ಮಹಾಗಾಂವ ಸೇತುವೆ ಮೇಲ್ದರ್ಜೆಗೇರಿಸುವುದು ಯಾವಾಗ ? ಮರತೂರಕರ್ ಪ್ರಶ್ನೆ

ಕಲಬುರಗಿ: ಜು.19:ಸುಮಾರು ಹತ್ತು ದಶಕಗಳ ಹಳೆಯದಾಗಿರುವ ಕಮಲಾಪೂರ ತಾಲೂಕಿನ ಮಹಾಗಾಂವ ಗ್ರಾಮದ ಸೇತುವೆ ಮಳೆಗಾಲ ಬಂತೆಂದರೆ ಕೆಳ ಸೇತುವೆ ಮೇಲಿಂದ ನೀರು ಹರಿದು ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ರವರು ಜಿಲ್ಲಾಡಳಿತಕ್ಕೆ ಪ್ರಶ್ನಿಸಿದರು.? ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಮಳೆಗಾಲದಲ್ಲಿ ಸ್ವಲ್ಪ ಮಳೆಯಾದರೂ ಕೂಡ ಈ ಕೆಳ ಸೇತುವೆ ತುಂಬಿ ಹರಿಯುತ್ತದೆ. ಮಹಾಗಾಂವ ಗ್ರಾಮಕ್ಕೆ ಹೊಂದಿಕೊಂಡಿರುವ ಬೆಳಕೋಟ, ಮಹಾಗಾಂವ ವಾಡಿ,ಮಹಾಗಾಂವ ತಾಂಡಾ,ಅಪಚಂದ, ವ್ಹಿಕೆ.ಸಲಗರ,ಅಂಬಲಗಾ ಸೇರಿದಂತೆ ಈ ಮುಖ್ಯ ರಸ್ತೆಯು ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಲಿವೆ.ಅಲ್ಲದೆ ಸೇತುವೆ ಸುತ್ತಮುತ್ತಲಿರುವ ಜಮೀನುಗಳಲ್ಲಿ ನೀರು ನಿಂತು ಪ್ರತಿ ವರ್ಷ ಬೆಳೆ ನೀರು ಪಾಲಾಗುತ್ತಿದೆ.ಇದಕ್ಕೆ ಕೊನೆ ಎಂದು ಎಂಬ ಪ್ರಶ್ನೆ ಈ ಗ್ರಾಮದ ರೈತರದ್ದಾಗಿದೆ.ಕಲಬುರಗಿ ವ್ಹಿ.ಕೆ.ಸಲಗರ ಮುಖ್ಯ ರಸ್ತೆ 50 ಕೂಡುವ ಈ ರಸ್ತೆಯ ಸೇತುವೆಯಿಂದ ಮೇಲಿಂದ ಮಳೆಗಾಲದಲ್ಲಿ ಸಂಚಾರಿಸಬೇಕಾದರೆ ಪ್ರಯಾಣಿಕರು ಪರದಾಡಬೇಕಾಗಿದೆ. ಶಾಲಾ ಕಾಲೇಜುಗಳಿಗೆ,ವ್ಯಾಪಾರ ವಹಿವಾಟುಗಳಿಗೆ, ಹೋಗುವ ಪ್ರಯಾಣಿಕರಿಗೆ ಈ ದಿನದಲ್ಲಿ ತುಂಬಾ ಸಮಸ್ಯೆ ಸಮಸ್ಯೆ ಕಾಡುತ್ತಿದೆ.ಇಲ್ಲಿಯ ಜನಪ್ರತಿನಿಧಿಗಳು ಐದಾರು ವರ್ಷದಲ್ಲಿ ಮೇಲೆತ್ತುವ ಭರವಸೆ ಮಾತ್ರ ಕೊಟ್ಟಿರುತ್ತಾರೆ. ಆದರೆ ವರ್ಷದ ಮಳೆಗಾಲದಲ್ಲಿ ಈ ಕೆಳ ಸೇತುವೆಯ ವಿಚಾರ ಮುನ್ನೇಲೆಗೆ ಬರುತ್ತದೆ.ಇದೆ ಮಾರ್ಗದ ಮೂಲಕ ಎಲ್ಲಾ ಜನಪ್ರತಿನಿಧಿಗಳು ಓಡಾಡಿದರು ಇದರ ಬಗ್ಗೆ ಕ್ಯಾರೆ ಎನ್ನದಿರುವುದು ಗ್ರಾಮಸ್ಥರ ತಲೆ ನೋವಾಗಿದೆ.ಮಳೆಯ ರಭಸಕ್ಕೆ ಅರ್ಧಕ್ಕಿಂತ ಹೆಚ್ಚು ಭಾಗ ರಸ್ತೆ ಕೊಚ್ಚಿ ಕೊಂಡು ಹೋಗಿದೆ.ಈ ಸೇತುವೆ ಮೇಲಿಂದ ವಾಹನ ಚಲಿಸುವುದು ಅಪಾಯಕ್ಕೆ ಆಮಂತ್ರಣ ನೀಡಿದಂತಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಸೇತುವೆ ಮೇಲ್ದರ್ಜೆಗೇರಿಸುವ ಕಾರ್ಯ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.