ಮಹಾಗಾಂವನಲ್ಲಿ ಡಾ.ಬಾಬು ಜಗಜೀವನ್ ರಾಮ ಜಯಂತಿ ಆಚರಣೆ

ಕಲಬುರಗಿ:ಎ.6:ಜೈ ಭಾರತ್ ಮಾತಾ ಸೇವಾ ಸಮಿತಿ ನವದೆಹಲಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ್ ಮಹಾರಾಜ್ ನಿರಗುಡಿಯವರ ನೇತೃತ್ವದಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ ಅವರ ಜಯಂತೋತ್ಸವ ತುಂಬಾ ಅರ್ಥಪೂರ್ಣವಾಗಿ ಮಹಾಗಾಂವ್ ಕ್ರಾಸ್ ಬಳಿ ಆಚರಣೆ ಮಾಡಲಾಯಿತು,
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್. ಧರ್ಮಸೇನಾ ಮಾಜಿ ಎಂ.ಎಲ್ ಸಿ ಮಾತನಾಡುತ್ತಾ ಹವಾ ಮಲ್ಲಿನಾಥ್ ಮಹಾರಾಜ್ ನಿರಗುಡಿ ಅವರು ರಾಷ್ಟ್ರದ ಏಳಿಗೆಗಾಗಿ ಅಭಿವೃದ್ಧಿಗಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ ಎಲ್ಲ ಮಹಾನ್ ನಾಯಕರ ಜಯಂತಿ ಪುಣ್ಯ ಸ್ಮರಣೆಯನ್ನು ತಪ್ಪದೇ ಗೌರವ ಪೂರ್ವಕವಾಗಿ ಆಚರಣೆ ಮಾಡುತ್ತ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಹವಾ ಮಲ್ಲಿನಾಥರ ರೀತಿಯಲ್ಲಿ ಸಮಸ್ತ ದೇಶ ಬಾಂಧವರು ದೇಶದ ಏಳಿಗೆಗಾಗಿ ಶ್ರಮಿಸಿರುವ ಎಲ್ಲಾ ನಾಯಕರ ಪುಣ್ಯ ಸ್ಮರಣೆ ಹಾಗೂ ಜಯಂತಿಯನ್ನು ನಮ್ಮ ಎಲ್ಲಾ ಕುಟುಂಬದ ಸದಸ್ಯರ ಕಾರ್ಯಕ್ರಮ ಎಂದು ತಿಳಿದು ಹೆಮ್ಮೆಯಿಂದ ಆಚರಣೆ ಮಾಡಿದರೆ ಈ ದೇಶದ ಅಖಂಡತೆ, ಏಕತೆ ಸದಾ ಚಿರಕಾಲವಾಗಿ ಉಳಿಯಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲಾ ದೇಶ ಬಾಂಧವರಿಗೆ ಅತೀ ಶಿಸ್ತಿನಿಂದ ಊಟದ ವ್ಯವಸ್ಥೆ ಮಾಡಲಾಯಿತು. ಹೋಳಿಗೆ, ಮಾವಿನಹಣ್ಣಿನ ರಸ, ಹುಗ್ಗಿ ಪಾಯಾಸ್ ಹೀಗೆ ಎಲ್ಲಾತರಹದ ಊಟದ ವ್ಯವಸ್ಥೆ ಸಮೀತಿ ವತಿಯಿಂದ ಮಾಡಲಾಗಿತ್ತು . ಈ ಕಾರ್ಯಕ್ರಮದಲ್ಲಿ ಸಮೀತಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ್. ಎಸ್. ಝಳಕಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ್ ಮಹಾರಾಜ್ ನಿರಗುಡಿ ಅವರು ಪ್ರತಿ ವರ್ಷ ಡಾ.ಬಾಬು ಜಗಜೀವನ್ ರಾಮ ಅವರ ಜಯಂತಿ, ಆಡಿ.ಃ.ಖ.ಅಂಬೇಡ್ಕರ್ ಅವರ ಜಯಂತಿ, ಬಸವೇಶ್ವರ ಅವರ ಜಯಂತಿ ಸೇರಿದಂತೆ ದೇಶದ ಎಲ್ಲಾ ಮಹಾನ್ ನಾಯಕರ ಜಯಂತಿ ಆಚರಣೆ ಮಾಡುತ್ತಾ ನಾವೆಲ್ಲ ಒಂದು, ನಾವೆಲ್ಲ ಬಂಧು, ನಾವೆಲ್ಲ ಭಾರತೀಯರು ನಮಗೆ ದೇಶ ಮೊದಲು ನಂತರ ಎಲ್ಲಾ ,ಜಾತಿ ವಿಚಾರ ಮಾಡಬೇಡಿ, ದೇಶದ ವಿಚಾರ ಮಾಡಿ ಎಂಬ ಸಂದೇಶವನ್ನು ನೀಡುತ್ತಿದ್ದಾರೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಒಟ್ಟಾರೆಯಾಗಿ ಇವತ್ತಿನ ಈ ಒಂದು ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ವಿವಿಧ ಸಾಧಕರಿಗೆ ಸನ್ಮಾನಿಸುವುದರೊಂದಿಗೆ ಆಚರಣೆ ಮಾಡಲಾಯಿತು,ಜಯಂತೋತ್ಸದಲ್ಲಿ ಅತಿಥಿಗಳಾಗಿ ವಿಜಯಕುಮಾರ .ಜಿ. ರಾಮಕೃಷ್ಣ, ಕಾಂಗ್ರೆಸ್ ಮುಖಂಡರು, ಸಿ.ಎಂ ಫಯಾಜ್ ಹುಮ್ನಾಬಾದ್ , ಮಹಾಗಾoವ ಕಲ್ಯಾಣ ಮಂಟಪದ ಮಾಲೀಕರಾದ ಮಹಾಗಾoವ ಕಲ್ಯಾಣ ಮಂಟಪದ ಮಾಲೀಕರಾದ ಡಾ.ಸಯ್ಯದ್ ಅಲಿ ಬಾಕ್ಕರ್
, ವಿಟ್ಟಲ್ ಕಾಂಬ್ಳೆ ಹೊಡಲ್ , ಗುಂಡಪ್ಪ ಶಿರಾಡೋಣ, ಅಂಬಾರಾಯ್ ಚಲಗೇರಾ, ಅಮೃತಸಾಗರ್ ಕುರಿಕೋಟ, ರಾಮ್ ಪ್ರಸಾದ್ ಕಾಂಬ್ಳೆ ಹೊಡಲ್, ಆನಂದ್ ಅಂಕಲ್ಗಿಕರ್, ಚನ್ನವೀರ ದಸ್ತಪುರ್, ರಮೇಶ್ ಶಿರಡೋಣ, ಮಲ್ಲಿಕಾರ್ಜುನ್ ಸಾರವಾಡ್, ಸಂದೇಶ್ ಪವಾರ್, ಬಲವಂತ ಪಾಟೀಲ್, ಶಿವರಾಜ್ ವಾರದ್, ರಾಜಶೇಖರ್ ರೆಡ್ಡಿ ಸೇಡಂ, ಉದಯ್ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.