ಮಹಾತ್ಮರ ಚರಿತ್ರೆಯನ್ನು ಓದಿ, ಅವರ ಮಾರ್ಗದರ್ಶನದಲ್ಲಿ ನಡೆಯಿರಿ

ಕಲಬುರಗಿ.ಸೆ.15: ವಿದ್ಯಾರ್ಥಿಗಳು ಮಹಾತ್ಮರ ಚರಿತ್ರೆಯನ್ನು ಓದಿ ಅವರ ದಾರಿಯಲ್ಲಿ ಸಾಗಬೇಕು ಎಂದು ಶರಣಬಸವ ವಿಶ್ವವಿದ್ಯಾಲಯಾದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಾಪಕ ಡಾ.ಸುರೇಶ್ ಜಿ. ಪಾಟೀಲ್ ಹೇಳಿದರು.
ಗುರುವಾರದಂದು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರ ಕಲಬುರಗಿ ಇವುಗಳ ಸಂಯೋಗದೊಂದಿಗೆ ವಿಶ್ವ ಓಜೋನ್ ಮತ್ತು ರಾಷ್ಟ್ರೀಯ ಇಂಜಿನೀಯರ್ ದಿನಾಚರಣೆ ಅಂಗವಾಗಿ ಆಯೋಜಿಸಿದ ಇಂಜಿನೀಯರ್ಸ್ ದಿನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮರ ಜೀವನಗಳೆ ನಮಗೆ ದಾರಿದೀಪವಾಗಿವೆ ಎಂದರು.

ಸರ್.ಎಂ.ವಿಶ್ವೇಶ್ವರಯ್ಯನವರು ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಸಾಧನೆ, ನಡೆದು ಬಂದ ದಾರಿ ಸ್ಫೂರ್ತಿದಾಯಕ. ವಿಶ್ವೇಶ್ವರಯ್ಯನವರು ಶಿಸ್ತು, ಸರಳತೆ, ವಿದ್ಯೆಯಲ್ಲಿ ಆಸಕ್ತಿ, ಸಮಯ ಪಾಲನೆ, ಶಿಕ್ಷಕರ ವಿಧೇಯಕ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ವಿದ್ಯಾರ್ಥಿಗಳು ಶಿಸ್ತು ಮತ್ತು ಕ್ರಮಬದ್ಧ ಜೀವನ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮಹಾನ್ ಪುರುಷರೆಲ್ಲ ಬಡತನ ಹಿನ್ನೆಲೆಯಿಂದಲೇ ಬಂದು ಸಾಧನೆ ಮಾಡಿದವರಾಗಿದ್ದಾರೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ನಾಲ್ಕು ಅಂಶಗಳನ್ನ ಪರಿಪಾಲನೆ ಮಾಡುವುದು ಮುಖ್ಯ. ಕಠಿಣ ಪರಿಶ್ರಮ, ನಿμÉ್ಠ, ಜವಾಬ್ದಾರಿ ಹಾಗೂ ಜ್ಞಾನ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಜೀವನದ ಉತ್ತುಂಗಕ್ಕೆ ಏರಬಹುದು ಎಂದರು.
ಕರ್ನಾಟಕದ ಕೃಷ್ಣರಾಜಸಾಗರ ಅಣೆಕಟ್ಟು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು, ನಿರ್ಮಾಣದ ಕೀರ್ತಿ ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ. 1904ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಸಾಧನೆಗಳನ್ನು ಮೆಚ್ಚಿ ಸರ್ಕಾರ ಅವರನ್ನು “ಸರ್” ಎನ್ನುವ ಬಿರುದು ಕೊಟ್ಟಿದೆ. 1955ರಲ್ಲಿ ಇವರಿಗೆ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ “ಭಾರತ ರತ್ನ” ಪಶಸ್ತಿ ನೀಡಿ ಗೌರವಿಸಿದೆ ಎಂದರು.
ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಆರ್. ಭರ್ದಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಸಹಾಯಕ ಶಿಕ್ಷಕ ಎನ್.ಪೆÇನ್ನರಸನ್ ವಂದಿಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಶಾಲಾ ಮಕ್ಕಳಿಗೆ ಪ್ರಬಂಧ, ರಸಪ್ರಶ್ನೆ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಈ ಸ್ಪರ್ಧೆಯಲ್ಲಿ 155 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎನ್.ವಿ.ಆಂಗ್ಲ ಶಾಲೆ, ಹುಸೇನ್ ಪಬ್ಲಿಕ್ ಶಾಲೆ, ಅಪ್ಪ ಪಬ್ಲಿಕ್ ಶಾಲೆ, ಎಸ್.ವಿ.ಪಿ.ಎಂ.ಶಾಲೆ, ಆರಾಧನಾ ಆಂಗ್ಲ ಮಾಧ್ಯಮ ಶಾಲೆ, ಆದರ್ಶ ವಿದ್ಯಾಲಯ ಶಾಲೆ, ಜಿ.ಹೆಚ್.ಎಸ್ ಬಂದರವಾಡ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು.