ಮಹಾಕಾವ್ಯ ರಚಿಸಿದವರೆಲ್ಲಾ ಶೂದ್ರರು ಸಿದ್ದು ವ್ಯಾಖ್ಯಾನ


ಬೆಂಗಳೂರು, ಅ. ೩೧- ಮಹಾಕಾವ್ಯಗಳನ್ನು ರಚಿಸಿದವರು ಶೂದ್ರರು. ಮೇಲ್ಜಾವತಿ ಯವರು ಮಹಾಕಾವ್ಯಗಳನ್ನು ಬರೆದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ವಾಲ್ಮೀಕಿ ಜಯಂಚಿ, ದಿ. ಪ್ರಧಾನಿ ಇಂದಿರಾಗಾಂಧಿ ಮತ್ತು ದೇಶದ ಉಕ್ಕಿನ
ಮನುಷ್ಯ ಸರ್ಧಾರ್ ವಲ್ಲಭಾಬಾಯ್ ಪಟೇಲ್ ರವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಮಾಯಣ ಬರೆದವರು ವಾಲ್ಮೀಕಿ. ಶಾಂಕುತಲಾ ಕಾವ್ಯ ರಚಿಸಿದವರು ಕಾಳಿದಾಸ. ಮಹಾಭಾರತ ಬರೆದವರು ವ್ಯಾಸ ಮಹರ್ಷಿ. ಇವರೆಲ್ಲಾ ಕೆಳಜಾತಿಗೆ ಸೇರಿದವರು. ಮೇಲ್ಜಾತಿಯವರಲ್ಲ ಎಂದರು.
ಬಿಜೆಪಿ ಗೂಡ್ಸೆ ವಂಶಸ್ಥರು
ದೇಶಕ್ಕಾಗಿ ಬಿಜೆಪಿಯ ಒಬ್ಬರು ಪ್ರಾಣತ್ಯಾಗ ಮಾಡಿಲ್ಲ. ಆದರೂ ನಾವು ದೇಶಭಕ್ತರು ಎಂದು ಬಿಜೆಪಿಯವರು ಹೇಳುತ್ತಾರೆ. ಇವರು ಗಾಂಧೀಜಿ ಕೊಂದ ಗೂಡ್ಸೆ ವಂಶಸ್ಥರು ಎಂದು ವಾಗ್ದಾಳಿ ನಡೆಸಿದರು. ದೇಶದ ಉಕ್ಕಿನ ಮನುಷ್ಯ ವಲ್ಲಭಾಬಾಯ್ ಪಟೇಲ್‌ಗೂ ಬಿಜೆಪಿಗೂ ಏನು ಸಂಬಂಧ. ವಲ್ಲಭಬಾಯ್ ಪಟೇಲ್ ಕಾಂಗ್ರೆಸ್ಸಿಗರು. ಆರ್‌ಎಸ್‌ಎಸ್‌ನ್ನೆ ರದ್ದು ಮಾಡಿದವರು ವಲ್ಲಭಾಬಾಯ್ ಪಟೇಲ್ ಎಂದು ಹೇಳಿದರು. ಗಾಂಧೀಜಿಯವನ್ನು ಕೊಂದ ನಾತುರಾಮ್ ಗೂಡ್ಸೆ ಆರ್‌ಎಸ್‌ಎಸ್‌ನವನು ಎಂದರು.
ಸರ್ದಾರ್ ವಲ್ಲಭಬಾಯ್ ಪಟೇಲ್ ಹೆಸರೇಳಿಕೊಂಡು ಬಿಜೆಪಿಯವರು ದೇಶಭಕ್ತರಾಗಲು ಹೊರಟಿದ್ದಾರೆ ಎಂದು ಟೀಕಿಸಿದ ಅವರು, ಇತಿಹಾಸವನ್ನು ತಿರುಚುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಸರ್ಧಾರ್ ವಲ್ಲಭಾಬಾಯ್ ಪಟೇಲರ ಪ್ರತಿಮೆಗೆ ನಮ್ಮ ವಿರೋಧವಿಲ್ಲ ಎಂದರು.
ಡಿಕೆಶಿ ಹೇಳಿಕೆ
ದಿ. ಇಂದಿರಾಗಾಂಧಿ ಅವರು ದೇಶ ಕಂಡ ಅತ್ಯುತ್ತಮ ಪ್ರಧಾನಿ ಎಂಬುದು ಎಲ್ಲರಿಗೂ ಗೊತ್ತಿದೆ. ಇಡೀ ಜಗತ್ತು ಇಂದಿರಾಗಾಂಧಿಯವರನ್ನು ಮೆಚ್ಚಿತ್ತು. ಮಾಜಿ ಪ್ರಧಾನಿ ವಾಜಪೇಯಿ ಅವರು ಸಹ ಇಂದಿರಾಗಾಂಧಿಯವರನ್ನು ದುರ್ಗಿ ಎಂದಿದ್ದರು. ದೇಶಕ್ಕೆ ಹಲವು ಕಾರ್ಯಕ್ರಮಗಳನ್ನು ಕೊಟ್ಟ ಧೀರೋದ್ದಾದೆ ನಾಯಕಿ ಇಂದಿರಾಗಾಂಧಿ. ಬ್ಯಾಂಕ್‌ಗಳ ರಾಷ್ಟ್ರೀಕರಣವಾಗದಿದ್ದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರಲಿಲ್ಲ ಎಂದರು.