ಮಹಾಂತೇಶ ಪೂಜಾರಿ ಅವರಿಗೆ ಅಪ್ಪು ಸೇವಾ ರತ್ನ ಪ್ರಶಸ್ತಿ ಸನ್ಮಾನ

ಅರಕೇರಾ.ನ.೨೫-ಪಟ್ಟಣದ ನಿವಾಸಿ ಮಹಾಂತೇಶ ಪೂಜಾರಿಯವರಿಗೆ ೬೭ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ದುರ್ಗಾ ಪೌಂಡೇಶನ ಟ್ರಸ್ಟ್ ವತಿಯಿಂದ ಮೈಸೂರಿನಲ್ಲಿನ ಸಿಪಾಯಿ ಗ್ರ್ಯಾಂಡ್ ಹೊಟೇಲ್ ನಲ್ಲಿ ಏರ್ಪಡಿಸಲಾದ ಸಾಧಕರಿಗೆ ಹೆಮ್ಮೆಯ ಕನ್ನಡಿಗ ಕನ್ನಡತಿ ಮತ್ತು ಅಪ್ಪು ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯು ಸಮಾಜಮುಖಿ ಕಾರ್ಯಗಳಲ್ಲಿ,ಸಾಹಿತ್ಯ,ಕಲೆ,ಸಂಸ್ಕೃತಿ,ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಮಜಕ್ಕೆ ಕೊಡುಗೆ ನೀಡಿರುವ ಮಹನೀಯರಿಗೆ ಸಮಾಜ ಸುಧಾರಣೆ ಬದ್ದರಾಗಿ ಕೆಲಸಮಾಡುತ್ತಿರುವ ಮಹಾಂತೇಶಪೂಜಾರಿ ಗೆಳೆಯರ ಬಳಗ ಅರಕೇರಾ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿಸತ್ಕರಿಸಲಾಯಿತು.
ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಆಪ್ತ ಸಮಾಲೋಚಕಿ ಜಶೀಲ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ.ಆರ್ ,ಎಚ್.ಪವಿತ್ರ ರ್ಶರೀ ಕಲ್ಪವೃಕ್ಷ ಪತ್ತಿನ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರಾದ ಬಸವರಾಜಪೂಜಾರಿ.ರೂಪದರ್ಶಿ ಶಿಲ್ಪಾಸುಧಾಕರ್,ಕರ್ನಾಟಕ ಪ್ರದೇಶ ಯುವಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ದಿವ್ಯ ಆರ್,ಕೆ,ಸಂತೋಷ ಕಿರಾಲು ವಿದ್ಯಾ,ನಾಗಶ್ರೀ,ಮಹೇಶ ಮುಂತಾದವರು ಉಪಸ್ಥಿತರಿದ್ದರು.