ಮಹಾಗಾಂವ ಡಿಗ್ರಿ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಕಲಬುರಗಿ:ಸೆ.17:ಮಹಾಗಾಂವ ಡಿಗ್ರಿ ಕಾಲೇಜಿನಲ್ಲಿ, ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸರ್ಧಾರ ವಲ್ಲಭಾಯಿ ಪಟೇಲ್, ಮಹಾತ್ಮಾ ಗಾಂಧಿಜಿ ಹಾಗೂ ಡಾ|| ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರಕ್ಕೆ ಮಾಲಾರ್ಪಣೆಯೊಂದಿಗೆ ಚಾಲನೆಯನ್ನು ನೀಡಲಾಯಿತು. ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ನಂತರ ಮಾತನಾಡುತ್ತ ಸ್ವಾತಂತ್ರದ ನಂತರ ಈ ಭಾಗದಲ್ಲಿ ರಜಾಕಾರರ ಹಿಂಸೆ ದಬ್ಬಾಳಿಕೆ ಹೆಚ್ಚಾಗಿತ್ತು. ಇದಕ್ಕೆ ಎದೆಗುಂದಿ ನಿಂತ ಈ ಭಾಗದ ಧೀಮಂತ ನಾಯಕರಾದ ದಿ|| ಅಪ್ಪಾಸಾಹೇಬ ಪಾಟೀಲ್, ದಿ|| ಚಂದ್ರಶೇಖರ ಪಾಟೀಲ್, ದಿ|| ಸ್ವಾಮಿ ರಮಾನಂದ ತೀರ್ಥರಂತೆ, ಬೀದರ, ರಾಯಚೂರು, ಬಳ್ಳಾರಿ, ಕೊಪ್ಪಳ, ಗಳಲ್ಲಿಯೂ ನಾಯಕರ ಪರಿಶ್ರಮದಿಂದ ಈ ಭಾಗ ವಿಮೋಚನೆಯಾಯಿತು ಎಂದರು. ಇದೇ ಸಂಧರ್ಭದಲ್ಲಿ ಈ ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರಬಂಧ ಚರ್ಚಾ ಸ್ಪರ್ದೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ಸುರೇಖಾ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ರೇಣುಕಾಬಾಯಿ ವಿಮೋಚನಾ ದಿನದ ಕುರಿತು ಮಾತನಾಡಿದರು.

ಡಾ|| ಲಕ್ಷ್ಮಿಕಾಂತ ಶೀರೊಳ್ಳಿ ದೈಹಿಕ ಶಿಕ್ಷಣ ನಿರ್ದೇಶಕರು, ಪ್ರೊ.ಬಸವರಾಜ ಕೊಂಬಿನ್, ಪ್ರೊ.ಸುಜಾತಾ ದೊಡ್ಡಮನಿ, ಡಾ|| ಶಿಲ್ಪಾ ಗಾಂವಕರ್, ಪ್ರೊ.ಭಾರತಿ ಭೂಸಾರೆ, ಪ್ರೊ.ಸತ್ಯೇಶ್ವರ ಚೌಧರೆ, ಡಾ|| ಚಂದ್ರಕಾಂತ ಸಿಂಗೆ, ಪ್ರೊ.ಹಸನ್‍ಮಿಯಾ, ಮತ್ತು ರೋವರ್ಸ ರೇಂಜರ್ಸ, ರೆಡ್ ಕ್ರಾಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಡಾ|| ಶಾಮಲಾ ಸ್ವಾಮಿ ಇವರು ನಿರೂಪಿಸದರು. ಪ್ರೊ.ಭಾರ್ಗವಿ ಎಚ್. ಸ್ವಾಗತಿಸಿದರು, ಮತ್ತು ಪ್ರೊ.ಶಿವಕುಮಾರ ವಂದಿಸಿದರು.