ಮಹಾತ್ಮ ಗಾಂಧೀಜಿಯವರ ಜೀವನದ ಅಪರೂಪದ ವಿಶೇಷ ಛಾಯಾಚಿತ್ರಗಳ ಪ್ರದರ್ಶನ

ವಿಜಯಪುರ, ಮಾ.30-ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಇಂದು ನಗರದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಮಹಾತ್ಮ ಗಾಂಧೀಜಿಯವರ ಜೀವನ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿನ ಅಪರೂಪದ ಸಂಗತಿಗಳ ಬಗ್ಗೆ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಗುಜರಾತ್ ನ ಪೆÇೀರ್ ಬಂದರ್ ನಲ್ಲಿ ಹುಟ್ಟಿದ ಮೋಹನ ದಾಸ್ ಕರಮ್ ಚಂದ್ ಗಾಂಧೀಜಿ ವಿದೇಶದಲ್ಲಿ ಕಾನೂನು ಉನ್ನತ ಪದವಿಯನ್ನು ಪಡೆದರು. ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ನಡೆಸಲು ಹೋದ ಗಾಂಧೀಜಿ ಅನ್ಯಾಯಗಳ ವಿರುದ್ಧ ಹೋರಾಡುವ ಮನೋಭಾವವನ್ನು ಬೆಳೆಸಿಕೊಂಡಿರುವ ಅಪರೂಪದ ಛಾಯಾಚಿತ್ರಗಳನ್ನು ಮೂಡಿಬಂದಿದೆ.
ವಕೀಲಿ ವೃತ್ತಿಯಲ್ಲಿ ಒಳ್ಳೆಯ ಹೆಸರು ಪಡೆದ ಮೋಹನದಾಸ ಕರಮಚಂದ ಗಾಂಧೀಜಿ ದಕ್ಷಿಣ ಆಫ್ರಿಕಾದ ಭಾರತೀಯ ಸಮುದಾಯದ ಗಣ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರಿಗೆ ಆಗುತ್ತಿದ್ದ ಅನಾನುಕೂಲತೆಗಳನ್ನು ಸರಿಪಡಿಸಲು ಹೋರಾಟದ ಮಾರ್ಗವನ್ನು ಕೈಗೆತ್ತಿಕೊಂಡರು. ಅದಕ್ಕೆ ರಾಷ್ಟ್ರ ನೇತಾರ ಗೋಪಾಲಕೃಷ್ಣ ಗೋಖಲೆಯವರು ಪ್ರೇರಣೆ ನೀಡಿರುವ ಚಿತ್ರಗಳನ್ನು ನಾವು ಕಾಣಬಹುದು.
1924ರ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಗಾಂಧೀಜಿ ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನದ ಭಾವಚಿತ್ರಗಳನ್ನು ಕಾಣಬಹುದು.
ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿ ಭಾರತವನ್ನೆಲ್ಲಾ ಸುತ್ತಿ ಬಂದು ಸ್ವಾತಂತ್ರ್ಯ ಹೋರಾಟದ ಜೊತೆಗೆ ಅನೇಕ ಕಾರ್ಯಗಳನ್ನು ಅನುಷ್ಠಾನಗೊಳಿಸಿದರು . ಬ್ರಿಟಿಷ್ ಸರ್ಕಾರದ ವಿರುದ್ಧ ಸತ್ಯಾಗ್ರಹ ಚಳುವಳಿಯನ್ನು ಬೇರೆಬೇರೆ ವಿಧಾನಗಳ ಮೂಲಕ ಕೈಗೊಂಡರು. ಅದರಲ್ಲಿ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ, ಅಸಹಕಾರ ಚಳುವಳಿ ಮುಖ್ಯವಾದ ಭಾವಚಿತ್ರಗಳನ್ನು ಕಾಣಬಹುದು..
ಮಹಾತ್ಮ ಗಾಂಧೀಜಿ ಅವರು ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಮ್ಮೆ ಮಾತ್ರ ಅದು ಕನ್ನಡನಾಡಿನ ಬೆಳಗಾವಿಯಲ್ಲಿ 19 24 ರಲ್ಲಿ ನಡೆದ ಅಧಿವೇಶನದಲ್ಲಿ ಅಧಿವೇಶನದ ಸವಿನೆನಪಿಗಾಗಿ ಬೆಳಗಾವಿಯಲ್ಲಿ ಸ್ಮಾರಕ ಸ್ಮಾರಕ ಭವಾನ ಒಂದನ್ನು ನಿರ್ಮಿಸಿದ್ದು ಪ್ರೇಕ್ಷಣೀಯ ಸ್ಥಳವಾಗಿ ನಾವು ಕಾಣಬಹುದು.
ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದಲ್ಲಿ ಮಹಾತ್ಮ ಗಾಂಧೀಜಿಯವರು ದೇಶದುದ್ದಕ್ಕೂ ನಿರಂತರ ಸಂಚಾರ ನಡೆಸಿದ್ದರು. ಕರ್ನಾಟಕಕ್ಕೆ ಬಾಪುರವರು 18ಕ್ಕೂ ಹೆಚ್ಚು ಸಲ ಭೇಟಿಕೊಟ್ಟಿದ್ದರು. ಸ್ವಾತಂತ್ರ್ಯ ಅಂದೋಲನದ ಜೊತೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹರಡುವ ರಚನಾತ್ಮಕ ಕೆಲಸಗಳನ್ನು ಮಹಾತ್ಮರು ಮಾಡಿರುವ ಭಾವಚಿತ್ರಗಳನ್ನು ಕಾಣಬಹುದು.
ಬಾಪೂಜಿ ಕೈಗೊಳ್ಳುತ್ತಿದ್ದ ಪ್ರವಾಸಗಳ ಹಿನ್ನೆಲೆಯಲ್ಲಿ ಒಂದಲ್ಲ ಒಂದು ರಚನಾತ್ಮಕ ಕಾರ್ಯಕ್ರಮಗಳು ಇರುತ್ತಿದ್ದವು ನೇರವಾಗಿ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳು ರೂಪುಗೊಳ್ಳುತ್ತಿದ್ದವು ಕರ್ನಾಟಕ ಪ್ರವಾಸ ಸಂದರ್ಭದಲ್ಲಿ ಜನರೊಂದಿಗೆ ಮುಖಾಮುಖಿಯಾಗುತ್ತಿದ್ದ ಅನೇಕ ಸಾಮಾಜಿಕ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿಯ ಚಟುವಟಿಕೆಗಳ ಪರಿಚಯ ಮಾಡಿಕೊಳ್ಳುತ್ತಿರುವ ಅಪರೂಪದ ಭಾವಚಿತ್ರಗಳನ್ನು ನಾವು ಕಾಣಬಹುದು.
ಗಾಂಧೀಜಿ ಕಣ್ಮರೆಯಾಗಿ 67 ವರ್ಷಗಳು ಕಳೆದು ಹೋದರು ಈಗಲೂ ಅವರು ಪ್ರಸ್ತುತ. ಶಾಂತಿ ಸೇನಾನಿಯಾಗಿ ಅಹಿಂಸಾ ಮಾರ್ಗದಲ್ಲಿ ನಡೆದು ಬಾಪೂಜಿಯ ಆಂದೋಲನ ಈಗ ಇಡೀ ದೇಶವೇ ಅನುಸರಿಸುತ್ತಿರುವ ಮಾರ್ಗ. ಗಾಂಧೀಜಿ ರೂಪಿಸಿದ ಸತ್ಯಾಗ್ರಹ ಚಳುವಳಿಗಳನ್ನು ಅನುಸರಿಸಿ ಸ್ವಾತಂತ್ರ್ಯ ಪಡೆದ ದೇಶಗಳು ಹಲವಾರು. ಸಮಾಜದ ಉನ್ನತಿಗಾಗಿ ಗಾಂಧೀಜಿಯವರು ರೂಪಿಸಿಕೊಟ್ಟ ಕಾರ್ಯಕ್ರಮಗಳು ಸದಾ ಸ್ಮರಣೀಯ.
ಗಾಂಧಿ ಗ್ರಾಮ ಎಂದೇ ಹೆಸರಾದ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಅನೇಕ ಗ್ರಾಮೋದ್ಯೋಗ ಪ್ರಾತ್ಯಕ್ಷಿಕೆಗಳನ್ನು ವ್ಯವಸ್ಥೆಮಾಡಲಾಗಿದೆ. ಇಂದಿಗೂ ಅಲ್ಲಿ ಹಲವಾರು ಗಾಂಧಿ ಪ್ರಣಿತ ಗ್ರಾಮ ಕೈಗಾರಿಕೆಗಳು ಅಸ್ತಿತ್ವದಲ್ಲಿವೆ.
ಗ್ರಾಮಸ್ವರಾಜ್ಯ, ಕುಷ್ಠರೋಗ ನಿವಾರಣೆ, ಸ್ವದೇಶಿ ಆಂದೋಲನ, ಹೀಗೆ ಹಲವಾರು ಗಾಂಧಿ ಪ್ರಣೀತ ಕಾರ್ಯಕ್ರಮಗಳನ್ನು ಸ್ವತಂತ್ರಹೋರಾಟದ ಜೊತೆಜೊತೆಗೆ ಭಾರತೀಯ ಮಣ್ಣಿನಲ್ಲಿ ರೂಢಿಗೆ ತಂದ ಹೆಗ್ಗಳಿಕೆ ಮಹಾತ್ಮ ಗಾಂಧೀಜಿಯವರು ಭಾವಚಿತ್ರಗಳನ್ನು ನಾವು ಕುಷ್ಟರೋಗ ಪೀಡಿತರಾದವರಿಗೆ ಮಾಡುತ್ತಿರುವುದು ಅಪರೂಪದ ಭಾವಚಿತ್ರ ಮುಖಾಂತರ ಕಾಣಬಹುದು.
