ಮಹಿಳೆಯರ ಸುರಕ್ಷತೆಗೆ ಒತ್ತು

ಬೆಂಗಳೂರು,ನ ೧೮- ಸ್ವಿಗ್ಗಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಕಾರ್ಯನಿರ್ವಾಹಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದೆ.
ಹೆಚ್ಚು ಸಂಖ್ಯೆಯ ಮಹಿಳೆಯರು ವಿತರಣಾ ಕಾರ್ಯನಿರ್ವಾಹಕರಾಗಿ ನಮ್ಮೊಂದಿಗೆ ಸೇರಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವು ಸತತವಾಗಿ ಪ್ರಯತ್ನಿಸುತ್ತಿದ್ದೇವೆ. 2016ರಲ್ಲಿ ನಮ್ಮ ವಿತರಣ ತಂಡವು ಮೊದಲ ಮಹಿಳೆಯನ್ನು ಸೇರಿಸಿಕೊಂಡ ಮೇಲೂ ನಮ್ಮ ಪ್ರಯಾಣ ನೇರ ದಾರಿಯಲ್ಲಿ ಸಾಗಿಲ್ಲ.
 
ಮಹಿಳಾ ಕಾರ್ಯನಿರ್ವಾಹಕರು ನಮ್ಮ ತಂಡವನ್ನು ಸೇರಿಕೊಳ್ಳುತ್ತಿದ್ದಂತೆಯೇ, ನಿಯಮಿತ ಪರಿಶೀಲನೆಗಳು ಮತ್ತು ಆಂತರಿಕ ಹಾಗೂ ಬಾಹ್ಯ ಲೆಕ್ಕ ಪರಿಶೋಧನೆಗಳು ಹೆಚ್ಚಿನ ಮಹಿಳೆಯರು ಸಂತೋಷದಿಂದ ಕೆಲಸ ಮಾಡುವುದನ್ನು ತಡೆಯುವ ಅಂಶಗಳು, ಅಂತರಗಳು ಯಾವುವು ಎಂಬುದನ್ನು ನಮಗೆ ತಿಳಿಸಿಕೊಟ್ಟವು. ನಮ್ಮ ಅಧ್ಯಯನಗಳನ್ನು ನಾವು ಅವಲೋಕನ ಮಾಡಿ, ವ್ಯವಸ್ಥಿತ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದೆವು. 2021ರಲ್ಲಿ ಮಹಿಳಾ ವಿತರಣಾ ಕಾರ್ಯ ನಿರ್ವಾಹಕರಿಗೆ ಪಾವತಿಸಿದ ಅವಧಿಯ ಸಮಯವನ್ನು ನೀಡಿದ ಮೊದಲ ವೇದಿಕೆಯಾಗಿ ಸ್ವಿಗ್ಗಿ ಹೆಸರು ಮಾಡಿತು. ನೈರ್ಮಲ್ಯದ ವಿಶ್ರಾಂತಿ ಕೊಠಡಿಗಳು ಮತ್ತು ವಾಹನಗಳ ಬಳಕೆ ಅವಕಾಶವನ್ನು ಒಳಗೊಂಡ ಪ್ರಾಯೋಗಿಕ ಉಪಕ್ರಮಗಳಿಗೆ ನಾವು ಚಾಲನೆ ನೀಡಿದೆವು.
 
 ಲಿಂಗ ಯಾವುದೇ ಇರಲಿ, ನಮ್ಮ ವಿತರಣಾ ಕಾರ್ಯನಿರ್ವಾಹಕರ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ. ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಆ್ಯಪ್ SOS ಬಟನ್ ಹೊಂದಿದ್ದು, ಅದು ಹಗಲಿರುಳೂ ಬೆಂಬಲವನ್ನು ಒದಗಿಸುತ್ತದೆ, ಅಗತ್ಯಾನುಸಾರ ಆಂಬ್ಯುಲೆನ್ಸ್, ಸ್ಥಳೀಯ ಪೊಲೀಸ್ ಠಾಣೆ ಅಥವಾ ಸ್ವಿಗ್ಗಿ ಸಹಾಯವಾಣಿಯೊಂದಿಗೆ ಕಾರ್ಯನಿರ್ವಾಹಕರನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದೆ.