ಮಹಾನ್ ನಟಿ ’ಮದರ್ ಇಂಡಿಯಾ’ ದ ನರ್ಗೀಸ್ ರ ೪೦ ನೇ ಪುಣ್ಯತಿಥಿ

ಸಂಜಯ್ ದತ್ತ್ ಅವರ ತಾಯಿ, ಸುನೀಲ್ ದತ್ತ್ ಅವರ ಪತ್ನಿ ಪ್ರಖ್ಯಾತ ನಟಿ ನರ್ಗೀಸ್ ದತ್ತ್ ೧೯೮೧ರ ಮೇ ೩ರಂದು ನಿಧನರಾಗಿದ್ದರು. ನಿನ್ನೆ ಅವರ ೪೦ನೇ ಪುಣ್ಯತಿಥಿ .ಅವರ ನಿಧನ ಕ್ಯಾನ್ಸರ್ ನಿಂದ ಆಗಿತ್ತು. ನರ್ಗೀಸ್ ದತ್ತ್ ಅವರು ಜನಿಸಿದ್ದು ೧ಜೂನ್ ೧೯೨೯ ರಂದು.
ಸುನೀಲ್ ದತ್ತ್ ರ ಜೊತೆಗೆ ನರ್ಗೀಸ್ ರ ಪ್ರೇಮ ಕಥೆ ತುಂಬಾ ಕುತೂಹಲಕಾರಿಯಾದುದು. ಇವರಿಬ್ಬರು ೧೯೫೭ ರಲ್ಲಿ ಬಂದಿರುವ ಫಿಲ್ಮ್ ಮದರ್ ಇಂಡಿಯಾದಲ್ಲಿ ತಾಯಿ-ಮಗನ ಪಾತ್ರವನ್ನು ನಿರ್ವಹಿಸಿದ್ದರು.ಆದರೆ ಅಸಲಿ ಬದುಕಿನಲ್ಲಿ ಅವರು ಅನಂತರ ಪತಿ-ಪತ್ನಿಯರು ಎನಿಸಿಕೊಂಡರು.
ನರ್ಗೀಸ್ ಯಾವಾಗಲು ಸುನೀಲ್ ದತ್ತ್ ರನ್ನು ಮದರ್ ಇಂಡಿಯಾದ ಅವರ ಪಾತ್ರವಾದ ’ಬಿರ್ಜೂ’ ಹೆಸರಿನಿಂದಲೇ ಕರೆಯುತ್ತಿದ್ದರು.


ಸುನೀಲ್ ದತ್ತ್ ಒಮ್ಮೆ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು-“ಒಂದು ಸಲ ನಾನು ಸ್ಟುಡಿಯೋದಲ್ಲಿ ಸಹೋದರಿ ಮತ್ತು ಆಕೆಯ ಇಬ್ಬರು ಮಕ್ಕಳ ಜೊತೆ ಕೂತಿದ್ದೆ .ನನ್ನ ಸಹೋದರಿಗೆ ಕುತ್ತಿಗೆಯಲ್ಲಿ ಟ್ಯೂಮರ್ ಆಗಿತ್ತು. ಆವಾಗ ನಾನು ಮುಂಬೈಯಲ್ಲಿ ಸ್ಟ್ರಗಲ್ ಮಾಡುತ್ತಿದ್ದ ದಿನಗಳು. ಹಾಗಾಗಿ ಯಾವುದೇ ದೊಡ್ಡ ಡಾಕ್ಟರ್ ಗಳು ನನಗೆ ಗೊತ್ತಿರಲಿಲ್ಲ. ಆಗ ಸ್ಟುಡಿಯೋಗೆ ನರ್ಗಿಸ್ ಅವರು ಬಂದರು. ಅವರು ನನ್ನನ್ನು “ಬಿರ್ಜು ಇಲ್ಲಿ ಬಾ” ಎಂದರು. ಆಗ ನಾನು ಗಂಭೀರವಾಗಿಯೇ ಕೂತಿದ್ದೆ. ಅವರು ಕೇಳಿದರು “ಏನಾಯ್ತು”?.
ನಾನು ಅವರಿಗೆ ಸಹೋದರಿಯ ವಿಷಯವನ್ನು ಹೇಳಿದೆ. “ನನಗೆ ಇಲ್ಲಿ ಯಾವ ಡಾಕ್ಟರುಗಳು ಗೊತ್ತಿಲ್ಲ” ಎಂದೆ. ನಂತರ ನಾನು ಬೇರೆ ಕೆಲಸಕ್ಕೆ ಹೊರಟೆ.
ತಡ ರಾತ್ರಿ ಮನೆಗೆ ಬಂದಾಗ ಸಹೋದರಿ ಹೇಳಿದರು- “ನಾಳೆ ಬೆಳಿಗ್ಗೆ ಆಸ್ಪತ್ರೆಗೆ ಹೋಗುತ್ತಿದ್ದೇನೆ, ಅಲ್ಲಿ ನನ್ನ ಆಪರೇಷನ್ ಆಗಲಿದೆ” ಎಂದು.
ಇದನ್ನು ಕೇಳಿ ನನಗೆ ಬಹಳ ಆಶ್ಚರ್ಯವಾಯ್ತು.


