ಮಹಾನಗರ ಪಾಲಿಕೆಯಲ್ಲಿ ಅಯೋಧ್ಯಾ ನಗರ ಸೇರ್ಪಡೆಗೆ ಒತ್ತಾಯ

ಕಲಬುರಗಿ,ನ.29-ಜಫರಾಬಾದ್ ಸರ್ವೆ ನಂಬರ್ 20ರಲ್ಲಿ ಬರುವ ಶ್ರೀ ಅಯೋಧ್ಯಾನಗರವನ್ನು ಮಹಾನಗರ ಪಾಲಿಕೆಯಲ್ಲಿ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಶ್ರೀ ಅಯೋಧ್ಯಾನಗರ ಹೋರಾಟ ಸಮಿತಿ ನೇತೃತ್ವದಲ್ಲಿ ಬಡಾವಣೆಯ ನಾಗರಿಕರು ಮಹಾನಗರ ಪಾಲಿಕೆ ಮುಂದೆ ಇಂದು ಧರಣಿ ಸತ್ಯಾಗ್ರಹ ನಡೆಸಿದರು.
ಈ ಬಡಾವಣೆಯ ನಾಗರಿಕರು ಮನೆ ತೆರಿಗೆ ಪಾವತಿಸುತ್ತಾರೆ. ಈ ಬಡಾವಣೆಗೆ ಮಹಾನಗರ ಪಾಲಿಕೆಯೇ ನೀರು ಸರಬರಾಜು ಸೌಲಭ್ಯ ಒದಗಿಸುತ್ತದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ ಇಲ್ಲಿನ ನಿವಾಸಿಗಳು ಮತ ಚಲಾಯಿಸುತ್ತಾರೆ. ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನ ಇಲ್ಲಿಗೆ ಬರುತ್ತದೆ. ಆದ್ದರಿಂದ ಶ್ರೀ ಅಯೋಧ್ಯಾನಗರವನ್ನು ಮಹಾನಗರ ಪಾಲಿಕೆಯಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿ ಗೌರವಾಧ್ಯಕ್ಷ ಬಾಬುಗೌಡ ಮಾಲಿಪಾಟೀಲ, ಅಧ್ಯಕ್ಷ ಸಂತೋಷ ಚವ್ಹಾಣ್, ಉಪಾಧ್ಯಕ್ಷ ಸಿದ್ರಾಮ ಶಂಕರಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ನೀಲಮ್ಮ ಧೂಳಕರವಾರ, ಪ್ರಧಾನ ಕಾರ್ಯದರ್ಶಿಗಳಾದ ಸಂಗೀತಾ ವೀರಯ್ಯ, ಜಗದೇವಿ ಪ್ರಕಾಶ, ಲಿಂಗಯ್ಯ ಮಠಪತಿ, ಮಲ್ಲಮ್ಮ ಗೋಳಾ, ಧನರಾಜ, ಕರಬಸಯ್ಯ ಮುತ್ಯಾ, ಶಿವಕುಮಾರ ಕುಂಬಾರ, ಚಿದಂಬರ ಪಂಚಾಳ, ವಿಜಯಲಕ್ಷ್ಮೀ ಸಿದ್ದರಾಮ, ಚಂದ್ರಕಲಾ ಅಮೃತ, ಜಯಶ್ರೀ ಚಂದ್ರಕಾಂತ, ತುಕರಾಮ ಅದುವೆ, ಲಕ್ಷ್ಮೀ ಅಷ್ಟಗಿ, ರೇವಣಸಿದ್ದಪ್ಪ ಕುಂಬಾರ, ಮಲ್ಲಿಕಾರ್ಜುನ ಮಂಠಾಳ, ಶರಣಬಸಪ್ಪ ಮಾಲಿಬಿರಾದಾರ, ಲಕ್ಷ್ಮಣ ಭೋಸಲೆ, ಜಗದೇವಿ ಪ್ರಕಾಶ, ಮಲ್ಲಮ್ಮ ಗೋಳಾ ಸೇರಿದಂತೆ ಬಡಾವಣೆಯ ನಾಗರಿಕರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.