ಮಹಾಜನ ಫೌಂಡೇಷನ್‍ದಿಂದ ಶ್ರೀಶೈಲ ಯಾತ್ರೆ

ಕಲಬುರಗಿ,ಜ.11: ಕಲಬುರಗಿಯ ಭಕ್ತರಿಗೆ ಆಂಧ್ರ ಪ್ರದೇಶದ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಮಾಡಿಸಲು
ಮಹಾಜನ ಫೌಂಡೇಷನ್ ಚಾರಿಟೇಬಲï ಮತ್ತು ವೆಲ್‍ಫೇರ್ ಟ್ರಸ್ಟ್ ವತಿಯಿಂದ ಬುಧವಾರ ಶ್ರೀಶೈಲ ಯಾತ್ರೆಗೆ ತೆರಳಿದರು.
ನಗರದ ಶಹಾಬಜಾರ-ಸೊಗಸನಗೇರಿಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಯಾತ್ರೆಗೆ ಭಕ್ತರು ತೆರಳಿದ ಸಾರಿಗೆ ಸಂಸ್ಥೆಯ ಬಸ್‍ಗಳಿಗೆ ಹಾಗೂ ಆಹಾರ ತಯಾರಿಕೆ ವಾಹನಗಳಿಗೆ ಕಡಗಂಚಿಯ ಪೂಜ್ಯ ವೀರಭದ್ರ ಶಿವಾಚಾರ್ಯರು ಮತ್ತು ಬಿಜೆಪಿ ರಾಜ್ಯ ಉಪಾಧ್ಯP್ಷÀರಾದ ಮಾಲೀಕಯ್ಯ ಗುತ್ತೇದಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಗುತ್ತೇದಾರ ಅವರು, ಸಮಾಜ ಸೇವಕ ಶಿವಕಾಂತ ಮಹಾಜನ್ ನೇತೃತ್ವದ ಮಹಾಜನ ಫೌಂಡೇಷನ್‍ದಿಂದ ಮಾದರಿಯಾಗಿರುವ ಸಮಾಜ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಕಲಬುರಗಿಯ ಹಲವಾರು ಭಕ್ತರನ್ನು ಶ್ರೀಶೈಲ ಹಾಗೂ ಸುತ್ತಲಿನ ಯಾತ್ರಾ ಸ್ಥಳಗಳ ದರ್ಶನ ಮಾಡಿಸುವ ಪುಣ್ಯದ ಕೆಲಸ ಮಾಡಿದ್ದಾರೆ ಎಂದರು. ಈಚೆಗೆ 2 ಸಾವಿರ ಶಿP್ಷÀಕರು ಹಾಗೂ ಮಹಾನಗರ ಪಾಲಿಕೆಯ 1600 ಪೌರ ಕಾರ್ಮಿಕರಿಗೆ ಸನ್ಮಾನಿಸಿರುವುದು ಐತಿಹಾಸಿಕ ಕಾರ್ಯ ಎಂದು ಶ್ಲಾಘಿಸಿದರು.
ಮಹಾಜನ್ ಫೌಂಡೇಷÀನ್ ಸದಸ್ಯರಾದ ಶಾಂತಕುಮಾರ ಬಿರಾದಾರ, ಶರಣಬಸಪ್ಪ ಹೆಗ್ಗಣೆ, ಅಂಕುಶ ಮಹಾಜನ, ವೀರು ಸ್ವಾಮಿ, ಬಸವರಾಜ ಪಾಟೀಲ, ಮಹೇಶ ಪಾಟೀಲ ಕೂಡಿ, ಶಿವಾನಂದ ಮಠಪತಿ, ಮಹಾದೇವ ಅಷ್ಟಗಿ, ರಾಜು ಚೌಡಾಪುರ, ಚಂದ್ರಕಾಂತ ಸಂಗಾವಿ, ಹಣಮಂತ ವಚ್ಛಾ, ಶಾಂತಕುಮಾರ ಸೂಗುರ, ವೀರೇಶ ನೀಲಾ ಸೇರಿದಂತೆ ಹಲವರಿದ್ದರು.