ಮಹಾಕವಿ ಕುಮಾರ ವ್ಯಾಸ ಜಯಂತಿ

ವಿಜಯಪುರ,ಜ,31:ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ, ಐಕ್ಯೂಎಸಿ ಹಾಗೂ ಜಿಲ್ಲಾ ಗಮಕ ಕಲಾ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಮಹಾಕವಿ ಕುಮಾರ ವ್ಯಾಸ ಜಯಂತಿ ಸೋಮವಾರ ಕಾಲೇಜಿನ ಸಭಾ ಭವನದಲ್ಲಿ ಜರುಗಿತು.

ಕಾವ್ಯ ಪ್ರಸಂಗದಲ್ಲಿ ಕುಮಾರ ವ್ಯಾಸ ಕವಿಗಳ ಗದುಗಿನ ಭಾರತದ ವಿರಾಟ ಪರ್ವದ ಉತ್ತರಾಭಿಮನ್ಯು ಕಲ್ಯಾಣ ಕುರಿತು ಪುಷ್ಪಾ ಕುಲಕರ್ಣಿ ಹಾಗೂ ಭೂದೇವಿ ಕುಲಕರ್ಣಿ ಅವರು ಸುಂದರ ಸರಾಗವಾಗಿ ಕಾವ್ಯಗಳ ವಾಚನ ಮಡಿದರು.

ಕಲ್ಯಾಣರಾವ ದೇಶಪಾಂಡೆ ಅವರು ಎಲ್ಲ ಪದ್ಯಗಳನ್ನು ಸರಳವಾಗಿ ವ್ಯಾಖ್ಯಾನ ಮಾಡಿ ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಸಕ್ತಿಯಿಂದ ಆಲಿಸಿದರು. ಎಲ್ಲರಿಗೂ 10 ಪ್ರಶ್ನೆಗಳನ್ನು ಕೇಳಿದರು. ಸಮರ್ಪಕ ಉತ್ತರಗಳನ್ನು ನೀಡಿದರು.

ಪ್ರಾರಂಭದಲ್ಲಿ ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಬಿ.ಎಂ. ಪಾಟೀಲ ಸರಾಗವಾಗಿ ವಚನ ಪ್ರಾರ್ಥನೆಯನ್ನು ಮಾಡಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಡಾ. ಪಿ.ಎಸ್. ಪಾಟೀಲ, ಡಾ. ಆರ್.ಕೆ. ಕುಲಕರ್ಣಿ, ಬಾಬುರಾವ ಕುಲಕರ್ಣಿ, ಎಸ್.ಎಂ. ಜೇವರಗಿ, ಶಿವಾಜಿ ಮೋರೆ, ಪ್ರಮೀಳಾ ದೇಶಪಾಂಡೆ, ಉಪನ್ಯಾಸಕರು, ಉಪನ್ಯಾಸಕಿಯರು ಉಪಸ್ಥಿತರಿದ್ದರು.

ಉಷಾದೇವಿ ಹಿರೇಮಠ ಕನ್ನಡ ಉಪನ್ಯಾಸಕಿಯರು ಅತಿಥಿ ಅಧ್ಯಕ್ಷರಗಳನ್ನು ಸ್ವಾಗತಿಸಿದರು. ಶ್ರೀನಿವಾಸ ದೊಡಮನಿ ಪರಿಚಯಿಸಿದರು. ಉಷಾದೇವಿ ಹಿರೇಮಠ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಸಾಹಿತಿ ಜಂಬುನಾಥ ಕಂಚ್ಯಾಣಿ ಗಮಕ ಪರಿಷತ್ ಕುರಿತು ಸುಧೀರ್ಘ ಭಾಷಣ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ. ಆರ್. ಎಂ. ಮಿರ್ದೆ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಗಮಕ ಕಲೆಯ ಮಹತ್ವವನ್ನು ವಿವರಿಸುತ್ತ ಈ ಮಹಾಕಾವ್ಯಗಳ ವಾಚನ ಅಧ್ಯಯನ ಮಾಡುವುದರ ಮಹತ್ವವನ್ನು ತಿಳಿಸಿ ಹೇಳಿದರು.

ಕನ್ನಡ ಉಪನ್ಯಾಸಕ ಎಸ್.ಎಚ್. ಹೂಗಾರ ವಂದಿಸಿದರು.