ಮಹಾನಗರ ಪಾಲಿಕೆ ಚುನಾವಣಾ 15 ನೇ ವಾರ್ಡಿನಲ್ಲಿ ಬಿಜೆಪಿಯಿಂದ ಮತ್ತೆ ಕವಿತಾ ಕಾಂಗ್ರೆಸ್ ಟಿಕೆಟ್‍ಗಾಗಿ ಹಲವರ ಯತ್ನ

 • ಅಲ್ಪಸಂಖ್ಯಾತ ಮತದಾರರು ಹೆಚ್ಚು
 • ಆಯ್ಕೆಯಾಗುವುದು ಮಾತ್ರ ಭೋವಿಯವರು
  ಬಳ್ಳಾರಿ:ಏ.6- ಇಲ್ಲಿನ ಮಹಾನಗರ ಪಾಲಿಕೆಯ ವಡ್ಡರ ಬಂಡೆ ಪ್ರದೇಶದ ವ್ಯಾಪ್ತಿಯನ್ನು ಹೊಂದಿರುವ, ಮುಸ್ಲೀಂ ಮತದಾರರನ್ನು ಹೆಚ್ಚಾಗಿ ನಂತರದಲ್ಲಿ ಭೋವಿ ಮತದಾರರನ್ನು ಹೊಂದಿರುವ ಸಧ್ಯದ 15 ನೇ ವಾರ್ಡು ಮೀಸಲಾತಿ ಏನೇ ಬರಲಿ, ಯಾವುದೇ ಪಕ್ಷ ಆಗಿರಲಿ ಕಳೆದ ಮೂರು ದಶಕಗಳಿಂದ ಇಲ್ಲಿ ಭೋವಿ ಸಮುದಾಯದವರೇ ಈವರೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಬಾರಿಯೂ ಇಲ್ಲಿ ಭೋವಿ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳ ಮಧ್ಯೆಯೇ ಸ್ಪರ್ಧೆ ಏರ್ಪಡುವ ಪರಿಸ್ಥಿತಿ ಇದೆ.ಸಧ್ಯ 7100 ಮತದಾರದನ್ನು ಹೊಂದಿರುವ ಈ ವಾರ್ಡಿನಲ್ಲಿ ಅಂದಾಜು 2500 ಅಲ್ಪ ಸಂಖ್ಯಾತರು, 1500 ಜನ ಭೋವಿ ಮತದಾರರಿದ್ದಾರೆ.
  ಈ ವಾರ್ಡಿನಲ್ಲಿ 2001 ರಲ್ಲಿ ಶ್ರೀರಾಮುಲು ಮತ್ತು ರೆಡ್ಡಿ ಸಹೋದರರ ಪರಮ ಭಂಟ. ಎನ್ನೋಬಲ್ ಇಂಡಿಯಾದ ಉದ್ಯೋಗಿಯಾಗಿದ್ದ ಭೋವಿ ಸಮಾಜದ ನಾಗಭೂಷಣ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಕಾಂಗ್ರೆಸ್‍ನಿಂದ ಶೇಖಣ್ಣ, ಸಣ್ಣ ಶೇಖಣ್ಣ ಅವರ ಪತ್ನಿ ಪದ್ಮ ಅವರು ಆಯ್ಕೆಯಾಗಿದ್ದರು. 2007 ರಲ್ಲಿ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿದ್ದರಿಂದ ನಾಗಭೂಷಣ ಅವರು ತಮ್ಮ ಪತ್ನಿ ಕವಿತಾ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡರು.
  ಎರಡು ಭಾರಿ ಆಯ್ಕೆಯಾಗಿದ್ದರಿಂದ ನಾಗಭೂಷಣ ಅವರಿಗೆ ಮಣೆ ಹಾಕದೆ 2014 ನಡೆದ ಚುನಾವವಣೆಯಲ್ಲಿ ಶ್ರೀರಾಮುಲು ತಮ್ಮ ವರಸೆ ಬದಲಿಸಿ. ಈ ಕ್ಷೇತ್ರದಲ್ಲಿ ಸತತ ಸೋಲನ್ನೇ ಕಾಣುತ್ತ ಬಂದಿರುವ ನೂರ್ ಅವರ ಪತ್ನಿಯನ್ನು ಬಿಎಸ್‍ಆರ್ ಪಕ್ಷದಿಂದ ಕಣಕ್ಕಿಳಿಸಿದರು. ಆದರೆ ಕಾಂಗ್ರೆಸ್ ಪಕ್ಷದ ರಾಮುಡು ಅವರ ಪತ್ನಿ ಲಕ್ಷ್ಮೀದೇವಿ ಆಯ್ಕೆಯಾದರು. ಅವರು ಕೆಲ ತಿಂಗಳು ಉಪ ಮೇಯರ್ ಸಹ ಆಗಿದ್ದರು.
