
ಚಿತ್ರದುರ್ಗ.ಏ.೧೫;: ಮಹಾತ್ಮರ ತತ್ವಾದರ್ಶಗಳಿಂದ ಅಂತರAಗದ ವಿಕಾಸ ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ಆಯೋಜಿಸಿದ್ದ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಭಾರತ ದೇಶ ಚಿಂತಕರು, ಮಹಾತ್ಮರು, ದಾರ್ಶನಿಕರ ಜನನದಿಂದ ವಿಶ್ವಗುರುವಾಗಿದೆ. ಬುದ್ದ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಮುಂತಾದ ದಾರ್ಶನಿಕರ ತತ್ವಾದರ್ಶಗಳ ಆಚರಣೆಯಿಂದ ನಮ್ಮ ಬದುಕು ಸುಂದರವಾಗುತ್ತದೆ ಎಂದರು. ಮಹಾತ್ಮರ ತತ್ವಗಳು, ಜೀವನ ಮತ್ತು ಸಾಧನೆಗಳು ಸಾಮಾಜಿಕ ಸಮಾನತೆಯ ಅಂಶಗಳನ್ನು ಒಳಗೊಂಡಿವೆ. ಸಮಾನತೆಯ ತುಡಿತ ಹೊಂದಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರು ಸಮಾನತೆಯ ಆಶಯವಿರುವ ಅಂಶಗಳನ್ನು ಸಂವಿಧಾನದಲ್ಲಿ ನಮಗೆ ತಿಳಿಸಿದ್ದು ಆಶಯಗಳ ಅನುಸರಣೆಯಿಂದ ನಾವು ನೆಮ್ಮದಿ ಜೀವನ ನಡೆಸಬಹುದು ಎಂದು ತಿಳಿಸಿದರು.ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಕೆ.ಎಂ.ನಾಗರಾಜು, ಕೆ.ಜಿ.ಪ್ರಶಾಂತ್, ಸಿ.ಎಸ್.ಲೀಲಾವತಿ, ವಿ.ಕನಕಮ್ಮ, ಯು.ಸಿದ್ದೇಶಿ, ನಿತ್ಯಾನಂದ, ಎನ್.ಮಂಜುನಾಥ್, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು, ದ್ವಿತೀಯ ದರ್ಜೆ ಸಹಾಯಕಿ ವನಜಾಕ್ಷಮ್ಮ, ಡಿ.ದರ್ಜೆ ನೌಕರರಾದ ಗೀತಾ, ಅನಸೂಯಮ್ಮ, ಬೋಸಯ್ಯ ಮತ್ತಿತರರಿದ್ದರು.