“ಯಾರು ಕರೆದುಕೊಂಡು ಹೋಗುತ್ತಾರೆ?” ಎಂದು ಕೇಳಿದಾಗ- “ನರ್ಗೀಸ್. ಅವರು ಡಾಕ್ಟರ್ ರನ್ನು ಕರೆದುಕೊಂಡು ಬಂದಿದ್ದರು. ನಾಳೆ ಆಪರೇಷನ್ ಮಾಡ್ತಾರಂತೆ” ಎಂದಾಗ ನರ್ಗೀಸ್ ರ ಬಗ್ಗೆ ಬಹಳಷ್ಟು ಗೌರವ ಉಂಟಾಯಿತು. ನಾನು ಯಾವ ರೀತಿಯ ಪಾರ್ಟ್ನರ್ ಬದುಕಿನಲ್ಲಿ ಇಚ್ಚಿಸಿದ್ದೆನೋ ಅದನ್ನು ನರ್ಗೀಸ್ ರಲ್ಲಿ ಕಂಡೆನು”.
“ಮುಂದೊಂದು ದಿನ ನಾನು ಮನೆಗೆ ಬಂದಾಗ ಸಹೋದರಿ ನನ್ನನ್ನು ನೋಡಿ ನಗುತ್ತಿದ್ದಳು. “ಏನಾಯ್ತು” ಕೇಳಿದೆ.
ಆಗ ಸಹೋದರಿ ಪಂಜಾಬಿ ಭಾಷೆಯಲ್ಲೇ “ನೀವು ನನ್ನ ಬಳಿ ಯಾಕೆ ನರ್ಗೀಸ್ ವಿಷಯ ಮುಚ್ಚಿಟ್ಟಿದ್ದೀರಿ? ನನಗೆಲ್ಲಾ ಗೊತ್ತಾಯ್ತು. ನರ್ಗೀಸ್ ಒಪ್ಪಿಕೊಂಡಿದ್ದಾರೆ” ಎಂದಾಗ ಖುಷಿಯಿಂದ ಉತ್ತರವೇ ಬರಲಿಲ್ಲ.
೧೧ ಮಾರ್ಚ್ ೧೯೫೮ ರಂದು ನರ್ಗೀಸ್ ಮತ್ತು ಸುನೀಲ್ ದತ್ತ್ ಅವರ ವಿವಾಹವಾಯಿತು. ಇವರಿಗೆ ಮೂವರು ಮಕ್ಕಳು- ಸಂಜಯ್ ದತ್ತ್, ನಮ್ರತಾ ಮತ್ತು ಪ್ರಿಯಾ ದತ್ತ್.


