ಮಹಾದೇವ ತಾತ ನುಡಿಸಿರಿಗೆ ಜೆಎಂ ವೀರ ಸಂಗಯ್ಯ ಸರ್ವಾಧ್ಯಕ್ಷರಾಗಿ ಆಯ್ಕೆ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಫೆ.13 ತಾಲೂಕಿನ  ಹಂಪ ಸಾಗರದ ಮಹದೇವ ತಾತ ಮಠದಲ್ಲಿ ಫೆ.15 ರಂದು  ಪ್ರಥಮ ಬಾರಿಗೆ ಮಹದೇವ ತಾತ ನುಡಿಸಿರಿ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
 ಕಾರ್ಯಕ್ರಮದ ಸರ್ವಾಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾದ ಮಾನ್ಯ ಜೆಎಂ ವೀರ ಸಂಗಯ್ಯ ಅವರನ್ನು ಹಂಪಸಾಗರದ ಷಟಸ್ಥಲ ಬ್ರಹ್ಮಿ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಆಹ್ವಾನಿಸಿದರು.
 ನಂತರ ಶ್ರೀಗಳು ಮಾತನಾಡಿ ಮಹದೇವ ತಾತ ಜಾತ್ರೆಯ ಪ್ರಯುಕ್ತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಈ ವರ್ಷ ಪ್ರಾರಂಭಿಸಲಾಗಿದೆ ಮುಂದಿನ ದಿನಮಾನಗಳಲ್ಲಿ ಜಾತ್ರೆಯ ಸಂದರ್ಭದಲ್ಲಿ ಸಾಹಿತ್ಯ ಹಾಗೂ ರಂಗಭೂಮಿ ಚಟುವಟಿಕೆಗಳನ್ನ ಮಠದಲ್ಲಿ ನಡೆಸಲಾಗುವುದು. ತಾಲೂಕಿನ ಸಾಧಕರನ್ನು ಒಬ್ಬೊಬ್ಬರನ್ನಾಗಿ ಗುರುತಿಸುವುದು ಮಠದ ಕಾರ್ಯವಾಗಿದೆ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಹಿತಿಕ ಕಾರ್ಯಕ್ರಮಗಳನ್ನು ವೈಚಾರಿಕ ವಾತಾವರಣವನ್ನು ಜನರಲ್ಲಿ ಮೂಡಿಸುವುದು ಈ ನುಡಿಸಿರಿ ಯ ಉದ್ದೇಶವಾಗಿದೆ ಎಂದರು.
ಜೆ ಎಂ ವೀರ ಸಂಗಯ್ಯ ಮಾತನಾಡಿ ಸರ್ವಾಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿದ್ದು ಖುಷಿ ತಂದಿದೆ ತಾವು ಅತ್ಯಂತ ಹೆಮ್ಮೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ನುಡಿದರು
 ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ್ ಖಜಾಂಚಿ ಹಂಪ ಸಾಗರದ ಮಠದ ಭಕ್ತಾದಿಗಳಾದ ಕೋಣಿ ಮಾರುತಪ್ಪ ನಾರಾಯಣಪ್ಪ ತೊಂಡಿಹಾಳ್ ಹೋಬಳಿ ಘಟಕದ ಅಧ್ಯಕ್ಷರಾದ ಲಿಂಗದಳ್ಳಿ ಬಸವರಾಜಪ್ಪ ಇದ್ದರು

One attachment • Scanned by Gmail