ಮಹಾಂತಪ್ಪಆಲೂರೆ ಕೊಲೆ: ಶಾಸಕ ಬಿ ಆರ್ ಪಾಟೀಲ, ಆರ್ ಕೆ ಪಾಟೀಲ ಕೈವಾಡ ಶಂಕೆ

ಕಲಬುರಗಿ:ಮಾ.6:ಆಳಂದ ತಾಲೂಕಿನ ಸರಸಂಬಾಗ್ರಾಮದ ಮಹಾಂತಪ್ಪಆಲೂರೆಯವರು ದಿ. 29ನೇ ಫೆಬ್ರುವರಿ 2024ರಂದು ಬೆಳಿಗ್ಗೆ ಸಮಯದಲ್ಲಿ ಹೊಲದಿಂದ ಬರುವಾಗಅಪರಿಚಿತ ದುಷ್ಕರ್ಮಿಗಳಿಂದ ಭಯಾನಕವಾಗಿಕೊಲೆಯಾಗಿರುತ್ತಾರೆಕೊಲೆಯಲ್ಲಿ ಶಾಸಕ ಬಿ ಆರ್ ಪಾಟೀಲ ಮತ್ತುಆರ್ ಕೆ ಪಾಟೀಲ ಕೈವಾಡಇದೆಎಂದು ಆಳಂದ ಮಾಜಿ ಶಾಸಕ ಸುಭಾಷ್‍ಆರ್‍ಗುತ್ತೇದಾರ ಆರೋಪಿಸಿದ್ದಾರೆ.
ಬುಧುವಾರ ಕಲಬುರಗಿಯಗುಬ್ಬಿಕಾಲೋನಿಯಲ್ಲಿರುವ ಸ್ವಗೃಹದಲ್ಲಿಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಮಹಾಂತಪ್ಪಆಲೂರೆಯವರು ಶಾಸಕ ಬಿ ಆರ್ ಪಾಟೀಲರನ್ನುಅವರಜನವಿರೋಧಿ ಧೋರಣೆಗಳನ್ನು ಧಿಕ್ಕರಿಸಿ ನಮ್ಮಜೊತೆ ಸೇರಿಕೊಂಡಾಗಿನಿಂದಅವರ ವಿರುದ್ಧ ನಿರಂತರ ಮಸಲತ್ತು ನಡೆಯುತ್ತಿತ್ತು. ಅವರನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದು ಆಲೋಚಿಸಿ ಶಾಸಕ ಬಿ ಆರ್ ಪಾಟೀಲ ಹಾಗೂ ಆರ್ ಕೆ ಪಾಟೀಲ ಸೇರಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ ಮಹಾಂತಪ್ಪಆಲೂರೆಯವರ ಕೊಲೆ ಮಾಡಿಸಿದ್ದಾರೆ. ಈ ಕೊಲೆಯಲ್ಲಿಅವರಿಬ್ಬರ ಪಾತ್ರವೂಇದೆಗಂಭೀರವಾದಆರೋಪ ಮಾಡಿದರು.
ಮಹಾಂತಪ್ಪಆಲೂರೆಯವರಿಗೆ ಸೇರಿದ ವಿವಾದಿತಜಮೀನಿನ ವಿಷಯದಲ್ಲಿ ಶಾಸಕ ಬಿ ಆರ್ ಪಾಟೀಲ ಬೆಂಬಲಿಗರಾದ ಸಾತಲಿಂಗಪ್ಪ ಪಾಟೀಲ, ಪಂಡಿತಖಾನಾಪೂರೆಇವರು ದಿ. ಮಹಾಂತಪ್ಪಆಲೂರೆಯವರತಂದೆಯವರು ಮಹಾಂತಪ್ಪಆಲೂರೆಯವರತಮ್ಮನಿಗೆಗಿಫ್ಟ್‍ಡೀಡ್ ಆಗಿ ಕೊಟ್ಟಜಮೀನಿನ ಕಾಗದ ಪತ್ರದಲ್ಲಿ ಸಾಕ್ಷಿಯಾಗಿದ್ದಾರೆ. ಇಬ್ಬರೂಅಣ್ಣತಮ್ಮಂದಿರಿಗೆ ಸಮನಾಗಿ ಹಂಚಿಕೆಯಾಗಬೇಕಿದ್ದ ಆಸ್ತಿಯಲ್ಲಿ ವಿವಾದಉಂಟು ಮಾಡಿ ಶಾಸಕ ಬಿ ಆರ್ ಪಾಟೀಲ ಬೆಂಬಲಿಗರಾದ ಸಾತಲಿಂಗಪ್ಪ ಪಾಟೀಲ, ಪಂಡಿತಖಾನಾಪೂರೆಇವರು ಸಾಕ್ಷಿಗಳಾಗಿ ಇದ್ದುದ್ದು. ರಾಜಕೀಯ ಪ್ರೇರಿತವಾಗಿಇವರಕುಟುಂಬದಲ್ಲಿ ಜಗಳ ಹಚ್ಚಿವೈಷಮ್ಯ ಹೆಚ್ಚಲು ಕಾರಣರಾಗಿದ್ದಾರೆಎಂದು ತಿಳಿಸಿದ್ದಾರೆ.
