ಮಹಾದ್ವಾರ ನಿರ್ಮಾಣಕ್ಕೆ ಭೂಮಿಪೂಜೆ

ಸಂಶಿ,ಡಿ28: ಗ್ರಾಮದ 4 ನೆ ವಾರ್ಡಿನ ಪರಿಶಿಷ್ಟ ಜಾತಿ ಉಪಯೋಜನೆಯಡಿ ಡಾ. ಬಿ. ಆರ್ ಅಂಬೇಡ್ಕರ್ ಮುಖ್ಯದ್ವಾರ ನಿರ್ಮಾಣದ ಭೂಮಿಯ ಪೂಜೆಯನ್ನು ಗ್ರಾಪಂ ಅಧ್ಯಕ್ಷ ರಾಜು ಪುಟ್ಟಣ್ಣವರ ನೆರವೇರಿಸಿದರು.

ಗ್ರಾಮಗಳ ಅಭಿವೃದ್ಧಿಗೆ ಸರ್ಕಾರಗಳು ಹತ್ತು ಹಲವಾರು ಯೋಜನೆಯನ್ನು ನೀಡಿದ್ದು, ಅವುಗಳನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಹಿರಿಯ ಸದಸ್ಯ ಮಲ್ಲೇಶ ಬೆಳವಡಿ ಮಾತನಾಡಿ ಪರಿಶಿಷ್ಟ ಸಮಾಜದ ಅಭಿವೃದ್ಧಿಗೆ ಗ್ರಾಪಂ ಅನುದಾನ ಮಿಸಲಿಟ್ಟಿದ್ದು ಜನರ ಸೇವೆಗೆ ತಾವು ಸದಾ ಸಿದ್ದ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ,ಗ್ರಾಪಂ ಸದಸ್ಯರಾದ ಮಲ್ಲೇಶ ಬೆಳವಡಿ, ಯಲ್ಲವ್ವ ಭಜಂತ್ರಿ, ರೇಖಾ ಅ ಕರೀಶಣ್ಣವರ, ಇರ್ಷಾದ ಮುಲ್ಲಾ ಅಲತಾಪ್ ಮುಲ್ಲಾ, ನೀಲಮ್ಮ ಹೂಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.