ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ


ನರೇಗಲ್ಲ,ನ.1- ಮಹರ್ಷಿ ವಾಲ್ಮೀಕಿ ಅವರು ಮಹಾನ್ ತಪಸ್ವಿಗಳು ಹಾಗೂ ಶ್ರೇಷ್ಠರು. ಅವರ ಸಾಧನೆ ಹಾಗೂ ತ್ಯಾಗದಿಂದಲೇ ನಮಗೆಲ್ಲಾ ಇತಿಹಾಸದ ಅರಿವಾಗಿದೆ. ದೇಶದಲ್ಲಿ ನಮ್ಮ ಸಂಸ್ಕøತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ. ಮನುಷ್ಯರಾದವರು ಸಣ್ಣ ಪುಟ್ಟ ತಪ್ಪು ಮಾಡುವುದು ಸಹಜ, ತಾವು ಮಾಡಿದ ತಪ್ಪುಗಳನ್ನು ತಿದ್ದಿ ನಡೆದರೆ ವಾಲ್ಮೀಕಿಯಂತೆಯೇ ಶ್ರೇಷ್ಠರಾಗಿ ಬದುಕು ಸಾಗಿಸಬಹುದು ಎಂದು ಪ.ಪಂ ಮಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯಿತಿಯ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದ ಅವರು ಜಗತ್ತನ್ನೇ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಿದವರು ಮಹರ್ಷಿ ವಾಲ್ಮೀಕಿ. ಸಂಸ್ಕೃತದಲ್ಲಿ ಮೊಟ್ಟ ಮೊದಲು ರಚಿಸಿರುವ ರಾಮಾಯಣವೆಂಬ ಮಹಾಗ್ರಂಥದ ಚರಿತ್ರೆಯನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಪರಿವರ್ತನಾ ಜೀವನ ನಡೆಸುವ ಮೂಲಕ ಗುರಿ ಸಾಧನೆಗೆ ಮುಂದಾಗಬೇಕು. ಅವರು ರಚಿಸಿರುವ ಗ್ರಂಥಗಳು ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಮಹಾಪುರಷ ಎನಿಸಿಕೊಂಡಿದ್ದಾರೆ. ವಾಲ್ಮೀಕಿಯವರ ಕಾಯಕ ವಿಶ್ವಕ್ಕೆ ಮಾದರಿಯಾಗಿದೆ. ಮನುಷ್ಯ ಉತ್ತಮ ನಾಗಕರಿಕನಾಗಲು ಮಹರ್ಷಿ ವಾಲ್ಮೀಕಿಯವರ ಜೀವನ ನಮಗೆ ಪ್ರೇರಣೆ ನೀಡುತ್ತದೆ. ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು.
ರಾಮಚಂದ್ರ ಕಜ್ಜಿ, ಮಲ್ಲಪ್ಪ ಮಾರನಬಸರಿ, ಶಂಕ್ರಪ್ಪ ದೊಡ್ಡಣ್ಣವರ, ಆರೀಫ್ ಮಿರ್ಜಾ, ಲಕ್ಷ್ಮಣ ಕೆ, ಪಾಡುರಂಗ ರಾಂಪೂರ, ರಮೇಶ ಹಲಗಿಯವರ, ಸಿ.ಡಿ. ದೊಡ್ಡಮನಿ, ಎಸ್.ಎ. ಜಕ್ಕಲಿ, ಎಂ.ಎ. ಕಾತರಕಿ, ಅಶೋಕ ಹೊಸಳ್ಳಿ, ಪ್ರಶಾಂತ ಯಾದವಾಡ, ಕಳಕಪ್ಪ ತಳವಾರ, ಕೃಷ್ಣಪ್ಪ ಜುಟ್ಲ, ಶೇಖಪ್ಪ ಹೊನ್ನವಾಡ, ನಜ್ಮಾ ಬೇಲೇರಿ, ನಿರ್ಮಾಲ ಕಡೆತೋಟದ, ಶರಣಪ್ಪ ಮ್ಯಾಗೇರಿ, ಮಹಾದೇವಪ್ಪ ಮ್ಯಾಗೇರಿ, ರಮೇಶ ಕುಷ್ಟಗಿ, ಬಸವರಾಜ ಮಾಳವಾಡ, ಸಂಜೀವಕುಮಾರ ಗುಡಿಮನಿ, ಮುತ್ತಪ್ಪ ಹೂಗಾರ ಸೇರಿದಂತೆ ಸಿಬ್ಬಂದಿಗಳು ಇದ್ದರು.