ಈಗ ಬಂಧಿಸಿರುವ ಕೊಲೆಯಒರ್ವ ಆರೋಪಿಗಳಲ್ಲಿ ಒಬ್ಬನು ಶಾಸಕ ಬಿ ಆರ್ ಪಾಟೀಲ ಬೆಂಬಲಿತನಾಗಿಒಂದು ಸಲ ಗ್ರಾ.ಪಂ ಅಧ್ಯಕ್ಷನಾಗಿಕಾರ್ಯನಿರ್ವಹಿಸಿದ್ದಾನೆ. ಕೊಲೆಯಆರೋಪ ಹೊತ್ತಿರುವ ವ್ಯಕ್ತಿ, ಅವರತಂದೆ, ಸಾಕ್ಷಿದಾರರು ಹಾಗೂ ಅವರರಕ್ಷಣೆಗೆ ನಿಂತಿರುವ ಶಾಸಕ ಬಿ ಆರ್ ಪಾಟೀಲ ಎಲ್ಲರೂಕಾಂಗ್ರೆಸ್ ಪಕ್ಷವನ್ನೇ ಪ್ರತಿನಿಧಿಸುತ್ತಿದ್ದಾರೆ ಹೀಗಾಗಿ ಇದೊಂದುರಾಜಕೀಯ ಪ್ರೇರಿತಕೊಲೆಯಾಗಿದೆ. ಕೊಲೆಯ ಹಿಂದಿನ ನಿಜಾಂಶವನ್ನು ಪತ್ತೆ ಹಚ್ಚಲು ಎಲ್ಲರ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕುಅಲ್ಲದೇ ಈ ಪ್ರಕರಣದಲ್ಲಿಆರೋಪಿಗೆ ಮಂಪರು ಪರೀಕ್ಷೆ ನಡೆಸಲು ಮುಂದಾಗಬೇಕುಎಂದು ಆಗ್ರಹಿಸಿದರು.
ಬಂಧಿತ ವ್ಯಕ್ತಿಯನ್ನುರಕ್ಷಣೆ ಮಾಡಲೆಂದೇ ಆಳಂದ ಶಾಸಕ ಬಿ ಆರ್ ಪಾಟೀಲ ಅವರಅಣ್ಣನ ಮಗ ಆರ್ ಕೆ ಪಾಟೀಲ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿಆರೋಪಿಯನ್ನು ಬಂಧಿಸಿದ ಕೆಲವೇ ಘಂಟೆಗಳಲ್ಲೇ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸ್‍ಕಸ್ಟಡಿಯಲ್ಲಿ ವಿಚಾರಣೆಗೆ ಅವಕಾಶ ಕೊಡದೇ ನ್ಯಾಯಾಂಗ ಬಂಧನ ವಶಕ್ಕೆ ತುರ್ತಾಗಿ ನೀಡಿದ್ದೇಕೆ?. ಈ ಪ್ರಕರಣದಲ್ಲಿ ಶಾಸಕ ಬಿ ಆರ್ ಪಾಟೀಲ, ಆರ್ ಕೆ ಪಾಟೀಲ, ಸಾತಲಿಂಗಪ್ಪ ಪಾಟೀಲ, ಪಂಡಿತಖಾನಾಪೂರೆಯವರನ್ನುರಕ್ಷಿಸಲುಆರೋಪಿಯು ಹೇಳಿಕೆಯನ್ನು ನೀಡುತ್ತಿದ್ದಾನೆ. ಆದ್ದರಿಂದ ಈ ಪ್ರಕರಣದ ಕೂಲಂಕಷ ತನಿಖೆಯಾಗಬೇಕುಎಂದು ಒತ್ತಾಯಿಸಿದರು.
2018ರಲ್ಲಿ ರಾಜ್ಯದಲ್ಲಿಕಾಂಗ್ರೆಸ್ ಸಮ್ಮಿಶ್ರ ಸರ್ಕಾರಇದ್ದಾಗದಲಿತ ಸಮುದಾಯದರಾಹುಲ ಬೀಳಗಿ ಕೊಲೆ ಪ್ರಕರಣದಲ್ಲಿಯೂಜಿಲ್ಲಾಉಸ್ತುವಾರಿ ಸಚಿವರಮೂಲಕ ಮೂವರುಆರೋಪಿಗಳ ಹೆಸರು ತೆಗಿಯಿಸಿ ಪ್ರಕರಣ ಮುಚ್ಚಿ ಹಾಕುವಂತೆಮಾಡಿದ್ದರು.ಕಳೆದ ಬಾರಿಜರುಗಿದಜಿಲ್ಲಾ ಪಂಚಾಯತಿಚುನಾವಣೆಯಲ್ಲಿ ಶಾಸಕ ಬಿ ಆರ್ ಪಾಟೀಲ ಸೊಸೆ, ಆರ್ ಕೆ ಪಾಟೀಲ ಪತ್ನಿ ಸೋತಿದ್ದರು. ಈ ಸೋಲಿಗೆ ಸ್ವಗ್ರಾಮದ ಮಹಾಂತಪ್ಪಆಲೂರೆಯೇಕಾರಣಎಂದುಅವರ ಮೇಲೆ ಹಗೆತನ ಸಾಧಿಸಲುಯತ್ನಿಸುತ್ತಿದ್ದರುಎಂದು ಮಾಹಿತಿ ನೀಡಿದರು.
ಶಾಸಕ ಬಿ ಆರ್ ಪಾಟೀಲ ಅವಧಿಯಲ್ಲಿತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬಿ ಆರ್ ಪಾಟೀಲ ಯಾವಾಗ್ಯಾವಾಗ ಶಾಸಕರಾಗಿದ್ದಾರೋ ಆವಾಗಾವಾಗ ತಾಲೂಕಿನಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಿ ಜರುಗಿವೆ. ತೀರಾಇತ್ತೀಚಿಗೆ ಆಳಂದ ಪಟ್ಟಣದ ಹತ್ತಿರಚಂದ್ರಶೇಖರ ಚೌಲ ಎನ್ನುವಯುವಕನನ್ನು ಕೊಲೆ ಮಾಡಲಾಗಿದೆಇದು ಆಡಳಿತ ಯಂತ್ರದ ಸಂಪೂರ್ಣ ವಿಫಲತೆಯನ್ನುಎತ್ತಿತೋರಿಸುತ್ತದೆಎಂದುಆರೋಪ ಮಾಡಿದರು.

ಮಹಾಂತಪ್ಪಆಲೂರೆಯವರು ಆಳಂದ ಕ್ಷೇತ್ರದ ಶಾಸಕ ಬಿ ಆರ್ ಪಾಟೀಲರ ಸ್ವಗ್ರಾಮದವರಾಗಿದ್ದುಅಲ್ಲದೇ ಶಾಸಕ ಬಿ ಆರ್ ಪಾಟೀಲರರಾಜಕೀಯ ವಿರೋಧಿ ನಿಲುವುಗಳನ್ನು ಖಂಡಿಸುತ್ತಿದ್ದರು. ಸಹಕಾರಿರಂಗದಲ್ಲಿ ಆಳಂದ ತಾಲೂಕಿನಲ್ಲಿ ಮುಂಚೂಣಿಯ ನಾಯಕರಾಗಿದ್ದರು. ಸ್ವಂತಗ್ರಾಮದಲ್ಲಿಧನಲಕ್ಷ್ಮೀ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿ ಅದರ 5 ಶಾಖೆಗಳನ್ನು ಬೇರೆ ಬೇರೆ ಗ್ರಾಮಗಳಲ್ಲಿ ಆರಂಭವಾಗುವಂತೆ ಮಾಡಿದ್ದರು.ಈ ಹಿಂದೆ ಸರಸಂಬಾಗ್ರಾಮದಲ್ಲಿರಾಜಕೀಯ ಹಗೆತನದಿಂದಅವರ ಹೊಲದಲ್ಲಿನ ಜೋಳದ ಬಣಿಮೆಗಳನ್ನು ಸುಟ್ಟು ಹಾಕಿದ್ದಾರೆಅಲ್ಲದೇ ಆಕಳು ಕರುಗಳಿಗೆ ವಿಷವನ್ನಿತ್ತು ಕೊಲೆ ಮಾಡಿದ್ದಾರೆ. ಮಹಾಂತಪ್ಪಆಲೂರೆಯವರು ಈ ಹಿಂದೆ ನಡೆದತಾಲೂಕಾ ಪಂಚಾಯತಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋತರೂಕೂಡಜನಸೇವೆಯಲ್ಲಿ ಮುಂದುವರಿಯಬೇಕುಎಂದು ನಿರ್ಧರಿಸಿ ರಾಜಕೀಯಚಟುವಟಿಕೆಯಲ್ಲಿ ನಿರಂತರವಾಗಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಶಾಸಕ ಬಿ ಆರ್ ಪಾಟೀಲ ಸ್ವಗ್ರಾಮವಾಗಿರುವುದರಿಂದತಮ್ಮಗ್ರಾಮದಲ್ಲಿಯಾರೇರಾಜಕೀಯ ಎದುರಾಳಿಗಳು ಇರಬಾರದುಎನ್ನುವುದು ಶಾಸಕ ಬಿ ಆರ್ ಪಾಟೀಲರ ಮತ್ತುಅವರಅಣ್ಣನ ಮಗ ಆರ್ ಕೆ ಪಾಟೀಲ ಮತ್ತುಅವರ ಬೆಂಬಲಿಗರ ಹಿತಾಸಕ್ತಿಯಾಗಿದೆ.
