ಮಹರ್ಷಿ ವಾಲ್ಮೀಕಿ, ಸರ್ದಾರ್ ವಲ್ಲಭಾಯ್ ಪಟೇಲ್ ಜಯಂತಿ

ರಾಯಚೂರು.ನ.೦೧-ನಗರದ ನವಯುಗ ಶಿಕ್ಷಣ ಸಂಸ್ಥೆ (ರಿ) ರಾಯಚೂರು ನವಯುಗ ಪದವಿ ಪೂರ್ವ ಕಾಲೇಜು ರಾಯಚೂರು, ನವಯುಗ ಪದವಿ ಮಹಾವಿದ್ಯಾಲಯ ರಾಯಚೂರು, ನವಯುಗ ಸಮಾಜಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯ ರಾಯಚೂರು ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ ೩೧-೧೦-೨೦೨೦ ರಂದು ಬೆಳಿಗ್ಗೆ ೯.೩೦ ಗಂಟೆಗೆ ಮಹರ್ಷಿ ವಾಲ್ಮೀಕಿ ಮತ್ತು ೧೪೫ನೇ ಸರ್ದಾರ್ ವಲ್ಲಬಾಯ್ ಪಾಟೇಲ್ ರವರ ಜನ್ಮದಿನಾಚರಣೆಯನ್ನು ಆಚರಿಸಿ ಸಿಹಿತಿಂದು ಸಂಭ್ರಮಿಸಲಾಯಿತು.
ಮಹರ್ಷಿ ವಾಲ್ಮೀಕಿ ಮತ್ತು ವಲ್ಲಭಾಯ್ ಪಟೇಲ್ ರವರ ಭಾವಚಿತ್ರಕ್ಕೆ ನವಯುಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಘ್ನೇಶ್ವರನ್ ರವರು ಹೂವಿನ ಹಾರವನ್ನು ಹಾಕಿ ವಂದಿಸಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಈರಣ್ಣ ಪೂಜಾರಿಯವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಂದಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯಅಥಿತಿಗಳಾಗಿ ನವಯುಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಘ್ನೇಶ್ವರನ್ ರವರು ಆಗಮಿಸಿದ ಭಾರತದ ಉಕ್ಕಿನ ಮನುಷ್ಯ, ಭಾರತದ ಮಾಜಿಉಪಪ್ರಧಾನಿ ಮಂತ್ರಿಗಳು ಮತ್ತು ಗೃಹಸಚಿವರಾದ ಸರ್ದಾರ್ ವಲ್ಲಬಾಯ್ ಪಟೇಲ್ ರವರು ಗುಜರಾತಿನ ನಡಿಯಾದ್ ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಎಂಬ ದಂಪತಿಗಳ ಉದರದಲ್ಲಿ ೩೧ ಅಕ್ಟೋಬರ್ ೧೮೭೫ರಲ್ಲಿ ಜನಿಸಿದರು. ಖೇಡಾ, ಬರ್ಸಾಡ್ ಮತ್ತು ಬಾಡೋಲಿ ಸತ್ಯಾಗ್ರಹಗಳಲ್ಲಿ ಭಾಗವಹಿಸಿದ್ದ ಪಟೇಲರು ಮಹಾನಾಯಕ ಎಂಬ ಗುಜರಾತಿ ಜನ ಮನ್ನಣೆ ಪಡೆದು ಸರ್ದಾರ್ ಎಂಬ ಬಿರುದು ಪ್ರಾಪ್ತವಾಯಿತು. ಭಾರತದಾದ್ಯಂತ ರಾಜಕೀಯ ದುರೀಣರ ಮೆಚ್ಚುಗೆಯನ್ನು ಗಳಿಸಿದರು. ೧೯೧೯ ರಿಂದ ೧೯೨೮ರವರೆಗೆ ಪಟೇಲರು ಅಸ್ಪೃಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಞಾನದ ವಿರುದ್ಧ ವ್ಯಾಪಕವಾದ ಸಾಮಾಜಿಕ ಹೋರಾಟ ನಡೆಸಿದ್ದರು, ಭಾರತದ ರಾಜಕೀಯ ಏಕೀಕರಣದಲ್ಲಿ ೫೬೫ ರಾಜರುಗಳು ಒಪ್ಪಿಕೊಂಡಿದ್ದವು ಆದರೆ ಕಾಶ್ಮೀರ, ಹೈದರಾಬಾದ್ ಹಾಗೂ ಜುನಾಘಡ ಭಾರತ ಏಕಿಕರಣಕ್ಕೆ ಒಪ್ಪಲಿಲ್ಲ ಆಗ ಅವುಗಳನ್ನು ಸದೆಬಡೆದು ಭಾರತ ಏಕಿಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಅದೇ ರೀತಿಯಾಗಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ರವಿರಾಜ್ ಡಿ ರವರು ಮಹರ್ಷಿ ವಾಲ್ಮೀಕಿ ರವರನ್ನು ಕುರಿತು ಮಾತನಾಡುತ್ತಾ ವಾಲ್ಮೀಕಿಯವರು ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯವರನ್ನು ಆದಿ ಕವಿ ಎಂದು ಕರೆಯಲಾಗಿದೆ. ವಾಲ್ಮೀಕಿ ಮೂಲನಾಮ ರತ್ನಾಕರ, ಇವರು ಬೇಡ ಜನಾಂಗಕ್ಕೆ ಸೇರಿದ್ದರು. ದಿನಾಲು ಕಾಡಿಗೆ ಬೇಟೆಯಾಡಲು ಹೋಗುತ್ತಿದ್ದನು. ಒಮ್ಮೆ ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಗಿ ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆವಣಿಯಾಯಿತು. ಇದನ್ನು ಬೇಧಿಸಿಕೊಂಡು ಹೊರಗಡೆ ಬಂದಿದ್ದರಿಂದ ಅವರನ್ನು ವಾಲ್ಮೀಕಿ ಎಂಬ ಹೆಸರು ಬಂದಿತು. ಇವರ ಆದರ್ಶವನ್ನು ನಾವೆಲ್ಲಾರೂ ಅನುಸರಿಸಬೆಕೆಂದು ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ನವಯುಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಘ್ನೇಶ್ವರನ್ ನವಯುಗ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ರವಿರಾಜ್ ಡಿ, ನವಯುಗ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಈರಣ್ಣ ಪೂಜಾರಿ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಗಳಾದ ಗೋವಿಂದರಾಜ್, ಉಪನ್ಯಾಸಕರುಗಳಾದ ಭೀಮಣ್ಣ ಗಂಗಾವರ, ಆಯಮ್ಮ ರಾಧಮ್ಮ ಮುಂತಾದವರು ಭಾಗವಹಿಸಿದ್ದರು.