ಮಹರ್ಷಿ ವಾಲ್ಮೀಕಿ ಇಡೀ ವಿಶ್ವಕ್ಕೆ ದಾರಿದೀಪ

ಹುಮನಾಬಾದ:ಅ.31:ಆದಿ ಕವಿ ವಾಲ್ಮೀಕಿ ಶ್ರೇಷ್ಠ ಚಿಂತನಕಾರ, ಆದರ್ಶ ಸಾಹಿತ್ಯಕಾರ, ಇತನಿಂದ ರಚಿಸಲ್ಪಟ್ಟ ರಾಮಾಯಣ ಗ್ರಂಥ ಇಡೀ ವಿಶ್ವಕ್ಕೆ ದಾರಿದೀಪವಾಗಿದೆ ಎಂದು ಗಂಗಾಮತ ಕೋಲಿ ಕಬ್ಬಲಿಗ ತಾಲೂಕು ಸಮಿತಿಯ ಅಧ್ಯಕ್ಷರಾದ ನಾಗಭೂಷಣ ಸಂಗಮ ಪಟ್ಟಣದ ಎಪಿಎಂಸಿ ಎದುರುಗಡೆಯಿರುವ ತಾಲೂಕು ಸಮಿತಿ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಮಾತನಾಡುತ್ತಾ ತಿಳಿಸಿದರು. ವಾಲ್ಮಕೀ ರಚಿಸಿದ ರಾಮಾಯಣ ಗ್ರಂಥದಲ್ಲಿ ಮಾನವ ಜನಾಂಗದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ. ಮಾನವರೆಲ್ಲರು ಇದನ್ನು ಅರಿತು ಬಾಳಬೇಕು. ವಿಶ್ವ ಶಾಂತಿಯ ಮೂಲ ಮಂತ್ರ ರಾಮಾಯಣ ಗ್ರಂಥದಲ್ಲಿ ಅಡಗಿದೆ ಎಂದರು. ರಾಮಾಯಣ ಗ್ರಂಥದ ಮೂಲ ಉದ್ಧೇಶ ವಿಶ್ವ ಶಾಂತಿಯಾಗಿದೆ. ಧರ್ಮ ಮತ್ತು ಅಧರ್ಮಗಳ ಸಂಘರ್ಷ, ಮಾನವಿಯ ಮೌಲ್ಯಗಳ ಚಿಂತನೆ, ಸಂಸ್ಕøತಿ ಇವುಗಳನ್ನು ಒಳಗೊಂಡಿದೆ. ಸಮಾಜ ಬಾಂಧವರು ಒಗ್ಗಾಟ್ಟಾಗಿ ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನ ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳಬೇಕಾಗಿದೆ. ನಾನು ದುರ್ಬಲ, ನನ್ನಿಂದೇನು ಆಗದು ಎಂಬ ಕೀಳರಿಮೆ ಬಿಟ್ಟು ಶೃದ್ಧೆ, ಛಲ, ಸ್ಪಷ್ಟವಾದ ಗುರಿ ಮುಂತಾದ ಗುಣಗಳನ್ನು ಅಳವಡಿಸಿಕೊಂಡರೆ ಎಲ್ಲರೂ ಆಗಬಹುದು ವಾಲ್ಮೀಕಿ ಎಂದು ನುಡಿದರು. ಈ ಸಂದರ್ಭದಲ್ಲಿ ದತ್ತಾತ್ರೇಯ ಮಹಾರಾಜ ಆಶೀರ್ವಚನ ನೀಡಿ ಮಾತನಾಡಿದರು. ವೈಜಿನಾತ ಕಣಜಿ, ವೀರಣ್ಣಾ ಉಪಾರ ಹಳ್ಳಖೇಡ (ಕೆ) ವಾಡಿ, ಬಸವರಾಜ ಸದಲಾಪೂರೆ, ವೀರಣ್ಣಾ ಹಲವಾಯಿ, ನಾಗರಾಜ ಕೇಂಪೆನೂರ್, ಶಂಕರ ಡಾಕುಳಗಿ, ಬಲರಾಮ, ಕೃಷ್ಣ, ಮಂಜುನಾಥ ಶ್ರೀಂಗಾರೆ, ಸಂಜುಕುಮಾರ ಗಡವತಿ, ವಿನೋದಕುಮಾರ ಚಿನಕೇರಾ, ಜ್ಞಾನಶ್ವರ, ನಾಗೇಶ ವಾಂಜರಿ, ರಘು ಉಪಸ್ಥಿತರಿದ್ದರು.