  ಈಗ ಈ ವಾರ್ಡು ಮೀಸಲಾತಿ ಓಬಿಸಿ ಎ ಗೆ ಮೀಸಲಾಗಿದೆ. ಬಿಜೆಪಿಯಿಂದ ಮತ್ತೆ ನಾಗಭೂಷಣ ಅವರು ತಮ್ಮ ಪತ್ನಿ ಕವಿತಾ ಅವರನ್ನು ಕಣಕ್ಕಿಳಿಸುತ್ತಿದ್ದಾರೆ. ಟಿಕೆಟ್ ಇನನೂ ಘೊಷಣೆ ಆಗದಿದ್ದರೂ ಈಗಾಗಲೇ ವಾರ್ಡಿನಲ್ಲಿ ಪ್ರಚಾರ ಆರಂಭಿಸಿದ್ದಾರೆ.
  ಇತ್ತ ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಹಲವರ ಪ್ರಯತ್ನ ನಡೆದಿದೆ. ಕಳೆದ ಬಾರಿ ಬಿಎಸ್‍ಆರ್‍ನಲ್ಲಿದ್ದ ನೂರ್ ಅವರು ಕೆಲ ತಿಂಗಳ ಹಿಂದೆ ಮತ್ತೆ ಕಾಂಗ್ರೆಸ್ ಸೇರಿದ್ದು ಅವರು ಟಿಕೆಟ್ ಆಕಾಕ್ಷಿಯಾಗಿದ್ದಾರೆ. ಸಧ್ಯ ಅವರಿಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರು ಗಾಡ್ ಫಾದರ್ ಆಗಿದ್ದಾರಂತೆ.
  ರಾಜಧಾನಿ ಮಟ್ಟದಲ್ಲಿ ಪಕ್ಷದ ಮುಖಂಡರ ಸಂಪರ್ಕ ಹೊಂದಿರುವ ಮತ್ತು ಸ್ಥಳೀಯವಾಗಿಯೂ ಹಲವರ ಸಂಪರ್ಕಹೊಂದಿರುವ ಅಲ್ಪ ಸಂಖ್ಯಾತ ವಿಭಾಗದ, ಯುವ ಕಾಂಗ್ರೆಸ್‍ನ ನಗರ ಘಟಕದ ಮಾಜಿ ಅಧ್ಯಕ್ಷ ಎಂ. ಫರಾನ್ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರಲ್ಲದೆ ಮಾಜಿ ಸಚಿವ ದಿವಾಕರ ಬಾಬು ಅವರ ಕಟ್ಟಾ ಅಭಿಮಾನಿ ಕೆ.ಸುನೀಲ ಸೇರಿದಂತೆ ಇನ್ನೂ ಅನೇಕರು ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿಸಲ್ಲಿಸಿದ್ದಾರೆ. ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಇನ್ನು ತಿಳಿದಿಲ್ಲ. ಯಾರೇ ಸ್ಪರ್ಧೆ ಮಾಡಿದರೂ ಇಲ್ಲಿ ಕಾಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟ್ ಖಚಿತ.
ಕವಿತಾ ನಾಗಭೂಷಣ

ಈ ಹಿಂದೆ 2007 ರಲ್ಲಿ ಆಯ್ಕೆಯಾಗಿ ಜನಸೇವೆ ಮಾಡಿರುವೆ. ಅನುಭವ ಇದೆ. ಜೊತೆಗೆ ಪತಿಯ ಸಹಕಾರ, ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ವಾರ್ಡಿನ ಅಭಿವೃದ್ದಿಗೆ ಶ್ರಮಿಸುವೆ
ಕವಿತಾ ನಾಗಭೂಷಣ

ಎಂ.ಫರಾನ್

ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಹಲವು ಹುದ್ದೆಗಳ ಮೂಳಕ ಪಕ್ಷದ ಸಂಘಟನೆಗೆ ಶ್ರಮಿಸಿರುವೆ, ಅಲ್ಪ ಸಂಖ್ಯಾತ ಸಮುದಾಯದ ಜೊತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯಲ್ಲಿ ಆಯ್ಕೆಯಾಗುವ ಬಯಕೆ.
ಎಂ.ಫರಾನ್