ಮಹಾನಗರ ಪಾಲಿಕೆಯಲ್ಲಿ ಸ್ವಯಂ ಸೇವಕರು- ಪರಿಸರ ಸಂಘಟಕರ ಸಭೆ

ದಾವಣಗೆರೆ.ಜು.೨೧; ಮಹಾನಗರ ಪಾಲಿಕೆ ಹಾಗೂ ವಿವಿಧ ಸ್ವಯಂ ಸೇವಕರು, ಪರಿಸರ ಸಂಘಟನೆಯವರೊಂದಿಗೆ ಪಾಲಿಕೆ ಸಭಾಂಗಣದಲ್ಲಿ  ಮೇಯರ್ ಜಯಮ್ಮ ಗೋಪಿನಾಯ್ಕ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಪಾಲಿಕೆಯ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ ಮಾತನಾಡಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಲ್ಲಿ ಸಸಿಗಳನ್ನು ನೆಡುವ ಕುರಿತು, ಪಾರ್ಕ್ ನಲ್ಲಿ ನೀರಿನ ವ್ಯವಸ್ಥೆ ,ಸ್ವಚ್ಛಗೊಳಿಸುವ ಬಗ್ಗೆ ಹಾಗೂ ಸಸಿಗಳನ್ನು ನೆಟ್ಟು ನಿರ್ವಹಣೆಯನ್ನು ಮಾಡುವ ಬಗ್ಗೆ, ನಗರದಲ್ಲಿ ಮಳೆನೀರು ಕೊಯ್ಲು , ಘನ ತ್ಯಾಜ್ಯ ವಿಲೇವಾರಿ ಹಾಗೂ ಅನೇಕ ಸಂಘಟನೆಗಳನ್ನು ಇನ್ನಿತರೆ ಸ್ವಯಂ ಸೇವಾ ಸಂಘಗಳನ್ನು ಬಳಸಿಕೊಂಡು ದಾವಣಗೆರೆ ನಗರದಲ್ಲಿನ ಖಾಲಿ ಇರುವ ಉದ್ಯಾನನವನಗಳನ್ನು ಹಸರೀಕರಣ ಮಾಡಬೇಕೆಂಬುದರ ಬಗ್ಗೆ ಚರ್ಚಿಸಲಾಗಿದ್ದು ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಉದ್ಯಾನವನಗಳಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.ಸಭೆಯಲ್ಲಿ ಉಪ ಮೇಯರ್ ಗಾಯತ್ರಿ ಖಂಡೋಜಿರಾವ್, ಮಾಜಿ ಮಾಹಾಪೌರರರಾದ ಎಸ್.ಟಿ ವೀರೇಶ್ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು ಹಾಗೂ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.