ಮಹಾನಗರದ ಪಾಲಿಕೆ ಚುನಾವಣೆಗೆ ಮುಹೂರ್ತ‌:
ದೆಹಲಿಯಲ್ಲಿ ಡಿ.4 ಮತದಾನ, 7 ಮತಎಣಿಕೆ

ನವದೆಹಲಿ, ನ.4- ದೆಹಲಿ ಮಹಾನಗರ ಪಾಲಿಕೆ ರಾಜ್ಯ ಚುನಾವಣಾ ಆಯೋಗ ದಿನಾಂಕ ನಿಗಧಿ ಮಾಡಿದ್ದು ಡಿಸೆಂಬರ್ 4 ರಂದು ಮತದಾನ ನಡೆಯಲಿದ್ದು ಮತ್ತು ಡಿಸೆಂಬರ್ 7 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಮಹಾನಗರ ಪಾಲಿಕೆ ಚುನಾವಣೆಗೆ ನ.7 ರಂದು ಅಧಿಸೂಚನೆ ಹೊರಡಿಸಲಾಗುವುದು ನಾಮಪತ್ರ ಸಲ್ಲಿಕೆ ನ.14ಕ್ಕೆ ಕೊನೆಗೊಳ್ಳಲಿದೆ. ಉಮೇದುವಾರಿಕೆ ಹಿಂಪಡೆಯಲು ನ.19 ಕೊನೆಯ ದಿನವಾಗಿದೆ. ಚುನಾವಣೆಗೆ ಡಿಸೆಂಬರ್ 4ರಂದು ಮತದಾನ, ಡಿಸೆಂಬರ್ 7ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯುಕ್ತ ವಿಜಯ್ ದೇವ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇವೆ. ಮತಗಟ್ಟೆಗಳನ್ನು ಮರು ಚಿತ್ರಿಸಲಾಗಿದೆ. ಈಗ ದೆಹಲಿಯಲ್ಲಿ 250 ವಾರ್ಡ್‌ಗಳಿಗೆ ಚುನಾವೇ ನಡೆಯಲಿದೆ. . ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ 68 ವಿದಾನಸಭಾ ಕ್ಷೇತ್ರಗಳಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ ಎಂದು ಹೇಳಿದರು.

ಪರಿಶಿಷ್ಟಜಾತಿಗೆ 42 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ , ಎಲ್ಲಾ ಸಮುದಾಯಕ್ಕೆ ಮೀಸಲಾತಿ‌ ನೀಡಿ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ಚುನಾವಣೆಯನ್ನು ಮುಕ್ತ ನ್ಯಾಯ ಸಮ್ಮತವಾಗಿ ನಡೆಸಲು ಆಯೋಗ ಎಲ್ಲಾ ಸಿದ್ದತಡಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣೆಗೆ ಬಾರಿ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ರಿದೆ ಎಂದು ಮಾಹಿತಿ ನೀಡಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತರೂಢ ಎಎಪಿ, ಪ್ತತಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಯತ್ನ ನಡೆಸಿವೆ.