ಮೇ ೧೯೮೧ ರಲ್ಲೇ ಸಂಜಯ್ ದತ್ತ್ ಅವರ ಮೊದಲ ಫಿಲ್ಮ್ ರಾಕೀ ಬಿಡುಗಡೆಗೊಂಡಿತ್ತು.
ನರ್ಗೀಸ್ ಮತ್ತು ಸುನೀಲ್ ದತ್ತ್ ಅವರ ಪ್ರೇಮಕಥೆಯನ್ನು ಇಂದಿಗೂ ಜನ ಆಡಿಕೊಳ್ಳುತ್ತಾರೆ. ನರ್ಗೀಸ್ ರನ್ನು ಸದಾ ಖುಷಿಯಾಗಿಡಲು ಸುನೀಲ್ ಪ್ರಯತ್ನಿಸುತ್ತಿದ್ದರು. ಮದರ್ ಇಂಡಿಯಾದ ನಟಿ ನರ್ಗೀಸ್ ಅವರಿಗೆ ಸೀರೆ ಧರಿಸುವುದೆಂದರೆ ಬಹಳ ಖುಷಿಯಾಗುತ್ತಿತ್ತು .ನರ್ಗೀಸ್ ಯಾವಾಗಲೂ ಶೂಟಿಂಗ್ ಗೆ ತೆರಳುವಾಗ ಸುನೀಲ್ ದತ್ತ್ ಅವರಿಗೆ ನಾನಾ ರೀತಿಯ ಸೀರೆಗಳನ್ನು ಉಡುಗೊರೆ ನೀಡುತ್ತಿದ್ದರು. ನರ್ಗೀಸ್ ರಿಗೆ ಈ ಉಡುಗೊರೆಗಳು ಬಹಳ ಖುಷಿಯಾಗುತ್ತಿತ್ತು. ವಿಶೇಷ ಅಂದರೆ ನರ್ಗೀಸ್ ಎಂದಿಗೂ ಆ ಸೀರೆಗಳನ್ನು ಧರಿಸುತ್ತಿರಲಿಲ್ಲ!
ಒಂದು ದಿನ ಸುನೀಲ್ ದತ್ತ್ ನರ್ಗೀಸ್ ಪಾರ್ಟಿಗೆ ತೆರಳುವವರಿದ್ದರು.ಆವಾಗ ಸುನೀಲ್ ಕೇಳಿದರು-
“ನಿಮಗೆ ನೂರಾರು ಸೀರೆಗಳನ್ನು ಕೊಟ್ಟಿದ್ದೆ. ಆದರೆ ಅದನ್ನು ಧರಿಸಿದ್ದು ನೋಡಿಲ್ಲ ನಾನು” ಎಂದು ನರ್ಗೀಸ್ ಗೆ ಕೇಳಿದರು.
ಆಗ ಅವರ ಉತ್ತರ ಕೇಳಿ ಸುನೀಲ್ ದತ್ತ್ ಬೆಚ್ಚಿಬಿದ್ದರಂತೆ!
ಯಾಕೆಂದರೆ ಆ ಸೀರೆಗಳನ್ನು ಧರಿಸದ ಕಾರಣವನ್ನು ನರ್ಗೀಸ್ ರು ಸುನೀಲ್ ಅವರಿಗೆ ಹೀಗೆ ಹೇಳಿದ್ದರಂತೆ-“ಬಿರ್ಜೂ, ನೀವು ತರುತ್ತಿದ್ದ ಆ ಸೀರೆಗಳು ನನಗೆ ಇಷ್ಟ ಆಗುತ್ತಿರಲಿಲ್ಲ .”
ಒಮ್ಮೆ ಅದರ ಬಣ್ಣ ನರ್ಗೀಸ್ ದತ್ತ್ ಗೆ ಇಷ್ಟ ಆಗದಿದ್ದರೆ, ಇಮ್ನೊಮ್ಮೆ ಅದರ ಪ್ಯಾಟರ್ನ್ ಇಷ್ಟ ಆಗುತ್ತಿರಲಿಲ್ಲವಂತೆ .ಆದರೂ ನರ್ಗೀಸ್ ಸುನೀಲ್ ದತ್ತ್ ತರುತ್ತಿದ್ದ ಸೀರೆಗಳನ್ನೆಲ್ಲ ತುಂಬಾ ಪ್ರಶಂಸೆ ಮಾಡುತ್ತಿದ್ದರು. ಇದನ್ನು ಕೇಳಿದ ನಂತರ ಸುನೀಲ್ ಗೆ ಸ್ವಲ್ಪ ಬೇಸರವಾದದ್ದೂ ಇದೆ .ಆದರೆ ಸುನೀಲ್ ದತ್ತ್ ನೀಡಿರುವ ಆ ಎಲ್ಲಾ ಸೀರೆಗಳನ್ನು ಬಹಳ ಜೋಪಾನದಿಂದ ಕಪಾಟಿನಲ್ಲಿ ನರ್ಗೀಸ್ ತೆಗೆದಿಡುತ್ತಿದ್ದರು.ಅದು ಸಮಾಧಾನ ತಂದಿತ್ತು.

ಇರ್ಫಾನ್ ಖಾನ್ ರ ಪತ್ನಿಯ ಅಳಲು: ಕೊರೊನಾದಿಂದ ಸಂಬಂಧಿ ಸತ್ತ ದುಃಖ; “ದೆಹಲಿಯಲ್ಲಿ ಅವರಿಗೆ ಬೆಡ್ ಸಿಗಲಿಲ್ಲ, ಯಾಕೆಂದರೆ ಅವರು ಛೋಟಾ ರಾಜನ್ ಆಗಿರಲಿಲ್ಲ”

ದಿವಂಗತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಪತ್ನಿ ಸುತಾಪಾ ಸಿಕದರ್ ಕೋವಿಡ್ ೧೯ ಸೋಂಕಿನಿಂದ ತನ್ನ ಸಂಬಂಧಿ ಸಮೀರ್ ಬ್ಯಾನರ್ಜಿ ಅವರು ನಿಧನರಾದ ಪ್ರಯುಕ್ತ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ .
ಅವರು ತನ್ನ ಬೇಸರವನ್ನು ವ್ಯಕ್ತಪಡಿಸುತ್ತಾ- “ದೆಹಲಿಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ ಬೆಡ್ ಸಿಗಲೇ ಇಲ್ಲ. ಒಂದು ವೇಳೆ ಸಮೀರ್ ಅವರು ಪ್ರಾಮಾಣಿಕ ವ್ಯಕ್ತಿಯಾಗದೆ ಗ್ಯಾಂಗ್ ಸ್ಟರ್ ಛೋಟಾ ರಾಜನ್ ಆಗಿದ್ದರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸುಲಭವಾಗಿ ಸಿಗುತ್ತಿತ್ತು.”


ಸುತಾಪಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ – “ನಾನು ಒಂದು ದಿನ ಮೊದಲು ನಮ್ಮ ಸಂಬಂಧಿ ಅವರಿಗೆ ಸಹಾಯ ಮಾಡಿದ್ದೆ .ಆದರೆ ಅವರು ನಿನ್ನೆ ನಮ್ಮನ್ನು ಬಿಟ್ಟು ಹೋಗಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಮನೆಯಲ್ಲಿ ಐಸಿಯು ಸೆಟ್ ಮಾಡಲು ಸಾಧ್ಯವಾಗಲಿಲ್ಲ ನಮಗೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ ಬೆಡ್ ಸಿಗಲಿಲ್ಲ. ಆದರೂ ಎಲ್ಲಾ ಕೋವಿಡ್ ವಾರಿಯರ್ಸ್ ಗಳಿಗೆ ನನ್ನ ವಂದನೆಗಳು. ನಿಮಗೆಲ್ಲ ಜೀವನಾದ್ಯಂತ ಶುಭ ಆಶಿಸುವೆ. ನಮಗೆ ಐಸಿಯು ಬೆಡ್ ಸಿಗಲೇ ಇಲ್ಲ. ಯಾಕೆಂದರೆ ಅವರು ಛೋಟಾ ರಾಜನ್ ಆಗಿರಲಿಲ್ಲ ,ಒಬ್ಬರು ಪ್ರಾಮಾಣಿಕ ವ್ಯಕ್ತಿಯಾಗಿದ್ದರು.”
ಸುತಾಪಾ ಮುಂದುವರೆದು ಬರೆಯುತ್ತಾರೆ- ಎಲ್ಲರಿಗೂ ಒಂದು ದಿನ ಹೋಗಲೇಬೇಕು. ದೇಶದಲ್ಲಿ ಹಿಂದು ಹಬ್ಬಗಳು ಮುಸ್ಲಿಂ ಹಬ್ಬಗಳು ಇವುಗಳ ಬದಲು ಹೆಚ್ಚು ಆಕ್ಸಿಜನ್ ಪ್ಲಾಂಟ್ಸ್ ನತ್ತ ನಮ್ಮ ಗಮನ ಕೇಂದ್ರಿತವಾಗಿರಲಿ ಎಂದು ಆಶಿಸಿದ್ದಾರೆ.
ಕೊನೆಗೆ ಬರೆದಿದ್ದಾರೆ- “ಛೋಟಾ ರಾಜನ್ ಆಗಿರುವುದು ಎಲ್ಲಕ್ಕಿಂತ ಉತ್ತಮ.”
ಸುತಾಪಾ ಮತ್ತು ಅವರ ಮಗ ಬಾಬಿಲ್ ಈ ದಿನಗಳಲ್ಲಿ ಕೋವಿಡ್ ರೋಗಿಗಳ ಶುಶ್ರೂಷೆಯಲ್ಲಿ ನೆರವು ನೀಡುತ್ತಿದ್ದಾರೆ.