ಮಹಾನಾಯಕ ರಾಜಕೀಯದಲ್ಲಿ ಇರಲು ನಾಲಾಯಕ್‌ ಡಿಕೆ ವಿರುದ್ಧ ಜಾರಕಿಹೊಳಿ‌ ವಾಗ್ದಾಳಿ

ಬೆಂಗಳೂರು,ಮಾ.27-ರಾಸಲೀಲೆ ಸಿಡಿ ಪ್ರಕರಣದ ಸಂಬಂಧ  ‘ಆ ಮಹಾನಾಯಕ ಯಾರೆಂದು ಯುವತಿಯ ಪೋಷಕರು ಹೇಳಿದ್ದಾರೆ. ಆ ಮಹಾನಾಯಕ ರಾಜಕೀಯದಲ್ಲಿ ಇರಲು ನಾಲಾಯಕ್‌. ಇಂಥ ಷಡ್ಯಂತ್ರ ಮಾಡಬಾರದು’ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ
ಸಿಡಿಯಲ್ಲಿ ಕಾಣಿಸಿಕೊಂಡ ಯುವತಿಯ ಪೋಷಕರು ಆಡುಗೋಡಿಯಲ್ಲಿರುವ ಎಸ್‌ಐಟಿ ಕಚೇರಿಯ ಎದುರು ಸುದ್ದಿಗಾರರ ಜೊತೆ ಮಾತನಾಡಿ, ‘ನಮ್ಮ ಮಗಳನ್ನು ಡಿಕೆ ಶಿವಕುಮಾರ್‌ ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದರು’ ಎಂದು ಆರೋಪಿಸಿದ ಕೆಲವೇ ಕ್ಷಣಗಳಲ್ಲಿ ಸದಾಶಿವನಗರದಲ್ಲಿರುವ ತಮ್ಮ ಮನೆ ಮುಂಭಾಗದಲ್ಲಿ ರಮೇಶ ಜಾರಕಿಹೊಳಿ ಸುದ್ದಿಗಾರರ ಜೊತೆ ಮಾತನಾಡಿದರು.
ಪ್ರಕರಣದ ಸಂಬಂಧಿಸಿದಂತೆ ‘ನನ್ನ ಬಳಿ 11 ಸಾಕ್ಷ್ಯಗಳಿವೆ. ಆ ಸಾಕ್ಷ್ಯಾಧಾರಗಳನ್ನು ಎಸ್‌ಐಟಿಗೆ ಕೊಡುತ್ತೇನೆ’ ಎಂದರು.
‘ಕಿಂಗ್‌ಪಿನ್‌ ನರೇಶ್ ಗೌಡನಿಗೆ ಸಂಬಂಧ ಇದೆ ಎಂದು ಆ ಮಹಾನಾಯಕ ಒಪ್ಪಿಕೊಂಡಿದ್ದಾನೆ. ಆ ಯುವತಿ ನನ್ನ ಮನೆಯ ಬಳಿ ಬಂದಿದ್ದಳು ಎಂದೂ ಒಪ್ಪಿಕೊಂಡಿದ್ದಾನೆ. ಆ ಮಹಾನಾಯಕನನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು’ ಎಂದು ತಿಳಿಸಿದರು.
‘ನಾನು ಗಂಡಸು, ನಾನು ಗಂಡಸು. ಅವನು ಗಾಂ…’ ಎಂದೂ ಅವಾಚ್ಯವಾಗಿ ನಿಂದಿಸಿದರು. ‘ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಸೋಲಬೇಕು. ಅದಕ್ಕೆ ಏನೆಲ್ಲ ಬೇಕು ಅದೆಲ್ಲವನ್ನೂ ಮಾಡಿದ್ದೇನೆ’ ಎಂದರು
ನಾನು ತಪ್ಪು ಮಾಡಿದ್ದರೆ ನನ್ನನ್ನು ನೇಣಿಗೆ ಹಾಕಲಿ. ನಾನು ಡಿ.ಕೆ. ಶಿವಕುಮಾರ್‌ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುತ್ತೇನೆ. ಆ ಯುವತಿಯ ಪೋಷಕರಿಗೆ ನಾನು ಧನ್ಯವಾದ ಹೇಳುತ್ತೇನೆ’
‘ಅವನ (ಡಿ.ಕೆ. ಶಿವಕುಮಾರ್‌ ವಿರುದ್ಧ ನಾನು ಹೋರಾಡುತ್ತೇನೆ. ಕನಕಪುರದಲ್ಲಿ ಅವನನ್ನು ಸೋಲಿಸುತ್ತೇನೆ. ಅದಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದೇನೆ’ ಎಂದೂ ಹೇಳಿದರು.
ಆ ಯುವತಿಗೆ ಏನೇ ಆದರೂ ಅವರೇ (ಡಿ.ಕೆ. ಶಿವಕುಮಾರ್‌) ಕಾರಣ ಆಗುತ್ತಾರೆ’ ಎಂದೂ ಹೇಳಿದರು.