ಮಹಾಧನ ಸ್ಮಾರ್ಟೆಕ್ ಬಳಕೆಯಿಂದ ಇಳುವರಿ ಹೆಚ್ಚಳ

ಚಿತ್ರದುರ್ಗ.ಜ.೧೧; ಭಾರತದ ಪ್ರಮುಖ ರಸಗೊಬ್ಬರ ತಯಾರಕರಲ್ಲಿ ಒಬ್ಬರಾದ ಸ್ಮಾರ್ಟ್ಕೆಮ್ ಟೆಕ್ನಾಲಜೀಸ್ ಲಿಮಿಟೆಡ್ (ಎಸ್.ಟಿ.ಎಲ್) ಈರುಳ್ಳಿ ಬೆಳೆಗೆ ನವೀನ ಮಹಾಧನ ಸ್ಮಾರ್ಟೆಕ್ 10:26:26 ಶ್ರೇಣಿಯ ರಸಗೊಬ್ಬರವನ್ನು ಹೊಂದಿದೆ.  ಸ್ಮಾರ್ಟೆಕ್’ ಒಂದು ವಿಶಿಷ್ಟವಾದ, ಸುಧಾರಿತ ತಂತ್ರಜ್ಞಾನ ಹೊಂದಿದೆ. ಬೇರಿನ ವಲಯ  ಸುಧಾರಿಸುವ ಮೂಲಕ ಇದು ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಅನುವುಮಾಡುತ್ತದೆ. ಹೆಚ್ಚಿನ ಇಳುವರಿ ನೀಡುತ್ತದೆ. ಇದು ಹೆಚ್ಚಿನ, ವೆಚ್ಚ ಹಾಗೂ ಅದರ ಲಾಭದ ಅನುಪಾತ   (ಎಂ.ಸಿ.ಬಿ.ಆರ್) ಅನ್ನು ನೀಡುತ್ತದೆ ಅಂದರೆ ಸ್ಮಾರ್ಟೆಕ್’ ಗೊಬ್ಬರಕ್ಕಾಗಿ ಹೆಚ್ಚುವರಿ ರೂ.100 ಖರ್ಚು ಮಾಡಿದರೆ, ರೈತರು ರೂ.1000 ಕ್ಕಿಂತ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. (ಕೃಷಿವಿಶ್ವವಿದ್ಯಾಲಯಗಳು, ಐ.ಸಿ.ಎ.ಆರ್ ಸಂಶೋಧನಾ ಕೇಂದ್ರಗಳು ಮತ್ತು ದೊಡ್ಡ ಪ್ರಮಾಣದಲ್ಲಿ ರೈತರ ಹೊಲದಲ್ಲಿನ ಪ್ರಾತ್ಯಕ್ಷಿಕೆಗಳ ವಿವಿಧ ಸಂಶೋಧನಾ ಅಧ್ಯಯನಗಳ ಆಧಾರದಮೇಲೆ).ಸ್ಮಾರ್ಟೆಕ್ ತಂತ್ರಜ್ಞಾನದಿAದಾಗಿ ಬಿಳಿ ಬೇರುಗಳು ಹೆಚ್ಚಳವಾಗಿವೆ. ಈರುಳ್ಳಿ ಬೆಳೆಯಲ್ಲಿ ಹೆಚ್ಚಿನ ಸಂಖ್ಯೆಯ ಗ್ರೇಡ್ ಎ. ಬಿ  ಗಡ್ಡೆಗಳನ್ನು ನೀಡಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕರೆ ತಾಲೂಕಿನ ಮೀರಸಾಬಿಹಳ್ಳಿ ಗ್ರಾಮದ ರವಿಕುಮಾರ, ಈರುಳ್ಳಿ ಬೆಳೆಯಲ್ಲಿ ಮಹಾಧನ ಸ್ಮಾರ್ಟೆಕ್ 10.26.26 ಬಳಸಿದ್ದರಿಂದ ಹಚ್ಚ ಹಸಿರಾದ ಎಲೆಗಳು , ಬೆಳೆಯ ಎತ್ತರ ಹೆಚ್ಚಾಗಿದೆ. ಈರುಳ್ಳಿ ಗಡ್ಡೆಗಳ ಗಾತ್ರ, ಬಣ್ಣ ಹಾಗು ಗ್ರೇಡ್ ಎ &ಬಿ ಗಾತ್ರದ ಗಡ್ಡೆಗಳು ಹೆಚ್ಚಾಗಿವೆ. ಇದರಿಂದಾಗಿ ಪ್ರತಿ ಎಕರೆಗೆ 10 ಕ್ವಿಂಟಲ್ ಹೆಚ್ಚಿನ ಇಳುವರಿ ದೊರೆತಿದೆ.