ಮಹಾತ್ಮರಿಂದಲೇ ಮಹಾತ್ಮನೆನಿಸಿಕೊಂಡವರು ಜ್ಯೋತಿಬಾ ಫುಲೆ.

ಚಿತ್ರದುರ್ಗ. ನ.೨೯; ಸಮಾಜ ಸುಧಾರಣಾ ಕಾರ್ಯಗಳಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಅವರು ಸಮಾನತೆಯ ಹರಿಕಾರರಾಗಿ, ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ಮಹಾತ್ಮ ಗಾಂಧೀಜಿಯವರಿಂದಲೇ ಮಹಾತ್ಮ ಎಂಬ ಬಿರುದು ಪಡೆದವರು ಎಂದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು..ಅವರು ನಗರದ ಚಿತ್ರ ಡಾನ್ ಬೋಸ್ಕೋ ಸಂಸ್ಥೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಆಯೋಜಿಸಿದ್ದ ಮಹಾತ್ಮ ಜ್ಯೋತಿಬಾ ಪುಲೆಯವರ ನೆನಪುಗಳು ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜನಸಾಮಾನ್ಯರು ಡಾಂಭಿಕ ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ, ಮಾನವ ಧರ್ಮವನ್ನು ಎತ್ತಿ ಹಿಡಿಯಲು ಅಪೇಕ್ಷೆ ಪಟ್ಟವರಲ್ಲಿ ಜ್ಯೋತಿಬಾ ಪುಲೆಯವರು ಒಬ್ಬರು ಪುಲೆಯವರು ಯಾರ ಹಂಗಿಲ್ಲದೆ ಕನ್ಯಾಪಾಠಶಾಲೆ ಆರಂಭಿಸಿದ ಪ್ರಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು, ವಿಧವೆಯರ ಮಕ್ಕಳಿಗಾಗಿ ಅನಾಥಾಲಯ ಸ್ಥಾಪನೆ, ವಿಧವಾ ವಿವಾಹ, ಸತ್ಯಶೋಧಕ ಸಮಾಜದ ಸ್ಥಾಪನೆ, ರಾಯಗಢದಲ್ಲಿ ಶಿವಾಜಿ ಸಮಾಧಿಯ ಜಿರ್ಣೋದ್ಧಾರ, ಧರ್ಮಗ್ರಂಥ ಎಲ್ಲರಿಗೂ ದೊರಕುವಂತಾಗಲಿ, ಅವುಗಳನ್ನ ಬಚ್ಚಿಟ್ಟು ಇತರಿಗೆ ಅದನ್ನು ತೋರಿಸದಂತೆ ನಡೆದುಕೊಳ್ಳಲಾಗದು ಸಮಾಜದ ಸುದಾರಣೆಗೆ ಪ್ರಯತ್ನಿಸದವರು, ಅಂತವರ ಕೆಲಸಗಳನ್ನ ನಾವು ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು.ಏನೂ ಪರಿಶ್ರಮ ಪಡದೆ ವ್ಯರ್ಥ ಧಾರ್ಮಿಕ ಕೋರಿಕೆಯಿಂದಾಗಿ ಮೂಢ ಜನರನ್ನು ಮೋಸಗೊಳಿಸಬಾರದು, ಯಾವ ಉದ್ಯೋಗವೂ ಮೇಲಲ್ಲ-ಕೀಳಲ್ಲ, ಸ್ತಿçÃ-ಪುರುಷರೆಲ್ಲರಿಗೂ ತಮ್ಮ ತಮ್ಮ ಅಧಿಕಾರಗಳನ್ನು ಚಲಾಯಿಸುವ ಸ್ವಾತಂತ್ರ ಉಂಟು. ಪಕ್ಷಪಾತ ಮಾಡದೆ ಕುಷ್ಠರೋಗಿ, ವಿಕಲಾಂಗ ವ್ಯಕ್ತಿ, ಅನಾಥ ಬಾಲಕ-ಬಾಲಕಿಯರಿಗೆ ತಮ್ಮ ಯೋಗ್ಯತಾನುಸಾರ ಸಹಾಯ ಮಾಡಬೇಕು ಎಂದು ಹಗಲಿರುಳು ಶ್ರಮಿಸಿದವರು ಪುಲೆಯವರು ಎಂದರು.ಕಾರ್ಯಕ್ರಮದಲ್ಲಿ ಫಾದರ್ ಜೋಸೆಫ್, ಶಿಕ್ಷಕರಾದ ನೀಲಪ್ಪ, ರಂಗಪ್ಪ, ಪ್ರದೀಪ್ 
ರೋಟರ‍್ಯಾಕ್ಟ್ ಹೆಚ್. ಎಸ್. ರಚನ, ಹೆಚ್.ಎಸ್. ಪ್ರೇರಣ, ವಿದ್ಯಾರ್ಥಿಗಳಾದ ಭವ್ಯ, ಧರಣಿ, ಅನುಶ್ರೀ ಇದ್ದರು.