ನವದೆಹಲಿ, ಮಾ ೪- ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಉಜ್ಜಯಿನಿ ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದೋರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಆಡಲು ಕೊಹ್ಲಿ ಆಗಮಿಸಿದ್ದರು. ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ದಂಪತಿಗಳು ಇತರ ಯಾತ್ರಾರ್ಥಿಗಳೊಂದಿಗೆ ದೇವಾಲಯದ ಒಳಗೆ ಕುಳಿತಿರುವುದನ್ನು ಕಾಣಬಹುದು.
ಭಾರತ ತಂಡ ಮತ್ತು ಆಸ್ಟ್ರೇಲಿಯಾ ನಡುವೆ ೪ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಬಾಕಿ ಉಳಿದಿದೆ.ಮೂರನೇ ಟೆಸ್ಟ್ ಪಂದ್ಯವು ಮುಕ್ತಾಯಗೊಂಡಿದೆ. ಈಗಾಗಲೇ ಸರಣಿಯಲ್ಲಿ ಭಾರತ ತಂಡ ೨-೧ ಮುನ್ನಡೆಯಲ್ಲಿದೆ. ಪಂದ್ಯ ಮುಗಿದ ಬಳಿಕ ಅನೇಕ ಆಟಗಾರರು ತಮ್ಮ ಪತ್ನಿಯರೊಂದಿಗೆ ಬಾಬಾ ಮಹಾಕಾಳೇಶ್ವರ ದರ್ಶನ ಪಡೆಯಲು ಬಂದಿದ್ದರು. ಇದರಲ್ಲಿ ಭಾರತೀಯ ಆಟಗಾರ ವಿರಾಟ್ ಕೊಹ್ಲಿ ದಂಪತಿ ಸಹ ಶನಿವಾರ ಭಾಗವಹಿಸಿದ್ದರು.

ಇಂದು ಬೆಳಗ್ಗೆ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಜೊತೆಯಾಗಿ ಬಾಬಾ ಮಹಾಕಾಳೇಶ್ವರನ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಆಗಮಿಸಿದ್ದರು. ಅಲ್ಲಿ ಅನುಷ್ಕಾ ಶರ್ಮಾ ಸರಳವಾದ ಸೀರೆಯನ್ನು ಧರಿಸಿದ್ದರು ಮತ್ತು ವಿರಾಟ್ ಕೊಹ್ಲಿ ಧೋತಿ, ಕೊರಳಲ್ಲಿ ರುದ್ರಾಕ್ಷಿಯ ಮಾಲೆ ಧರಿಸಿದ್ದರು. ಈ ಸಮಯದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ನಂದಿಹಾಲ್‌ನಲ್ಲಿ ಕುಳಿತು ಭಗವಾನ್ ಮಹಾಕಾಲ್ ಭಸ್ಮ ಆರತಿಯನ್ನು ಆನಂದಿಸಿದರು. ಅಲ್ಲಿ ಅವರು ಬಾಬಾ ಮಹಾಕಾಳ್ ಬಳಿ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಸಾಮಾನ್ಯವಾಗಿ ರಾಜಕಾರಣಿಗಳು ಟೆಂಪಲ್ ರನ್ ಮಾಡಿರುವುದನ್ನು ನಾವು ನೋಡಿದ್ದೇವೆ , ಇದೇ ಮೊದಲ ಬಾರಿಗೆ ನಾವು ಟೆಂಪಲ್ ರನ್ ನಲ್ಲಿ ಕ್ರಿಕೆಟಿಗರನ್ನು ನೋಡಬಹುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಲಾಗಿದೆ. ಈ ವರ್ಷದ ಆರಂಭದಲ್ಲಿ, ಇವರಿಬ್ಬರು ತಮ್ಮ ಮಗಳು ವಮಿಕಾ ಅವರೊಂದಿಗೆ ರಿಷಿಕೇಶ್ ಮತ್ತು ವೃಂದಾವನಕ್ಕೆ ಭೇಟಿ ನೀಡಿದ್ದರು. ವೃಂದಾವನದಲ್ಲಿದ್ದಾಗ, ಕುಟುಂಬವು ಬಾಬಾ ನೀಮ್ ಕರೋಲಿ ಅವರ ಆಶ್ರಮಕ್ಕೆ ಭೇಟಿ ನೀಡಿದರೆ, ಹೃಷಿಕೇಶದಲ್ಲಿ, ಅವರು ಸ್ವಾಮಿ ದಯಾನಂದ ಆಶ್ರಮದ ಸ್ವಾಮಿ ದಯಾನಂದ ಜೀ ಮಹಾರಾಜ್ ಅವರ ಸಮಾಧಿಗೆ ಭೇಟಿ ನೀಡಿದ್ದರು.