ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮ

ಲಕ್ಷ್ಮೇಶ್ವರ,ಸೆ19: ಪಟ್ಟಣದಲ್ಲಿ ಭಾನು ಮಾರ್ಕೆಟಿನ ಹನುಮಂತ ದೇವರ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾದ ಭವ್ಯವಾದ ಮಹಾಗಣಪತಿಯ ವಿಸರ್ಜನಾ ಕಾರ್ಯ ರವಿವಾರ ಜರುಗಿತು.
ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಯುವಕರು ರಾರಾಜಿಸುತ್ತಿದ್ದ ಕೇಸರಿ ಧ್ವಜಗಳು ಮಾರ್ಗದುದ್ದಕ್ಕೂ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸುತ್ತು ಮುತ್ತಲ ಗ್ರಾಮಗಳ ಹತ್ತಾರು ಸಾವಿರ ಭಕ್ತರು ನೆರೆದಿದ್ದರು.
ಗಣಪತಿಯ ಪೂಜೆ ನೆರವೇರಿಸಿ ಅದನ್ನು ವಿಸರ್ಜನೆಗೆ ಕೊಂಡೊಯ್ಯುತ್ತಿದ್ದಂತೆಯೇ ನರೆದಿದ್ದ ಸಾವಿರಾರು ಜನರು “ಗಣಪತಿ ಬಪ್ಪ ಮೋರೆಯಾ”, “ಮಂಗಲ ಮೂರ್ತಿ ಮೋರೆಯಾ”, “ಗಣಪತಿ ಮಹಾರಾಜಕಿ ಜೈ”, ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಸಿಪಿಐ ವಿಕಾಸ ಲಮಾಣಿ, ಪಿಎಸ್‍ಐ ಡಿ ಪ್ರಕಾಶ್ ಅವರ ನೇತೃತ್ವದಲ್ಲಿ ಮಾರ್ಗದುದ್ದಕ್ಕೂ ಬಂದೋಬಸ್ತ ಏರ್ಪಡಿಸಲಾಗಿತ್ತು. ಪೆÇಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರು ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಭೇಟಿ ನೀಡಿದ್ದರು.