ಮಹಾನಾಯಕ ಯುವರಾಜ ನ ಬಳಿ ಸಿಡಿ ಕಾರ್ಖಾನೆಯಿದೆ:ಯತ್ನಾಳ್

ರಾಣೆಬೆನ್ನೂರು, ಮಾ.27- ಕಾಂಗ್ರೆಸ್‌ ಮಹಾನಾಯಕ’ ಹಾಗೂ ಬಿಜೆಪಿಯ ಯುವರಾಜ’ ಇಬ್ಬರ ಬಳಿ ಸಿ.ಡಿ. ತಯಾರಿಸುವ ಕಾರ್ಖಾನೆಗಳಿವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಇವರಿಬ್ಬರೂ ಸಿಡಿಗಳನ್ನೂ ಖರೀದಿ ಮಾಡುತ್ತಾರೆ. ಈಗಾಗಲೇ ‘ಕಾಂಗ್ರೆಸ್ ಮಹಾನಾಯಕ’ನ ಹೆಸರು ಹೊರಬಿದ್ದಿದೆ. ಕೆಲವೇ ದಿನಗಳಲ್ಲಿ ‘ಬಿಜೆಪಿ ಯುವರಾಜ’ನ ಹೆಸರು ಹೊರಬರಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಮಹಾನಾಯಕ ಮತ್ತು ಯುವರಾಜರು ಹೆಣ್ಣುಮಕ್ಕಳನ್ನು ಬಿಟ್ಟು ಕೆಲವರನ್ನು ಬ್ಲ್ಯಾಕ್‌ಮೇಲ್‌‌ ಮಾಡುತ್ತಾರೆ. ನನಗೆ ಬೆಂಬಲ ನೀಡದಿದ್ದರೆ, ತೊಂದರೆ ಕೊಟ್ಟರೆ ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಹೆದರಿಸುತ್ತಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿರುವ ಎಷ್ಟೋ ಶಾಸಕರು ಈ ಭಯದ ವಾತಾವರಣದಲ್ಲಿದ್ದಾರೆ’ ಎಂದು ಹೇಳಿದರು.
ಸಿಡಿ ಹೆಣ್ಣುಮಗಳು ಈಗಾಗಲೇ ‘ಮಹಾನಾಯಕ’ನ ಹೆಸರು ಹೇಳಿದ್ದಾಳೆ. ಮಹಾನಾಯಕನ ಚಾಲಕ ಆಕೆಯ ಜೊತೆ ಓಡಾಡಿರುವ ಬಗ್ಗೆ ಚರ್ಚೆಯಾಗುತ್ತಿದೆ. ಯುವರಾಜನ ರಕ್ಷಣೆ ಮಾಡಲು ಪ್ರಯತ್ನ ನಡೆಯುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ಆ ಯುವರಾಜ ಒಬ್ಬ ಜೈಲಿನಲ್ಲಿದ್ದಾನೆ. ಇನ್ನೊಬ್ಬ ಯುವರಾಜ ಹೊರಗಡೆ ಇದ್ದಾನೆ ಎಂದರು.
ಆ ಮಹಾನಾಯಕ ಮತ್ತು ಯುವರಾಜ ಯಾರು ಎಂಬ ಬಗ್ಗೆ ಯತ್ನಾಳ್ ಉತ್ತರ ನೀಡಲು ನಿರಾಕರಿಸಿದರು.
ಸಿಸಿಬಿ ತನಿಖೆ:
ಸಿಡಿ ಪ್ರಕರಣದಲ್ಲಿ ಕೆಲವರನ್ನು ರಕ್ಷಣೆ ಮಾಡಲೆಂದೇ ‘ಸಿಸಿಬಿ ತನಿಖೆ’ಗೆ ವಹಿಸಲಾಗಿದೆ. ‘ಸಿಬಿಐ ತನಿಖೆ’ಗೆ ವಹಿಸಿದ್ದರೆ, ಎಲ್ಲ ಕಳ್ಳರನ್ನು ಒದ್ದು ಒಳಗೆ ಹಾಕುತ್ತಿದ್ದರು. ಇನ್ನೂ ಬಹಳ ಮಂದಿಯ ಸಿ.ಡಿ.ಗಳನ್ನು ಮಾಡಲಾಗಿದೆ. ಇದರಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳು, ವ್ಯಾಪಾರಸ್ಥರು, ಶಾಸಕರು, ಸಂಸದರು ಸೇರಿದ್ದಾರೆ ಎಂದು ಹೊಸ ಬಾಂಬ್‌ ಸಿಡಿಸಿದರು.
ಬಿಜೆಪಿ ಉನ್ನತ ನಾಯಕನ ಸಿಡಿ ‘ಕಾಂಗ್ರೆಸ್‌ ಮಹಾನಾಯಕ’ನ ಬಳಿ ಇದೆ. ಹಾಗಾಗಿಯೇ ಮಹಾನಾಯಕನನ್ನು ನೋಡಿದರೆ ಸಾಕು ಉನ್ನತ ನಾಯಕ ಅಂಜುತ್ತಾನೆ. ಈಗಾಗಲೇ ಈ ಮಹಾನಾಯಕ ನನ್ನ ಬಳಿ ಸಿಡಿಎಂದು ಹೇಳಿದ್ದಾನೆ.
ಭ್ರಷ್ಟ ರಾಜಕಾರಣಿಗಳು’ ಮತ್ತು ‘ಪ್ರಾಮಾಣಿಕ ರಾಜಕಾರಣಿಗಳು’ ಎಂಬ ಎರಡು ಗುಂಪುಗಳು ರಾಜ್ಯದಲ್ಲಿವೆ. ಭ್ರಷ್ಟರು ಎಲ್ಲ ಪಕ್ಷದಲ್ಲೂ ಇದ್ದಾರೆ.