
ವಿಜಯಪುರ,ಮೇ.6-ಮಹಾನಗರ ಪಾಲಿಕೆಯ 19ನೇ ವಾರ್ಡ್‍ನ ಸದಸ್ಯೆಯ ಪತಿ ಹಾಗೂ ರೌಡಿಶೀಟರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಹೈದರ್ ಅಲಿ ನದಾಫ್ ಹತ್ಯೆಯಾದವರು. ನಗರದ ಚಾಂದಪುರ ಕಾಲೋನಿಯಲ್ಲಿ ಇಂದು ದುಷ್ಕರ್ಮಿಗಳು ಹೈದರ್ ಅಲಿ ಮೇಲೆ ಫೈರಿಂಗ್ ಮಾಡಿದ್ದು, ಗುಂಡೇಟು ತಗುಲಿ ಹೈದರ್ ಅಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.