ಮಹಾದ್ವಾರದ ಕನಸು ಸಾಕಾರ


ಲಕ್ಷ್ಮೇಶ್ವರ ಜ 10 : ಬಾದಾಮಿಯ ಚಾಲುಕ್ಯರ ಕಾಲದ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಸೋಮೇಶ್ವರ ದೇವಸ್ಥಾನ ಇನ್ಫೋಸಿಸ್ ನ ಶ್ರೀಮತಿ ಡಾ. ಸುಧಾ ಮೂರ್ತಿ ಅವರು ಸುಮಾರು 6.5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸುದರ ಮೂಲಕ ಮತ್ತೇ ದೇವಸ್ಥಾನಕ್ಕೆ ಮತ್ತೆ ಸಾವಿರಾರು ವರ್ಷಗಳ ಇತಿಹಾಸ ಉಳಿಯುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ ಅನೇಕ ವರ್ಷಗಳಿಂದಲ್ಲೂ ಈ ಐತಿಹಾಸಿಕ ಪ್ರಸಿದ್ಧವಾದ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ಮಹಾದ್ವಾರ ನಿರ್ಮಾಣ ಮಾಡಬೇಕೆಂಬ ಆಶಯ ಅನೇಕ ವರ್ಷಗಳಿಂದಲೂ ಭಕ್ತರನ್ನು ಕಾಡುತ್ತಿತ್ತು.
ಈಗ ಮಹಾದ್ವಾರದ ನಿರ್ಮಾಣಕ್ಕೆ ಕ್ಷೇತ್ರದ ಶಾಸಕರಾದ ರಾಮಣ್ಣ ಎಸ್. ಲಮಾಣಿಯವರಿಗೆ ದೇವಸ್ಥಾನದ ಹಿರಿಯರ ನಿಯೋಗವೊಂದು ಈ ಬೇಡಿಕೆಯನ್ನು ಮುಂದಿಟ್ಟರು.
ಕೂಡಲೇ ಹಿರಿಯರ ನಿಯೋಗಕ್ಕೆ ರಾಮಣ್ಣ ಲಮಾಣಿಯವರು ಮಹಾದ್ವಾರದ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಹಾದ್ವಾರಕ್ಕೆ ಶಾಸಕ ಲಮಾಣಿಯವರು ಮಹಾದಾನಿಗಳಾಗಿ ಭಕ್ತರ ಆಸೆಗೆ ಸ್ಪಂದಿಸುವ ಮೂಲಕ ಅನೇಕ ವರ್ಷಗಳ ಕನಸನ್ನು ಸಾಕಾರಗೊಸಿದ್ದಾರೆ.
ನಾಳೆ ಮುಂಜಾನೆ 10 ಗಂಟೆಗೆ ಪಟ್ಟಣದ ಗದಗ ನಾಕಾ ಹತ್ತಿರ ಪೂರ್ವ ದಿಕ್ಕಿನಲ್ಲಿ ಮಹಾದ್ವಾರದ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ಮತ್ತು ಅಡಿಗಲ್ಲುನ್ನು ಸಾಕಾಗೊಳಿಸಲಿದ್ದಾರೆ.