ಮಹಾಂತ ಶ್ರೀಗಳು ವ್ಯಸನ ಮುಕ್ತ ಸಮಾಜದ ಕನಸು ಕಂಡಿದ್ದರು : ಲಕ್ಷ್ಮಣ ಸವದಿ

ಅಥಣಿ : ಆ.3:ವ್ಯಸನ ಮುಕ್ತ ಸಮಾಜ ನಿರ್ಮಾಣದ ಹರಿಕಾರರು ಎಂದೇ ಹೆಸರುವಾಸಿಯಾಗಿರುವ ಇಳಕಲ್ ದ ಮಹಾಂತ ಶ್ರೀಗಳು ಸಮಾಜದಲ್ಲಿರುವ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕುವಂತೆ ಮನವಿ ಮಾಡುವ ಮೂಲಕ ವ್ಯಸನ ಮುಕ್ತ ಸಮಾಜದ ಕನಸು ಕಂಡಿದ್ದರು ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು,

ಅವರು ಬಸವ ಗ್ಲೋಬಲ್ ಫೌಂಡೇಶನ್ ಅಥಣಿ, ಎನ್.ಎಲ್. ಬಣಜವಾಡ ಶಿಕ್ಷಣ ಸಂಸ್ಥೆ ಹಾಗೂ ತಾಲೂಕಾ ಆಡಳಿತದ, ಆಶ್ರಯದಲ್ಲಿ ಚಿತ್ತರಗಿ ಇಳಕಲ್ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಪ್ರಯುಕ್ತ
ಆಯೋಜಿಸಲಾಗಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು, ಧಾರ್ಮಿಕ, ಅಧ್ಯಾತ್ಮಿಕ ಶ್ರೇಯಸ್ಸಿನೊಂದಿಗೆ ಸ್ವಚ್ಛ ಸಮಾಜದ ಏಳ್ಗೆಗಾಗಿ ಯುವ ಜನರಲ್ಲಿರುವ ದುಶ್ಚಟಗಳನ್ನು ಕೈಬಿಡುವಂತೆ ಜಾಗೃತಿ ಮೂಡಿಸಿ, ನನ್ನ ಜೋಳಿಗೆಯಲ್ಲಿ ಅಕ್ಕಿ, ದವಸಧಾನ್ಯಗಳನ್ನ ದಾನ ಮಾಡಬೇಡಿ ದುಶ್ಚಟಗಳನ್ನು ದಾನ ಮಾಡಿ ಎಂದು ಮಹಾಂತ ಜೋಳಿಗೆ ಹಿಡಿದು ಸಮಾಜಿಕ ಆಂದೋಲನದ ರೀತಿಯಲ್ಲಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಮಹಾಂತ ಶಿವಯೋಗಿಗಳು ಜನರಲ್ಲಿನ ದುಶ್ಚಟಗಳನ್ನು ತೊಲಗಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ್ದರು. ಅವರ ತತ್ವ ಸಿದ್ಧಾಂತ, ಮಾರ್ಗದರ್ಶನದಂತೆ ನಾವೆಲ್ಲರೂ ನಡೆಯುವುದು ಅಗತ್ಯವಿದೆ. ಪ್ರಸ್ತುತ ದಿನಮಾನಗಳಲ್ಲಿ ಯುವಕರು, ವಿದ್ಯಾರ್ಥಿಗಳು ದುಶ್ಚಟಗಳನ್ನು ತ್ಯೆಜಿಸಿ ಆರೋಗ್ಯಯುತ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಬಣಜವಾಡ ಶಿಕ್ಷಣ ಸಂಸ್ಥೆಯ ಲಕ್ಷ್ಮಣ ಬಣಜವಾಡ, ಅನಿತಾ ಬಣಜವಾಡ, ನ್ಯಾಯವಾದಿಗಳಾದ ಕೆ ಎಲ್ ಕುಂದರಗಿ, ಕೆ ಎ ವಣಜೋಳ, ಎ ಎಚ್ ಹುಚಗೌಡರ, ಅಮೋಘ ಖೊಬ್ರಿ, ಧರೇಪ್ಪಾ ಠಕ್ಕಣ್ಣವರ, ಸಂಗನಗೌಡ ಪಾಟೀಲ, ಶಿವಪುತ್ರ ಯಾದವಾಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು