್ರೀನಿವಾಸ್, ಕುಲ್ದೀಪ್, ಮನೋಜ್, ಶಶಿಕುಮಾರ್, ಪೀಟರ್ ಮುಖ್ಯಭೂಮಿಕೆಯಲ್ಲಿದ್ದಾರೆ.