ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಸೊಂಕು ಹೆಚ್ಚಳಕ್ಕೆ ಕಾರಣ ಕರವೇ ಆರೋಪ

ಕಲಬುರಗಿ:ಏ.26: ಕೋವಿಡ್ ಎರಡನೇ ಅಲೇ ವೇಳೆ ಸೋಂಕಿತರ ಸಂಪರ್ಕಿತರನ್ನು , ಪತ್ತೆ ಹಚ್ಚುವುದು ಅವರನ್ನು ಮನೆಯಿಂದ ಹೊರಬರದಂತೆ ನೋಡಿಕೊಳ್ಳುವ ಕಾರ್ಯವನ್ನೇ ಮಹಾನಗರ ಪಾಲಿಕೆ ಮರೆತಿದ್ದು , ಕಲಬುರಗಿಯಲ್ಲಿ ಸೊಂಕು ಮೀತಿ ಮೀರಿ ಹರಡುತ್ತಿರುವುದಕ್ಕೆ ಮಹಾನಗರ ಪಾಲಿಕೆಯೇ ಕಾರಣ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಆರೋಪಿಸಿದರು.
ಒಂದೆಡೆ ಪರೀಕ್ಷೆಗೆ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ, ಮತ್ತೊಂದೆಡೆ ವಾರ ಕಳೆದರು ಬಾರದ ಕೋವಿಡ್ ವರದಿ. ವರದಿ ಬರುವಷ್ಟರಲ್ಲಿ ಶಂಕಿತ ಸೊಂಕಿತನ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗುತ್ತದೆ. ವರದಿ ಬಂದ ಮೇಲೆ ಬೆಡ್ ಸಿಗದೆ ಅಲೆಯುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಕೋವಿಡ್ ಮೊದಲ ಅಲೆ ವೇಳೆ ಪ್ರತಿ ಗಲ್ಲಿ , ಮನೆಯ ಸೊಂಕಿತರನ್ನು ಪತ್ತೆ ಹಚ್ಚಿ ಅವರ ಪ್ರಾಥಮಿಕ ಸಂಪರ್ಕಿತರು ಮತ್ತು ದ್ವೀತಿಯ ಹಂತದ ಸಂಪರ್ಕಿತರನ್ನು ನಿರ್ದಿಷ್ಟಗಳ ಕಾಲ ಕ್ವಾರಂಟೈನನಲ್ಲಿರುವಂತೆ ಅವರಿಗೂ ಕೋವಿಡ್ ಪರೀಕ್ಷೆ ನಡೆಸುವ ಕೆಲಸ ಮಾಡಲಾಗುತ್ತಿತ್ತು. ಆದರೆ ಈಗ ಈ ಎಲ್ಲಾ ನಿಯಮಗಳನ್ನು ಕೇವಲ ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ನಿಯಂತ್ರಣ ಮಾರ್ಗಸೂಚಿಗೆ ಮಾತ್ರ ಸೀಮಿತವಾಗಿದೆ ಎಂದರು. ಮಹಾನಗರ ಪಾಲಿಕೆಯೂ ಯಾವ ಕೆಲಸವನ್ನು ಮಾಡುತ್ತಿಲ್ಲ. ಇದರಿಂದ ನಗರದ ಗಲ್ಲಿ ಗಲ್ಲಿ , ಮನೆ ಮನೆಗೂ ಕೋವಿಡ್ ವ್ಯಾಪಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮೊದಲ ಅಲೆ ವೇಳೆ ಸೊಂಕು ದೃಢಪಟ್ಟವರ ಮನೆ ಬಾಗಿಲೆಗೆ ಬಂದು ಸೊಂಕಿತರನ್ನು ಕರೆದೊಯ್ಯುವ, ಸುತ್ತಮುತ್ತಲಿನ ಮನೆಯುವರಿಗೆ ಮಾಹಿತಿ ನೀಡಿ ಎಚ್ಚರದಿಂದರಲೂ ಸೂಚಿಸಲಾಗುತ್ತಿತ್ತು. ಆದರೆ ಸಂಪರ್ಕಿತರು ಮನೆಯಲ್ಲಿರದೆ ಹೊರಬಂದರೆ ದಂಡ ಶಿಕ್ಷೆ ಸೇರಿದಂತೆ ಬೇರೆ ಬೇರೆ ಕ್ರಮಗಳ ಎಚ್ಚರಿಕೆಯನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಸೊಂಕು ದೃಡಪಟವಾದ 15 ದಿನ ಆದರೂ ಯಾರು ಸಂಪರ್ಕಿಸುವುದಿಲ್ಲ. ಮೊದಲ ಅಲೆಯಲ್ಲಿ ನಗರದಲ್ಲಿ ಮೊದಲ ಸಾವು ಕಲಬುರಗಿ ಜಿಲ್ಲೆಯಲ್ಲಿ ಕಂಡು ಬಂದಿರುವುದು ವಿಷಾದನೀಯ , ಹೀಗಾಗಿ ನಿತ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವಿರ ಪ್ರಕರಣಗಳು ವರದಿಯಾಗಲೂ ಐದಾರು ತಿಂಗಳಾದರೆ ಈಗ ಸಾವಿರಾರು ಕ್ಕಿಂತ ಹೆಚ್ಚು ದಾಟುತ್ತಿದೆ ಎಂದು ಆಕ್ರೋಶ ಹೊರಹಾಕಿದರು.