ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡುತ್ತಿರುವ ರಾಘವೇಂದ್ರ ಹುಣಸೂರು ರವರಿಗೆ ರಕ್ಷಣೆ ಕೊಡಿ

ಸಂಡೂರು ಸೆ16: ಡಾ|| ಬಿ.ಆರ್.ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ಜೀ-ಕನ್ನಡ ವಾಹಿನಿಯ ಧಾರಾವಾಹಿ ರೂಪದಲ್ಲಿ ಬಿತ್ತರಿಸುತ್ತಿದ್ದು, ಎಲ್ಲಾ ವರ್ಗದ ಜನತೆ ಚಾಚೂ ತಪ್ಪದೆ ವೀಕ್ಷಿಸುತ್ತಿದ್ದಾರೆ. ಕೆಲ ಕಿಡಿಗೇಡಿಗಳ, ಕೋಮು ಗುಂಪಿನವರು ಜೀ-ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರುರವರಿಗೆ ಬೆದರಿಕೆ ಕರೆಗಳು “ಮಹಾನಾಯಕ” ಧಾರಾವಾಹಿಯನ್ನು ನಿಲ್ಲಿಸುವಂತೆ ಒತ್ತಡ ತರುತ್ತಿದ್ದಾರೆ. ಮಾನ್ಯರೇ ಡಾ|| ಬಿ.ಆರ್.ಅಂಬೇಡ್ಕರ್‍ರವರು ಕಡುಬಡತನ ದಿಂದ ಬಂದು ವಿದ್ಯೆ ಸಾಧನೆಯಲ್ಲಿ ಮೇಲುಪರ್ವತವಾಗಿ ಬೆಳೆದು ಭಾರತದ ಸಂವಿಧಾನ ರಚಿಸಿ ಸಂವಿಧಾನ ಶಿಲ್ಪಿ ಎಂಬದು ಹೆಗ್ಗಳಿಕೆಗೆ ಪಾತ್ರರಾಗಿ ಭಾರತರತ್ನ ಪುರಸ್ಕೃತರಾದದ್ದು, ಮರೆಯಬಾರದು ಅವರು ಒಂದು ಕೋಮಿಗೆ ಸೇರಿದವರಲ್ಲ ಇಡೀ ಭಾರತಕ್ಕೆ ಭಾರತ ದೇಶದ ಜನತೆಗೆ ಆದರ್ಶವಾಗಿದ್ದರು. ದೀನ ದಲಿತ, ಬಡಬಗ್ಗರ ಏಳಿಗೆಗಾಗಿ ಅವರ ಉದ್ಧಾರಕ್ಕಾಗಿ ಶ್ರಮಿಸಿರುವ ಧೀಮಂತ ನಾಯಕರು. ಅಂತಹ ಮಹಾನೀಯರ ಜೀವನ ಆಧಾರಿತ ಚಿತ್ರಣಗೊಂಡು ಅದ್ಭುತ ಧಾರಾವಾಹಿಯಾಗಿ ಇಡೀ ದೇಶವೇ ವೀಕ್ಷಿಸಿ ಅವರ ಬದುಕಿನ ಪರಿಪಾಠವನ್ನು ಪ್ರತಿಯೊಬ್ಬ ವಿದ್ಯಾರ್ಥಿ, ಯುವಜನತೆ ಅಳವಡಿಸಿಕೊಳ್ಳಲಿ ಆದರ್ಶ ವ್ಯಕ್ತಿಯಾಗಿ ಬದುಕಲಿ ಎನ್ನುವ ಸದುದ್ದೇಶವೇ “ಮಹಾನಾಯಕ” ಡಾ|| ಬಿ.ಆರ್.ಅಂಬೇಡ್ಕರ್ ಎನ್ನುವ ಧಾರಾವಾಹಿ ಪ್ರಚಾರ ಅಡ್ಡಿಪಡಿಸಿದರೆ ಇಡೀ ವಿಶ್ವವೇ ಜೀ-ವಾಹಿನಿಗೆ ಬೆಂಬಲದ ಹೋರಾಟಕ್ಕೆ ಬೆಂಬಲವಾಗಿ ನಿಂತಿದೆ. ಬನ್ನಿ ಎಲ್ಲರೂ ಒಂದಾಗಿ ಜೀ-ವಾಹಿನಿಗೆ ಬೆಂಬಲಿಸೋಣ ಉತ್ತಮವಾದ ಧಾರಾವಾಹಿ ಸಂಪೂರ್ಣವಾಗಿ ನಡೆಯಲಿ, ಅಂಬೇಡ್ಕರ್ ಇರಲಿ, ಯಾರೇ ಆದರ್ಶ ವ್ಯಕ್ತಿಗಳ ಶಕ್ತಿಗಳ ಕಥೆ, ಕಾದಂಬರಿ, ಪಠ್ಯಪುಸ್ತಕ, ನಾಟಕ, ಧಾರಾವಾಗಿಯಾಗಿ ನಿತ್ಯ ಪ್ರಚಾರವಾದರೆ ಮಲಿನವಾದ ದೇಶ ಪವಿತ್ರಗೊಳ್ಳುವುದರಲ್ಲಿ ಸಂದೇಹವಿಲ್ಲ. ಡಾ|| ಬಿ.ಆರ್.ಅಂಬೇಡ್ಕರ್ ರವರು ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದವರಲ್ಲ, ಇಡೀ ಮನುಜ ಸಂಕುಲಕ್ಕೆ ಎಲ್ಲಾ ವರ್ಗದ ಜನತೆಗೆ ಬೇಕಾದ ಧೀಮಂತ ಮಹಾನಾಯಕ (ಇದರಲ್ಲಿ ದುರುದ್ದೇಶವಿಲ್ಲ, ಸದುದ್ದೇಶ ಒಂದೇ) ಅದುವೇ ಮಹಾನಾಯಕ. ಇಂಥಹ ಉತ್ತಮ ಧಾರಾವಾಹಿಯನ್ನು ಪ್ರಸಾರ ಮಾಡಿದ ರಾಘವೇಂದ್ರ ಹುಣಸೂರು ರವರಿಗೆ ರಕ್ಷಣೆ ನೀಡಬೇಕೆಂದು ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಶಿವಲಿಂಗಪ್ಪನವರು ಸಂಡೂರಿನ ತಹಶೀಲ್ದಾರರ ಮೂಲಕ ಕರ್ನಾಟಕ ಘನ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭಧಲ್ಲಿ ಕ.ರ.ವೇ. ಪಿ. ರಾಜೂ, ತಬಲಾ ಕುಮಾರಸ್ವಾಮಿ, ಬಿ.ಎಂ. ಮಹಂತೇಶ, ಕಮ್ಮಾರ ಕುಮಾರಸ್ವಾಮಿ, ಬಿ. ಅನ್ವರ್ ಸಾಹೇಬ್, ಸತೀಶ, ಕೆ.ಎಲ್. ನಾಯ್ಡು ಉಪಸ್ಥಿತರಿದ್ದರು.