ಮಹಾನಾಯಕ ಪದ ಬಳಕೆ ಬೇಡ

ಕಾಳಗಿ. ಮಾ.31: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸಂಬಂದಿಸಿದ್ದೇನ್ನಾಲಾದ ಅಶ್ಲೀಲ ಸಿ.ಡಿ. ಬಿಡುಗಡೆಯಾದಾಗಿನಿಂದ ‘ ಸಿ.ಡಿ. ಹಿಂದೆ ಮಹಾನಾಯಕ ಎಂಬುದಾಗಿ ಪದೇ ಪದೇ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ.

ಆದರೆ ಡಾ. ಬಿ. ಆರ್. ಅಂಬೇಡ್ಕರ್ ಕುರಿತ ಧಾರಾವಾಹಿಯೊಂದು ಮಹಾನಾಯಕ ಹೆಸರಿನಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದು.
ಬಹು ಸಂಖ್ಯಾತ ಅಭಿಮಾನಿಗಳನ್ನು ಹೊಂದಿದೆ. ಅದರ ಹೆಸರಿಗೆ ಈ ‘ ಸಿ.ಡಿ.ಮಹಾನಾಯಕ ಎಂಬ ಬಳಕೆ ಮಸಿ ಬಳಿಯುತ್ತಿದೆ.

ರಾಜ್ಯ ಸರಕಾರವನ್ನೇ ತಲ್ಲಣಗೊಳಿಸುತ್ತಿರುವ ಸಿಡಿ ಪ್ರಕರಣದಲ್ಲಿ ಮಹಾನಾಯಕ ಹೆಸರು ಬಳಸುತ್ತಿರುವುದನ್ನು ಕೂಡಲೇ ಕೈ ಬಿಡಬೇಕು ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಪರಮೇಶ್ವರ ಕಟ್ಟಿಮನಿ ಆಗ್ರಹಿಸಿದ್ದಾರೆ.