ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆ

ಕೆಂಭಾವಿ :ಮಾ.4:ಬೇಟೆಯಾಡುವ ಕುಲ ಕಸುಬನ್ನೆ ಮಾಡಿಕೊಂಡಿರುವ ನಮ್ಮ ಸಮಾಜದ ಮಕ್ಕಳ ಕೈಯ್ಯಲ್ಲಿ ಚಾಕು ಚೂರಿ ಕೊಡದೆ ಪೆನ್ನು ಕೊಡುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಹಾಗೂ ನಗರ ಕುಡಿಯುವ ನೀರು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಬೃಹತ್ ಪ್ರಮಾಣದ ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ದ್ವೇಷ, ಅಸೂಯೆ, ಮೋಸ, ವಂಚನೆ ಬರುವ ಗುಣಗಳನ್ನು ಕಲಿದೆ ಉತ್ತಮ ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಎಂಬ ಮಹಾನ್ ಗ್ರಂಥವನ್ನು ನಮ್ಮ ದೇಶಕ್ಕೆ ಕೊಡುಗೆ ನೀಡಿದ್ದಾರೆ ರಾಮನ ಆದರ್ಶ ಗುಣಗಳು ಪ್ರತಿಯೊಂದು ಸಮಾಜಕ್ಕೆ ಮಾದರಿಯಾಗಿದೆ. ವಾಲ್ಮೀಕಿ ಮಹರ್ಷಿಗಳು ಪ್ರಾಚೀನ ಕಾಲದ ಪೌರಾಣಿಕ ಇತಿಹಾಸಕಾರರಾಗಿ ಖ್ಯಾತರಾದರೆ ಆಧುನಿಕ ಯುಗದಲ್ಲಿ ಸಿಂಧೂರ ಲಕ್ಷ್ಮಣ, ಬೇಡರ ಕಣ್ಣಪ್ಪ, ಏಕಲವ್ಯ ಮತ್ತು ಈ ಭಾಗದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರು ನಮ್ಮ ಸಮಾಜಕ್ಕೆ ಅತೀವ ಕೊಡುಗೆ ನೀಡಿದ್ದಾರೆ ಎಂದ ಅವರು ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡದ ವರ್ಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಬೊಮ್ಮಾಯಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಗುರು ಪಾಟೀಲ ಶಿರವಾಳ, ಪಟ್ಣಲ್ಲಿ ಇಂದು ಸ್ಥಾಪನೆಯಾದ ಶ್ರೀ ವಾಲ್ಮೀಕಿ ಮಹರ್ಷಿಗಳ ಮೂರ್ತಿ ಅತೀ ಸುಂದರವಾಗಿದ್ದ ಮನಸ್ಸಿಗೆ ಮುದ ನೀಡುತ್ತದೆ ಎಂದು ಹೇಳಿದರು. ಯುವ ಮುಖಂಡ ಅಮೂನರೆಡ್ಡಿ ಪಾಟೀಲ ಯಾಳಗಿ ಮಾತನಾಡಿದರು. ಗುರು ಹುಲಕಲ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು.
ರಾಜನಳ್ಳಿ ಗುರು ಪೀಠಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಗಳು, ಗೋಲಪಲ್ಲಿ ಶ್ರೀ ವಾಲ್ಮೀಕಿ ವರದಾನೇಶ್ವರ ಸ್ವಾಮಿಗಳು, ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು, ತೋಟದ ಮಾನ್ಯ ಪಟ್ಟದ ಶ್ರೀ ತೋಟಪ್ಪ ಪೂಜಾರಿ, ಮಾಳಹಳ್ಳಿಯ ಶ್ರೀ ಕೆಂಚಪ್ಪ ಪೂಜಾರಿ ಸಾನಿಧ್ಯ ವಹಿಸಿದ್ದರು. ಶಾಸಕ ಶರಣಬಸಪ್ಪಗೌಡ ದರ್ಶನಾಪೂರ, ರಾಜಾ ಹನುಮಪ್ಪ ನಾಯಕ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ, ದೇವೇಂದ್ರಪ್ಪಗೌಡ ಪಾಟೀಲ, ಸಿದ್ಧನಗೌಡ ಪೊಲೀಸ್ ಪಾಟೀಲ, ವಾಮನರಾವ ದೇಶಪಾಂಡೆ, ಲಿಂಗನಗೌಡ ಮಾಲಿಪಾಟೀಲ, ನಿಂಗನಗೌಡ ದೇಸಾಯಿ, ಹನುಮೆಗೌಡ ಮರಕಲ್, ಹಳ್ಳೆಪ್ಪ ಹವಾಲ್ದಾರ, ಪುರಸಭೆ ಸದಸ್ಯ ರಾಘವೇಂದ್ರ ಕವಾಲ್ದಾರ, ವಾಲ್ಮೀಕಿ ಸಮಾಜದ ಅಧ್ಯಕ್ಷ ಹಳ್ಳೆಪ್ಪ ಕವಾಲ್ದಾರ ಇದ್ದರು. ಡಾ. ಯಂಕನಗೌಡ ಪಾಟೀಲ ನಿರೂಪಣೆ ಮಾಡಿದರು, ಡಿ.ಸಿ. ಪಾಟೀಲ ಸ್ವಾಗತಿಸಿದರು, ನಂದಪ್ಪ ಕವಾಲ್ದಾರ ವಂದಿಸಿದರು.