ತಾಲೂಕಾ ಪಂಚಾಯತಿಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗಿನಿಂದ ಶಾಸಕ ಬಿ ಆರ್ ಪಾಟೀಲ ಮತ್ತುಆರ್ ಕೆ ಪಾಟೀಲ ಹಾಗೂ ಅವರ ಬೆಂಬಲಿಗರು ಮಹಾಂತಪ್ಪಆಲೂರೆಯವರಮೇಲೆ ಹಗೆತನ ಸಾಧಿಸುತ್ತಿದ್ದರುಎಂದು ಪ್ರಕರಣದ ಎಳೆಯನ್ನು ಬಿಚ್ಚಿಟ್ಟರು.
ಧನಲಕ್ಷ್ಮೀ ಪತ್ತಿನ ಸಹಕಾರ ಸಂಘದ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದ್ದ ಮಹಾಂತಪ್ಪಆಲೂರೆಯವರು ಮುಂದೆ ಬರಲಿರುವಜಿಲ್ಲಾ ಪಂಚಾಯತಿಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿದ್ದರುಇದನ್ನು ಸಹಿಸದ ಶಾಸಕ ಬಿ ಆರ್ ಪಾಟೀಲ, ಆರ್ ಕೆ ಪಾಟೀಲ ಸಂಚು ರೂಪಿಸಿ ವ್ಯವಸ್ಥಿತವಾಗಿ ಕೊಲೆ ಮಾಡಿಸಿದ್ದಾರೆ. ಆದ್ದರಿಂದಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಹಾಗೂ ಕುಟುಂಬದಯಜಮಾನನನ್ನು ಕಳೆದುಕೊಂಡು ನಿರ್ಗತಿಕರಾಗಿರುವಅವರಕುಟುಂಬದವರಿಗೆಸರ್ಕಾರದಿಂದ 50 ಲಕ್ಷ ಪರಿಹಾರಧನಒದಗಿಸಬೇಕುಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಆಳಂದ ತಾಲೂಕಿನತಾ.ಪಂ, ಜಿ. ಪಂ. ಕಚೇರಿಗಳಲ್ಲಿ ನಕಲಿ ಬಿಲ್ ಬರೆದು ಹಣ ಲೂಟಿ ಹೊಡೆಯಲಾಗುತ್ತಿದೆ. ನನ್ನಅವಧಿಯಲ್ಲಿ ಮಂಜೂರಾದ ಕಾಮಗಾರಿಗಳ ಹೆಸರು ಬದಲಾಯಿಸಿ ಕಾಮಗಾರಿ ಮಾಡಲಾಗುತ್ತಿದೆಅಲ್ಲದೇ ಹಿಂದಿನ ಗುತ್ತಿಗೆದಾರರ ಬಿಲ್‍ಗಳನ್ನು ಉದ್ದೇಶಪೂರ್ವಕವಾಗಿತಡೆ ಹಿಡಿಯಲಾಗುತ್ತಿದೆ. ಆಳಂದನಲ್ಲಿ ಬಿ ಆರ್ ಪಾಟೀಲ ನಾಮಕವಾಸ್ತೆ ಶಾಸಕರಾಗಿದ್ದುಅವರಅಣ್ಣನ ಮಗ ಆರ್ ಕೆ ಪಾಟೀಲ ಅಧಿಕಾರಿಗಳ ಪಿಡಿಒಗಳ ಸಭೆಕರೆಯುತ್ತಿದ್ದಾರೆಎಂದು ಆರೋಪಿಸಿದ್ದಾರೆ.