ಮಹಾತ್ಮ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಅ.09: ತಾಲೂಕಿನ ಹ್ಯಾಳ್ಯಾ ಗ್ರಾಮದ ಉತ್ತಂಗಿ ಕೊಟ್ರೇಶ ಅವರಿಗೆ ಮಹಾತ್ಮ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ    ಜನ ಸ್ನೇಹಿ ಫೌಂಡೇಶನ್ ಹಾಗೂ ಶ್ರೀ ನಿಧಿ ಫೌಂಡೇಶನ್ ಇವರ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ವಿವಿಧ  ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಪ್ರಶಸ್ತಿ ಪ್ರಧಾನ ಕೈಗೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದ ಉತ್ತಂಗಿ ಕೊಟ್ರೇಶ, ಪಟ್ಟಣದ ಮನೋಹರ್ ಹೆಚ್, ಚಿಗಟೇರಿ ಕೊಟ್ರೇಶ್, ನಿವೃತ್ತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಕುಬೇರಪ್ಪ ಅವರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಉತ್ತಂಗಿ ಕೊಟ್ರೇಶ  ಪತ್ರಿಕೋದ್ಯಮ ಕ್ಷೇತ್ರದಲ್ಲಿ  ಸೇವೆ ಸಲ್ಲಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ನ್ಯೂನತೆಗಳು ಸರಿಪಡಿಸಿ ಅಂಕು ಡೊಂಕುಗಳನ್ನು ತಿದ್ದುವಲ್ಲಿ ನಿರಂತರವಾಗಿ ಸೇವೆ ಅಪಾರವಾದುದರಿಂದ ಪತ್ರಿಕಾ  ಕ್ಷೇತ್ರವನ್ನು ಗುರ್ತಿಸಿ  ಮತ್ತು  ಹೆಚ್. ಮನೋಹರ ಅವರಿಗೆ ಸಂಗೀತ ಕ್ಷೇತ್ರ,  ಚಿಗಟೇರಿ ಕೊಟ್ರೇಶ್ ಪತ್ರಿಕೋದ್ಯಮ ಕ್ಷೇತ್ರ ಹಾಗೂ ಕುಬೇರಪ್ಪ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದರಿಂದ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಮಹಾತ್ಮ ಗಾಂಧೀಜಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ  ಪ್ರಧಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ  ಸಾಧನೆಗೈದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗುರು ಶಾಂತವೀರ ಶಿವಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ  ಶ್ರೀನಿಧಿ ಫೌಂಡೇಶನ್ ಅಧ್ಯಕ್ಷರಾದ  ಜ್ಯೋತಿ ಶಿವಕ್ಕ, ಸ್ನೇಹಿತ ಫೌಂಡೇಶನ್ ಅಧ್ಯಕ್ಷರಾದ ಎಫ್.ಕೆ ನಿಗದಿ, ಸಮಾಜ ಸೇವಕರಾದ ಎ.ಬಿ ಉಪ್ಪಿನ, ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಲಿಂಗರಾಜು ಅಂಗಡಿ, ವಿಜಯ ಕರ್ನಾಟಕದ ವರದಿಗಾರರಾದ ವಿಜಯ ಕುಮಾರ್  ಪೂಜಾರ್ ಹಾಗೂ ಇತರರು ಉಪಸ್ಥಿತರಿದ್ದರು.

One attachment • Scanned by Gmail