ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ


ಚಿತ್ರದುರ್ಗ.ಅ.೩೧; ನಮ್ಮಲ್ಲೆರ ಜೀವನದಲ್ಲಿ ವಾಲ್ಮಿಕಿ ಮಹರ್ಷಿಗಳ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೆರೆ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮಿಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣದಲ್ಲಿ ಯಾವ ರೀತಿ ರಾಮ ರಾಜ್ಯವನ್ನು ಕಟ್ಟಿದರೋ ಆ ರೀತಿಯಲ್ಲಿ ನಾವುಗಳು ಕೂಡ ನಮ್ಮ ದೇಶವನ್ನು ರಾಮರಾಜ್ಯ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ಮಹಾನೀಯರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸಿಮೀತವಾಗಬಾರದು. ಆಚರಣೆಗಳ ಮೂಲಕ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಯತ್ತ ನಡೆಯಲು ಪ್ರೇರೇಪಣೆ ಆಗಬೇಕು ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭದ್ರಿನಾಥ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಾಣ ದರ್ಶನಂ ಮಹಾಕಾವ್ಯ ನಮ್ಮೆಲ್ಲರ ಜೀವನದ ಆದರ್ಶವನ್ನು ರೂಪಿಸಿಕೊಳ್ಳಲು ನಾಂದಿ ಆಗಿದೆ ಎಂದರು.
ಕೊವಿಡ್-೧೯ ರ ಹಿನ್ನೆಲೆಯಲ್ಲಿ ಈ ಭಾರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ ಅವರು ದೇಶದ ಪ್ರತಿಯೊಬ್ಬ ಪ್ರಜೆಯು ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆ ಮಾಡುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಜಿ., ಜಿ.ಪಂ.ಸಿಇಓ ಯೋಗೇಶ್ ಬಾಬು, ಎಡಿಸಿ ಸಂಗಪ್ಪ, ತಹಶಿಲ್ದಾರ್ ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು.ಇದಕ್ಕು ಮುನ್ನಾ ನಾಯಕ ಸಮಾಜ ಬಾಂಧವರು ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
೩೧ಡಿಪಿಹೆಚ್೩