ಮಹಾನಾಯಕರ ಜಯಂತಿ:ಪೂರ್ವಭಾವಿ ಸಭೆಗೆ ಒತ್ತಾಯ

ರಾಯಚೂರು,ಮಾ.೨೬- ಡಾ.ಬಾಬು ಜಗಜೀವನರಾಂ ರವರ ೧೧೩ ನೇ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೦ ನೇ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ರಾಷ್ಟ್ರ ನಾಯಕರ ಮತ್ಥಳಿಗಳಿಗೆ ಸ್ವಚ್ಚತೆ ಹಾಗೂ ಸೌಂದರೀಕರಣ ಹಾಗೂ ಜಯಂತಿಗಳನ್ನು ಆಚರಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ದೇಶದ ರಾಷ್ಟ್ರ ನಾಯಕರುಗಳಾದ ಡಾ. ಬಾಬು ಜಗಜೀವನರಾಂ ರವರ ೧೧೩ ನೇ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ೧೧೦ ನೇ ಜಯಂತಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ವತಿಯಿಂದ ಯಾವ ರೀತಿ ಜಯಂತಿ ಕಾರ್ಯಕ್ರಮಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿವೆ ಎಂದು ಯಾವುದೇ ದಲಿತಪರ ಸಂಘಟನೆಗಳ,ಸಂಘ ಸಂಸ್ಥೆಗಳೊಂದಿಗೆ ಯಾವುದೇ ಪೂರ್ವಭಾವಿ ಸಭೆಯನ್ನು ಕರೆಯದೆ ಇರುವುದು ಖಂಡನೀಯ.
ಆದ್ದರಿಂದ ಪೂರ್ವಭಾವಿ ಸಭೆಯನ್ನು ಸಮಯ ಹಾಗೂ ದಿನಾಂಕವನ್ನು ನಿಗದಿಪಡಿಸಿ ಈ ಸಭೆಯುನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಹಿಂದೆ ೨೦೨೦ ನೇ ಸಾಲಿನಲ್ಲಿ ಡಾ. ಬಾಬು ಜಗಜೀವನರಾಂ ರವರ ಪುತ್ಥಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಸೌಂದರೀಕರಣ , ನವೀಕರಣ ಮತ್ತು ಬಣ್ಣ ಹಚ್ಚದೆ ನಿರ್ಲಕ್ಷ ತೋರಿದ್ದರು , ಅದೇ ಜಯಂತಿ ಕಾರ್ಯಕ್ರಮಗಳನ್ನು ಸರಕಾರದ ಸುತ್ತೋಲೆ ಪ್ರಕರ ರೀತಿ ಈ ವರ್ಷವು ತಾವು ನಿರ್ಲಕ್ಷ ತೋರದ ಸದರಿ ರಾಷ್ಟ್ರ ನಾಯಕರುಗಳಿಗೆ ಸುಣಬಣ್ಣ , ಸೌಂದರೀಕರಣಗೊಳಿಸಿ ರೀತಿ ತೊಂದರೆಯಾಗದಂತೆ ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಟ್ಟಿ, ಈ ಕುಮಾರಸ್ವಾಮಿ,ಮಹೇಶ್ ಕುಮಾರ್,ಭಿಮೇಶ್ ,ರವಿ ಚಂದ್ರ,ಸೇರಿದಂತೆ ಅನೇಕರು ಇದ್ದರು.