ಬೆಂಗಳೂರಿನ ರಾಷ್ಟ್ರೀಯ ಹೈನುಗಾರಿಕೆ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿಯವರು ಪಶುಪಾಲನೆ ಕುರಿತ ಮಾಹಿತಿಯನ್ನು ಪಡೆದುಕೊಂಡರು. ಅವರು ಸಂಸ್ಥೆಯ ಸಂದರ್ಶಕರ ಪುಸ್ತಕದಲ್ಲಿ ಸಹಿಮಾಡಿ ತಮ್ಮ ಹೆಸರಿನ ಜೊತೆಯಲ್ಲಿ ಸಬರಮತಿ ಆಶ್ರಮ ಎಂದು ನಮೂದಿಸಿರುವುದನ್ನು ನಾವು ಭಾವಚಿತ್ರದ ಮುಖಾಂತರ ಕಾಣಬಹುದು.
ತಳ ಸಮುದಾಯದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವುದರ ಜೊತೆಗೆ ಮನುಷ್ಯರೆಲ್ಲರೂ ಒಂದೇ ಜಾತಿಯ ಸೇರಿದವರೆಂಬ ಸಂದೇಶ ಸಾರಲು ಮಹಾತ್ಮರಿಗೆ ಪ್ರವಾಸವನ್ನು ಕೈಗೊಂಡರು. 1932 ರಲ್ಲಿ ಮಹಾತ್ಮರು ಆರಂಭಿಸಿದ ಹರಿಜನ್ ನಿಧಿ ಪ್ರವಾಸದಲ್ಲಿ ಸಂಗ್ರಹವಾದ ಹಣವನ್ನು ಹರಿಜನ ಅಭಿವೃದ್ಧಿ ಕಾರ್ಯಗಳಿಗಾಗಿ ಉಪಯೋಗಿಸಲಾಯಿತು. ಈ ಸಂದರ್ಭದಲ್ಲಿ ಹರಿಜನರ ಏಳಿಗೆಗಾಗಿ ಕರ್ನಾಟಕದಲ್ಲಿ ಎರಡು ಬಾರಿ ನಿಧಿ ಪ್ರವಾಸ ಕೈಗೊಂಡರು ಅದರಲ್ಲಿ ಬಿಜಾಪುರ ಈಗಿನ ವಿಜಯಪುರ ಹರಿಜನ ಪ್ರವಾಸದಲ್ಲಿ ಗಾಂಧೀಜಿಯವರ ಸಭೆ ಸೇರಿದ್ದು 1934 ಅಪರೂಪದ ಭಾವಚಿತ್ರವನ್ನು ನಾವು ಕಾಣಬಹುದು.
ಭಾರತೀಯರ ಸಾರ್ವಜನಿಕ ಬದುಕಿಗೆ ಹೊಸ ಅರ್ಥ ಕೊಟ್ಟ ಬಾಪೂಜಿ ದೇಶ-ವಿದೇಶಗಳಲ್ಲೂ ಸಂಚರಿಸಿ ನೈಜ ಭಾರತವನ್ನು ಪರಿಚಯಿಸುವ ಕಾರ್ಯಗಳನ್ನು ಹಮ್ಮಿಕೊಂಡರು. ಗ್ರಾಮೀಣಾಭಿವೃದ್ಧಿ, ದಲಿತರಿಗೆ ಏಳಿಗೆ ಮೊದಲಾದ ಅರ್ಥಪೂರ್ಣ ಯೋಜನೆಗಳನ್ನು ಕಾರ್ಯಗತಗೊಳಿಸಿರುವ ಭಾವಚಿತ್ರ ಕಾಣಬಹುದು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಈ ಛಾಯಾಚಿತ್ರವನ್ನು ಅಪರ್ ಜಿಲ್ಲಾಧಿಕಾರಿ ರಮೇಶ ಕಳಸದ ಅವರು ವೀಕ್ಷಿಸಿದರು.
ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎಸ್.ಜಿ. ಲೋನಿ, ಸೈಕ್ಲಿಂಗ್ ಕ್ರೀಡಾಪಟುಗಳು, ವಿಧ್ಯಾರ್ಥಿಗಳು, ಸಾರ್ವಜನಿಕರು ಛಾಯಾಚಿತ್ರ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೈಮಾನ ನದಾಫ ಉಪಸ್ಥಿತರಿದ್ದರು.